ಮಹಾಪ್ರಾಣಗಳು ಮತ್ತು ಜಾತ್ಯತೀತತೆ

tumblr_m8vgq14d9y1qec6f4ಮಹಾಪ್ರಾಣಗಳು ನಿಜಕ್ಕೂ ’ಜಾತ್ಯತೀತ’ವಾಗಿದ್ದಿದ್ದರೆ ಅವುಗಳನ್ನು ಬರವಣಿಗೆಯಿಂದ ಕಯ್ ಬಿಡುವುದನ್ನು ’ಬ್ರಾಹ್ಮಣದ್ವೇಶ’ ಎಂದು ಯಾರೂ ಕರೆಯುತ್ತಿರಲಿಲ್ಲ, ’ಎಲ್ಲಾ ಜಾತಿಗಳ ದ್ವೇಶ’ ಎಂದು ಕರೆಯುತ್ತಿದ್ದರೇನೋ.

ನಿಜಕ್ಕೂ ಯಾವ ದ್ವೇಶದಿಂದಲೂ ’ಎಲ್ಲರಕನ್ನಡ’ ಹುಟ್ಟಿಕೊಂಡಿಲ್ಲ, ಕನ್ನಡಿಗರೆಲ್ಲರ ಮಾಡುಗತನದ ಬಗೆಗಿನ ಕಾಳಜಿಯಿಂದ ಹಾಗೂ ನಿಜವಾದ ಜಾತ್ಯತೀತ ಮನಸ್ತಿತಿಯಿಂದ ಹುಟ್ಟಿಕೊಂಡಿದೆ. ಆ ಮನಸ್ತಿತಿ ಇದೆಯೆಂದು ನಾವು ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಕಯ್ಯಲ್ಲೂ ಜಾತ್ಯತೀತ ಕನ್ನಡನಾಡನ್ನು ಕಟ್ಟಬೇಕು.

’ಎಲ್ಲರಕನ್ನಡ’ ಚಳುವಳಿಯಲ್ಲಿ ಬರವಣಿಗೆಯನ್ನೇ ಎಲ್ಲ ಜಾತಿಗಳ ಒಡನಾಟ ಮತ್ತು ಒಡದುಡಿಮೆಯ ನೆಲೆಯಾಗಿ ಕಾಣಲಾಗುತ್ತದೆ. ಆದುದರಿಂದ ಬರವಣಿಗೆಯ ಪರಂಪರೆಯಲ್ಲಿ ಉಳಿಸಿಕೊಳ್ಳುವುದನ್ನು ಉಳಿಸಿಕೊಂಡು ಮಿಕ್ಕಿದುದನ್ನು ಹಳಮೆಯಲ್ಲೇ ಬಿಟ್ಟು ಮುಂದುವರೆಯದೆ ಬೇರೆ ದಾರಿಯಿಲ್ಲ. ಇದರಿಂದ ಕಸಿವಿಸಿ ಪಟ್ಟುಕೊಳ್ಳುವವರು ತಮ್ಮನ್ನು ತಾವು ಜಾತ್ಯತೀತರೆಂದು ತಿಳಿದಿದ್ದರೂ ಆ ಜಾತ್ಯತೀತತೆಯನ್ನು ತಮ್ಮ ಕೆಲಸದಲ್ಲಿ ತೋರಿಸಲು ಹಿಂಜರಿಯುತ್ತಿರುವರಶ್ಟೆ.

ಆದರೆ ಆ ಜಾತ್ಯತೀತತೆಯನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುವುದಾದರೆ ಇಂದಲ್ಲ ನಾಳೆ ‘ಎಲ್ಲರಕನ್ನಡ’ವನ್ನು ಬೆಳೆಸಲು ಅವರೇ ಮುಂದಾಗುತ್ತಾರೆ ಎಂದು ನನಗೆ ನೂರಕ್ಕೆ ನೂರರಶ್ಟು ನಂಬಿಕೆಯಿದೆ – ಏಕೆಂದರೆ ಕೆಲವೇ ವರುಶಗಳ ಹಿಂದೆ ನಾನೂ ಅವರಂತಿದ್ದೆ. ಆಗ ನನಗೆ ಜಾತ್ಯತೀತತೆ ಒಳ್ಳೆಯದೆಂದು ಗೊತ್ತಿತ್ತೇ ಹೊರತು ಕಯ್ಯಾರೆ ಜಾತ್ಯತೀತತೆಯ ಕನಸನ್ನು ನನಸು ಮಾಡುವುದು ಹೇಗೆಂದು ತಿಳಿದಿರಲಿಲ್ಲ. ಈಗ ‘ಎಲ್ಲರಕನ್ನಡ’ದಿಂದ ಆ ಕನಸು ನನಸಾಗುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇನೆ.

(ಚಿತ್ರ: http://media.tumblr.com/tumblr_m8vgq14d9y1qec6f4.jpg)

ಕಿರಣ್ ಬಾಟ್ನಿ.Categories: ನಡೆ-ನುಡಿ

ಟ್ಯಾಗ್ ಗಳು:, , , , ,

1 reply

  1. ಅಹುದಹುದು. “ಎಲ್ಲರ ಕನ್ನಡ”ವು ಜಾತ್ಯತೀತ, ಮತಾತೀತ, ಧರ್ಮಾತೀತವಾಗಬೇಕು. ಒಟ್ಟಿನಲ್ಲಿ ಸಮಾಜದಲ್ಲಿ ತೀರಾ ಕೆಳಮಟ್ಟದಲ್ಲಿರುವ ಮನುಜನ “ನಿಜದನಿ” ಆಗಬೇಕು! ಸುಮ್ಮನೆ “ಸುಭಟರ್ಕಳ್, ಕವಿಗಳ್, ಸು ಪ್ರಭುಗಳ್, ಚೆಲ್ವರ್ಕಳ್, ಅಭಿಜನರ್ಕಳ್, ಗುಣಿಗಳ್, ಅಭಿಮಾನಿಗಳ್, ಅತ್ಯುಗ್ರರ್, ಗಂಭೀರ ಚಿತ್ತರ್, ವಿವೇಕಿಗಳ್, ನಾಡವರ್ಗಳ್” (ಕ.ರಾ.ಮಾ. ೨-೨೮) ಎನ್ನುತ್ತಾ ಕೂತರೆ ಏನೂ ದಕ್ಕುವುದಿಲ್ಲ.

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s