ಬಾನ್ಗಲ್ಲ ಬಗ್ಗೆ ನಿಮಗೆಶ್ಟು ಗೊತ್ತು?

BLACKBEUTY (1)

ಈ ಕಲ್ಲು ಎಲ್ಲಿಂದ ಬಿತ್ತು ಎನ್ನುವುದಕ್ಕೆ ಉತ್ತರ ಮಂಗಳ ಗ್ರಹ, ಯಾರು ಎಸೆದದ್ದು ಎನ್ನುವುದಕ್ಕೆ ಉತ್ತರವಿಲ್ಲ ! ಯಾಕೆ ಬಿತ್ತೆಂಬುದಕ್ಕೆ ಸೆಳೆತ/ಗುರುತ್ವಾಕರ‍್ಶಣೆ ಕಾರಣವೆನ್ನಬಹುದು. ಈ ಬಾನ್ಗಲ್ಲು/ಉಲ್ಕೆ ಆಪ್ರಿಕಾದ ಸಹಾರ ಮರುಬೂಮಿಯಲ್ಲಿ  ದೊರೆತದ್ದು. ಇದರ ಹೆಸರು NWA7034 (north-west africa) ಮತ್ತು ಇದಕ್ಕೆ ಇಟ್ಟ ಅಡ್ಡ ಹೆಸರು – ಕಪ್ಪು ಚೆಲುವೆ (ಬ್ಲಾಕ್ ಬ್ಯೂಟಿ). ಈ ಬಾನ್ಗಲ್ಲು ಬೂಮಿಯದ್ದೂ ಅಲ್ಲಾ, ಉಳಿದ ಗ್ರಹಗಳದ್ದೂ ಅಲ್ಲಾ, ಅದು  ಮಂಗಳ ಗ್ರಹದ್ದೇ ಅಂತಾ ಇಶ್ಟು ಸರಿಯಾಗಿ ಹೇಗೆ ಹೇಳಬಹುದು ಅಂತೀರಾ ? ಬನ್ನಿ ನೋಡೋಣ ಏನಿದರ ಗುಟ್ಟೆಂದು.

ಈ  ಕಪ್ಪು ಚೆಲುವ ಕಲ್ಲಿನ ಬಗ್ಗೆ ತಿಳಿಯಲು ಬಾನ್ಗಲ್ಲ ಅರಿಗರು (scientist) ಮುಂದಾದರು. 2011 ರಲ್ಲಿ ದೊರೆತ ಈ ಕಲ್ಲು ಸುಮಾರು 320 ಗ್ರಾಂ ತೂಗುತ್ತಿತ್ತು ಮತ್ತು ಇದು ಉರಿಗಲ್ಲು (ಬೆಸಲ್ಟಿಕ್) ಗುಂಪಿಗೆ ಸೇರುವ ಬಾನ್ಗಲ್ಲು ಎಂದು ಗುರುತಿಸಲಾಯಿತು. ಆದರೆ ಅರಿಗರ ಮುಂದಿದ್ದ ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ಇದರ ನೆಲೆ ಕಂಡುಹಿಡಿಯುವುದು.

ಈ ಕಲ್ಲು ಎಲ್ಲಿಂದ ಬಂತು ಅನ್ನುವುದಕ್ಕೆ ಮುಂಚೆ ಇದು ಎಶ್ಟು ಹಿಂದಿನದು ಅಂತಾ ಅರಿಗರು ತಿಳಿದುಕೊಂಡರು. ಅವರ ಎಣಿಕೆಯಂತೆ ಈ ಕಲ್ಲು ಸರಿಸುಮಾರು 2.1 ಲಕ್ಶ ವರುಶಗಶ್ಟು ಹಿಂದಿನದು. ಇಶ್ಟು ವರುಶಗಳ ಹಿಂದೆ ನಮ್ಮ ಬೂಮಿಯಲ್ಲಿ ಬೆಟ್ಟ-ಗುಡ್ಡಗಳಾಗುತ್ತಿದ್ದ, ದೊಡ್ಡ ದೊಡ್ಡ ಕಡಲುಗಳು ಉಂಟಾಗುತ್ತಿದ್ದ, ಸ್ಪಾಂಜ್ ಗಳು, ಪಾಚಿಗಳು, ಹುಳುಗಳೆಂಬ ಉಸಿರುಗಗಳು ಹುಟ್ಟಿಕೊಳ್ಳುತ್ತಿದ್ದ ಪ್ರಿಕೆಂಬ್ರಿಯನ್ ಎಂಬ ಕಾಲವಿತ್ತು ಹಾಗೆಯೆ ಮೊದಲ ಮೀನುಗಳು, ಹಳೆಯ ಕಪ್ಪೆಗಳು, ಕಲ್ಲಿದ್ದಲು ಪದರಗಳು, ಹಾರುವ ಹುಳುಗಳು, ಹಲ್ಲಿಯಂತ ಉಸಿರುಗಳು ಹುಟ್ಟಿಕೊಳ್ಳಲ್ಲು ಆಗತಾನೇ ಶುರು ಮಾಡಿದ್ದ ಪೇಲಿಯೊ-ಪ್ರೊಟಿರೊಜೊಯಿಕ್ ನಡುವಣ ಕಾಲ ಅನ್ನುವುದು ಅರಿಗರಿಗೆ ತಿಳಿದಿತ್ತು. ಈ ಹೊತ್ತಿನಲ್ಲಿಯೇ ನೆಲದಲ್ಲಿ ಉಸಿರುಗಾಳಿಯ ವಾತಾವರಣ ಉಂಟಾಗುತ್ತಿತ್ತು.

ಆದರೆ ನೆಲದಲ್ಲಿ ಈಗ ದೊರೆತಿರುವ ಕಲ್ಲಿನಂತಹ ವಸ್ತು ಮಯ್ದಾಳುವಂತ ಪಾಡು ಆಗಿನ್ನೂ ಇದ್ದಿಲ್ಲ. NWA 7034 ರ ರಾಸಾಯನಿಕ ಹಾಗೂ ಹೊರಮಯನ್ನು ಒರೆಗೆಹಚ್ಚಿದಾಗ ಅದರಲ್ಲಿ ಸಿಮೆಂಟಿನ ಕೆಲ ಕುರುಹುಗಳಾದ ಉರಿಗಲ್ಲು (ಬೆಸಾಲ್ಟ್), ಪೆಲ್ಡ್ಸ್ ಪರ್‍ ಮತ್ತು ಪಯ್ರೋಕ್ಸಿನ್ ಹೆಚ್ಚಿಗೆ ಇರುವುದು ಕಂಡುಬಂದಿತು. ಉರಿಗಲ್ಲುಗಳ (ಬೆಸಾಲ್ಟ್) ಲಾವಾ ತಣ್ಣಗಾದಾಗ ಈ ಬಗೆಯ ಕಲ್ಲುಗಳು ಆಗುವ ಸಾದ್ಯತೆ ಹೆಚ್ಚು. ಮಂಗಳದಲ್ಲಿ ಸುಮಾರು 2.1 ಲಕ್ಶ ವರುಶಗಳ ಹಿಂದೆ ಇದೇ ಬಗೆಯ ಲಾವಾ ಹರಿಯುತ್ತಿತ್ತು ಎಂದು ಅರಿಗರು ತಿಳಿದುಕೊಂಡಿದ್ದರು, ಜೊತೆಗೆ ಈ ಕಲ್ಲಿನ ಆಯ್ಸೋಟೋಪ ರಾಸಾಯನಿಕ ಗುಣ ಬೂಮಿಗಿಂತ ಮಂಗಳ ಗ್ರಹಕ್ಕೆ ಹೆಚ್ಚು ಹೋಲುತಿತ್ತು ಹಾಗಾಗಿ ಈ ಕಲ್ಲು ಮಂಗಳ ಗ್ರಹದ್ದು ಎಂದು ಅರಿಗರು ತೀರ‍್ಮಾನಕ್ಕೆ ಬಂದರು.

ಈ ಕಪ್ಪು ಚೆಲುವ ಕಲ್ಲಿನಲ್ಲಿ ಇತರ ಮಂಗಳ ಬಾನ್ಗಲ್ಲುಗಳಿಗಿಂತ ಹತ್ತು ಪಟ್ಟು ನೀರಿನಂಶ ಅಂದರೆ ಸುಮಾರು 6000 ಪಿ.ಪಿ.ಎಮ್. ಹೊಂದಿರುವುದನ್ನು ಅರಿಗರು ಕಂಡುಕೊಂಡದ್ದು ಇನ್ನೊಂದು ವಿಶೇಶವಾಗಿತ್ತು.

ಸುಜಯೀಂದ್ರ ವೆಂ. ರಾ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: