ವೀರ ಯೋದನ ನಿರ್‍ದಾರ

soldier-shield-sword

ವೀರ ಯೋದನ ಕಯ್ಯಲ್ಲಿ ಕಡ್ಗವಿದೆ. ಯಾವುದೇ ಸಂದರ್‍ಬದಲ್ಲೂ ಅವನ ಕ್ರಿಯೆಗಳ ಚಾಲನೆಗೆ ನಿರ್‍ದರಿಸುವ ಹಕ್ಕು ಅವನಿಗೇ ಇರುತ್ತದೆ. ಜೀವನದ ಹಾದಿ ಕೆಲವೊಮ್ಮೆ ಅವನನ್ನು ಸಂದಿಗ್ದ ಪರಿಸ್ತಿತಿಗೆ ತಂದಿಡುತ್ತದೆ. ತನಗೆ ಪ್ರಿಯಪಾತ್ರವಾದದೆಲ್ಲದರಿಂದಲೂ ಕಳಚಿಕೊಳ್ಳಬೇಕಾದ ಸಂದರ್‍ಬ ಬರುತ್ತದೆ. ಆಗ ಯೋದ ಆಲೋಚಿಸುತ್ತಾನೆ. ಈಗ ಒದಗಿ ಬಂದಿರುವ ಸಂದರ್‍ಬದಲ್ಲಿ ತೆಗೆದುಕೊಳ್ಳಬೇಕಾದ ಹಾದಿ ಅಂತಕ್ಕರಣ ತೋರಿಸುತ್ತಿರುವ ಹಾದಿಯಾ ಅತವ ತನ್ನ ಅಹಂ ತೋರಿಸುವ ಹಾದಿಯಾ ಎಂದು. ಇಂತಾ ಸಂದರ್‍ಬದಲ್ಲಿ ವೀರಯೋದನು ತನ್ನ ಎಲ್ಲಾ ಪ್ರಿಯಪಾತ್ರರಿಂದ ದೂರವಾಗಲು ಸಿದ್ದನಾಗುತ್ತಾನೆ ಹಾಗು ಈ ಪರಿಸ್ತಿತಿಯ ಅನಿವಾರ್‍ಯತೆಯನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಈ ಪರಿಸ್ತಿತಿಗೆ ಕಾರಣಕರ್‍ತರು ತಮ್ಮ ಸ್ವಾರ್‍ತದ ಕಿಮ್ಮತ್ತಿನಿಂದ ತನ್ನನ್ನು ಒಡ್ಡಿದ್ದಾರೆ ಎಂದು ಅರಿವಾದಾಗ ಅವನು ತನ್ನ ನಿರ್‍ದಾರದಲ್ಲಿ ಅಚಲವಾಗುತ್ತಾನೆ. ವೀರಯೋದನಿಗೆ ಕ್ಶಮಿಸುವ ಹಾಗೆಯೇ ಮೋಸದ ಪರಿಸ್ತಿತಿಯನ್ನು ಕಡಾಕಂಡಿತವಾಗಿ ವಿರೋದಿಸುವ ಕಲೆಯೂ ಚೆನ್ನಾಗಿ ಗೊತ್ತಿದೆ. ಅವನಿಗೆ ಎರಡೂ ಕಲೆಗಳನ್ನು ಉಪಯೋಗಿಸುವುದೂ ಚೆನ್ನಾಗಿ ಗೊತ್ತು. ಕಡ್ಗವನ್ನು ಜಳಪಿಸಬೇಕೋ ಅತವ ಹಿಂಪಡೆಯಬೇಕೋ ಎನ್ನುವ ನಿರ್‍ದಾರ ಅವನ ಕಯ್ಯಲ್ಲೇ ಇದೆ. ನಾವೆಲ್ಲರೂ ವೀರಯೋದರೇ. ಏಕೆಂದರೆ ಜೀವನ ನಮಗೆ ವೀರಯೋದನ ಎಲ್ಲಾ ಪಾಟಗಳನ್ನು ಕಲಿಸುತ್ತದೆ.

 ಎಲ್ಲರ ಕನ್ನಡಕ್ಕೆ: –ಸುಶಿ ಕಾಡನಕುಪ್ಪೆ

-ಮೂಲ: ಪಾಲೋ ಕೊಯೆಲೋ

(ಚಿತ್ರ: godwardlife.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: