ಚಂದಿರ ಬಂದನು

IMG_3608-700x466
ಬಾನಿನ ಚಂದಿರ ಬಂದನು ಹೊರಗೆ
ತೋಟದ ಅಂಚಿನ ಹೆಂಚಿನ ಮನೆಗೆ
ಬಾನಂಚ ಬದಿಯಲ್ಲಿ ಪಂಚೆಯ ಉಟ್ಟು
ಮುಗಿಲ ಮರೆಯಲ್ಲಿ ಮದುಹಾಸ ತೊಟ್ಟು
ಬೆಟ್ಟದ ಚಳಿಯಲ್ಲಿ ಸರಸರ ಎದ್ದು
ದಾರೀಲಿ ಅಲ್ಲಲ್ಲೆ ಕಂಬಳಿ ಹೊದ್ದು
ಬುವಿಯ ಬೆಳಕ ಬಾನಿಂದ ನೋಡಿ
ಮೊಗವನ್ನು ಆಗಾಗ ಕಿರಿಕಿರಿದು ಮಾಡಿ
ನಡುಮದ್ಯ ನಡೆಯುತ್ತ ನಬವನ್ನೇ ಕೆಣಕಿ
ನೆರೆಮನೆಯ ನೀರಿನ ಬಾವೀಲಿ ಇಣುಕಿ
ಅಂದಾದ ರಂಗಕ್ಕೆ ಚಂದಾವ ತಂದು
ದೂರದ ಬೆಟ್ಟದ ಬದಿಯಲ್ಲಿ ಮಿಂದು
ಬಾಳೆಯ ತೋಟದಿ ಸುಳಿಗಾಳಿ ಬೀಸಿ
ಹೂವಿನ ಚಪ್ಪರಕೆ ಚಾದರ ಹಾಸಿ
ಮಕ್ಕಳ ಮನದಲ್ಲಿ ಬಯಕೆಯ ಕಟ್ಟಿ
ಶರದಿಯ ನೀರನ್ನು ದೂರದಿ ತಟ್ಟಿ
ಹಿಡಿದನು ಬೆಳ್ಗೊಡೆ ಬಾಗ್ಯದ ಬುವಿಗೆ
ಮುಗುದದಿ ಮರಳಿದ ಬೂತಾಯಿ ಮಡಿಲಿಗೆ
ಬಾನಿನ ಚಂದಿರ ಬಂದನು ಹೊರಗೆ
ತೋಟದ ಅಂಚಿನ ಹೆಂಚಿನ ಮನೆಗೆ
(ಚಿತ್ರ: www.susanbranch.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: