ಎತ್ತಿಗೇನು ಒಂದಿಶ್ಟು ಹುಲ್ಲು ಸಿಕ್ಕರಾಯ್ತು

Picture 166

ಅವನು ತನ್ನತನ, ಇವನು ತನ್ನ ಮನ,
ಹೇರುತಿರಲು ಹತ್ತು..
ಕನ್ನಡಿಗನು ಅದರರಿವು ಇಲ್ಲದೆಯೇ
ಹೊರುತಲಿರುವ ಎತ್ತು.

ಎತ್ತಿಗೇನು ಒಂದಿಶ್ಟು ಹುಲ್ಲು
ದಿನದಲ್ಲಿ ಸಿಕ್ಕರಾಯ್ತು,
ದುಡಿಸುವವನು ಯಾರಾದರೇನು
ಹಸಿರೆಲ್ಲ ಅವನದಾಯ್ತು.

ಕತ್ತಿನಲ್ಲಿ ಬಲವಿಲ್ಲದಾಗ
ನೆನಪಾಗುತಾನೆ ಕಟುಕ,
ಕಡಿವಮುನ್ನ ಕಯ್ಯನ್ನು ಮುಗಿದು
ಕೊಡುತಾನೆ ಒಂದು ಗುಟುಕ.

ದುಡಿಸಿಕೊಂಡವನಿಗಿಂತ ಕಟುಕನೆ
ವಾಸಿಯಗುತಾನೆ,
ಕಡಿಯ ಬರುವವನು ಸತ್ಯವಾಗಿ
ಮಚ್ಚನ್ನೇ ತೋರುತಾನೆ.

ಹುಲ್ಲ ಕೊಟ್ಟು ಸಾಕುವೆನು ಎನುತ
ನಮ ರಕ್ತವೆಲ್ಲ ಹೀರಿ,
ದಣಿದ ಮೇಲೆ ತೋರಿಸಿಹನಲ್ಲ
ಆ ಕಟುಕನೆಡೆಗೆ ದಾರಿ…!

ವಲ್ಲೀಶ್ ಕುಮಾರ್

(ಚಿತ್ರ: http://pravi-manadaaladinda.blogspot.in/)

ಇವುಗಳನ್ನೂ ನೋಡಿ

5 ಅನಿಸಿಕೆಗಳು

 1. ವಲ್ಲೀಶ್, ನಿಮ್ಮ ಕವಿತೆ ನೋಡಿ ನನಗೆ ನಾನು ನೋಡಿದ ಒಂದು ಸಿನೆಮಾದ ನೆನಪಾಯಿತು. ಅದರಲ್ಲಿ ಹೋರಾಟ ಮನೋಬಾವದ ಯುವಕರ ಗುಂಪೊಂದು ಕಟ್ಟಲೆಮೀರಿ ಹಸುಗಳನ್ನು ಕೂಡಿಹಾಕಿ ಸಾಕಿಕೊಂಡಿದ್ದ ಹಟ್ಟಿಗೆ ಹೋಗಿ ದನಗಳನ್ನು ಬಿಡುಗಡೆ ಮಾಡಲು ಯತ್ನಿಸುತ್ತಾರೆ. ದನಗಳ ಕೊರಳಿನ ಹಗ್ಗಗಳನ್ನು ಬಿಚ್ಚಿ ಹಟ್ಟಿಯ ಬಾಗಿಲನ್ನು ತೆರೆದುಬಿಡುತ್ತಾರೆ. ಹಟ್ಟಿಗೇ ಒಗ್ಗಿಹೋದ ಹಸುಗಳು ಏನೂ ಮಾಡಲು ತೋಚದೇ ಅಲ್ಲೇ ನಿಂತಿರುತ್ತವೆ! ಕನ್ನಡಿಗರು ಸಾಕಿದ ಹಸು, ಬೆಕ್ಕುಗಳೋ ಇಲ್ಲಾ ಬಿಡುಗಡೆ ಬಯಸುವ ಸಾರಂಗ, ಹುಲಿ-ಸಿಂಹಗಳೋ ನೋಡಬೇಕು?!

 2. Maaysa says:

  ಕವನಕ್ಕೆ ಕನ್ನಡದಲ್ಲಿ ಸುವ್ವಿ/ಸುವ್ವಾಲೆ/ಹಾಡು ಎಂಬ ಪದಗಳಿವೆ .

  ದಯವಿಟ್ಟು ಕವನಗಳನ್ನು ಒಂದೇ ಗುಂಪಿಗೆ ಸೇರಿಸಿ ಹೊರ-ತನ್ನಿ.

 3. rohithbr says:

  ಈ ಕವನ ಚೆನ್ನಾಗಿ ಮೂಡಿಬಂದಿದೆ ವಲ್ಲೀಶ್. ಇದು ನಾಡು ಎಂಬ ಗುಂಪಿನಲ್ಲಿ ಬರಬಹುದು ಎಂದು ಬಾವಿಸಿದ್ದೆ. ನಾಡಿನ ಏರ‍್ಪಾಟು ಅಶ್ಟು ಹೊಂದಿಕೊಂಡಿದೆ ಇದರಲ್ಲಿ 🙂

 4. ನಿಮ್ಮ ನಿನ್ನುಣಿಕೆಗೆ ನನ್ನೀ…

  ಮತ ಕೇಳುವ ಸಮಯದಲ್ಲಿ ನಮ್ಮ ತಲೆ ಸವರಿ, ಗೆದ್ದ ನಂತರ ನಮ್ಮನ್ನು ಹಯ್-ಕಮಾಂಡ್ ಅನ್ನುವ ಕಟುಕನ ಕಯ್ಗೆ ಕೊಟ್ಟುಬಿಡುತ್ತಾರೆ ನಮ್ಮ ಮುಂದಾಳುಗಳು! ಅದೇ ಈ ಕವನಕ್ಕೆ ಪ್ರೇರಣೆ!

 5. ತುಂಬಾ ಚೆನ್ನಾಗಿದೆ ವಲ್ಲೀಶ್..

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: