ನೀ ಬಂದು ನಿಂತಾಗ

[wpvideo RyjGkHg4]

ನೀ ಬಂದು ನಿಂತಾಗ ಎಲ್ಲಯ್ಯ ಕೇಳು
ಕಳಚಿತಾ ತೊದಲು ಇಂಗಿತಾ ನಡುಕ || ಪ ||

ನಿನ್ನ ಪೊಗಳಲು ಬಾಯಂಜಿತ್ತು ತೊದಲಿ
ನಿನ್ನ ಬರೆಯಲು ಕಯ್ ಬೆದರಿತ್ತು ನಡುಗಿ
ಅವರಂತೆ ನುಡಿಯದೊಡೆ ಹೊಲಸೆಂದು ನಂಬಿ
ಅವರಂತೆ ಬರೆಯದೊಡೆ ಕೆಡುಕೆಂದು ಕಲಿತು || 1 ||

ನಾನೇನ ನುಡಿಯುವುದು ಅವರೇನ ಕಲಿಸುವುದು
ನಾನೇನ ಬರೆಯುವುದು ಅವರೇನ ತಿದ್ದುವುದು
ನುಡಿಸಿ ಬರೆಸುತಲೆನ್ನ ನಿನ್ನೆಡೆಗೆ ನೀನೇ
ಕರೆಯುತಿರಲವರಿವರ ಹಂಗೇತಕಯ್ಯ || 2 ||

ನೀ ನನ್ನ ನಾಲಿಗೆಯೊಳ್ ನೀ ನನ್ನ ಕಯ್ಯೊಳ್
ನಿಂತೆನ್ನ ಮುಂತಳ್ಳಿ ಆಡಿಸುತಿರಾಟ
ಅವರಿವರ ಕಟ್ಟಲೆಗೆ ನಾನಂಜಲುಂಟೇ
ಕಟ್ಟಲೆಗಳಾಚೆಗಿನ ಎಲ್ಲರಾ ತಂದೆ || 3 ||

ಕಿರಣ್ ಬಾಟ್ನಿ.

(ಓಡುತಿಟ್ಟದಲ್ಲಿರುವ ಚಿತ್ರ: http://www.oneeyeland.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Maaysa says:

    ಯಾವುದರ ಬಗ್ಗೆಯೀ ಕವನ?

  2. ಮಾಯ್ಸ,
    ನನಗನ್ನಿಸಿದ ಹಾಗೆ ‘ಎಲ್ಲಯ್ಯ’ ಎಂಬುದು ಕಿರಣರು ದೇವರನ್ನು ಕರೆವ ಬಗೆ. ಅವರಿಲ್ಲಿ ಎಲ್ಲಯ್ಯನನ್ನ ಎಲ್ಲರ-ಕನ್ನಡಕ್ಕೂ, ತಮ್ಮನ್ನು ಕನ್ನಡಿಗರಿಗೂ ಉಪಮೆಯಾಗಿ ಬಳಸಿದ್ದಾರೆ ಅನಿಸುತ್ತದೆ.

    • Maaysa says:

      ಧನ್ಯವಾದ, ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ ಅವರೇ . ಈಗ ಕವನ ತುಸು ಅರ್ಥವಾಯ್ತು.

ಅನಿಸಿಕೆ ಬರೆಯಿರಿ: