ಮಾವಿನಹಣ್ಣಿನ ಗೊಜ್ಜು

ರೇಶ್ಮಾ ಸುದೀರ್.

maavina-gojju

ಬೇಕಾಗುವ ಸಾಮಾನುಗಳು:

ಮಾವಿನಹಣ್ಣು 3
ತೆಂಗಿನಕಾಯಿ ತುರಿ 1ಬಟ್ಟಲು
ನೀರುಳ್ಳಿ 1 ಸಣ್ಣ ಗೆಡ್ಡೆ
ಬೆಳ್ಳುಳ್ಳಿ 1 ಗೆಡ್ಡೆ
ಜೀರಿಗೆ 1/2 ಚಮಚ
ಸಾಂಬಾರ ಪುಡಿ 1/2 ಚಮಚ
ಹಸಿರು ಮೆಣಸಿನಕಾಯಿ 5  ಅತವಾ ಜೀರಿಗೆ ಮೆಣಸು 8

ಮಾಡುವ ಬಗೆ:
ಮಾವಿನ ಹಣ್ಣಿನ ಸಿಪ್ಪೆ ಸುಲಿದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ, ಉಳಿದ ಸಾಮಾನುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಹೆಚ್ಚಿದ ಮಾವಿನಹಣ್ಣಿಗೆ ರುಬ್ಬಿದ ಮಿಶ್ರಣವನ್ನು ಮತ್ತು ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ. ಒಂದು ಚಮಚದಶ್ಟು ಗಟ್ಟಿ ಮೊಸರನ್ನು ಸೇರಿಸಿ. ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಕರಿಬೇವಿನ ಎಲೆ ಹಾಕಿ ಒಗ್ಗರಣೆ ಕೊಡಿ. ಜಾಸ್ತಿ ಸಿಹಿ ಬೇಕೆನಿಸಿದರೆ ಸಲ್ಪ ಬೆಲ್ಲ ಸೇರಿಸಿ. ಮಾವಿನಹಣ್ಣಿನ ಗೊಜ್ಜು ಸಿದ್ದ, ಇದನ್ನು ಅನ್ನದ  ಜೊತೆಗೆ ಕಲಸಿಕೊಂಡು ತಿನ್ನಲು  ಚೆನ್ನಾಗಿರುತ್ತೆ.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: