ಮತ್ತೊಂದು ಬಾಂಬು, ಮತ್ತೊಮ್ಮೆ ದೆಹಲಿಯ ಮಾತು

Image

ಚಿತ್ರ: ದಿ ಹಿಂದೂ

ಇವತ್ತು ಬೆಳಗ್ಗೆ 10:45 ಹೊತ್ತಿಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಒಂದು ಬಾಂಬ್ ಸಿಡಿತವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸಿನವರು ಒಬ್ಬರಮೇಲೊಬ್ಬರು ಮಣ್ಣೆರಚುತ್ತಿರುವ ನಡುವೆಯೇ ದೆಹಲಿಯಿಂದ ಎನ್.ಎಸ್.ಜಿ. ತಂಡ ಬರಲಿದೆ, ಬಂದು ಎಲ್ಲವನ್ನೂ ಕಾಪಾಡಲಿದೆ ಎನ್ನುವಂತೆ ಸುದ್ದಿಯಾಗಿದೆ. ಈ ಎನ್.ಎಸ್.ಜಿ. ತಂಡ ಯಾಕೆ ಬೇಕು? ಒಂದು ಕೆ.ಎಸ್.ಜಿ. ತಂಡವನ್ನು ಕರ‍್ನಾಟಕ ಸರ‍್ಕಾರವೇ ಇಟ್ಟುಕೊಂಡು ಬೆಂಗಳೂರು ಮತ್ತಿತರ ಊರುಗಳ ಸುರಕ್ಶತೆಯನ್ನು ಕಾಪಾಡಲು ಸಾದ್ಯವಿಲ್ಲವೇ? ಕಂಡಿತ ಸಾದ್ಯವಿದೆ, ಆದರೆ ಇದರಲ್ಲಿ ತನ್ನ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳಲು ಆಗದೆ ಹೋದರೆ ಬಾರತ ಸರ‍್ಕಾರ ಇದ್ದಾದರೂ ಏನು ಉಪಯೋಗ ಎಂಬ ಕೇಳ್ವಿ ಏಳುತ್ತದಲ್ಲ, ಅದಕ್ಕೇ ಅದನ್ನು ದೆಹಲಿಯ ತೆಕ್ಕೆಯಲ್ಲಿ ಇಟ್ಟಿರುವಂತಿದೆ. ಆದರೆ ಈ ನಾಟಕವೆಲ್ಲ ಇನ್ನು ಮುಂದೆ ನಡೆಯುವುದಿಲ್ಲ ಎನ್ನುವುದಂತೂ ದಿಟ.

ಕಿರಣ್ ಬಾಟ್ನಿ.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: