ಈಗ ಬರಲಿದೆ ’ಮಾಡಿದ ಗುಂಡಿಗೆ’!

– ಬರತ್ ಕುಮಾರ್.

ಪ್ರಾನ್ಸಿನ, ಮದ್ದೆಣಿಗಳನ್ನು ಮಾಡುವ ಕಾರ್‍ಮಟ್ (Carmat SAS) ಎನ್ನುವ ಸೇರುವೆಯವರು ’ಮಾಡಿದ ಗುಂಡಿಗೆ’ಯನ್ನು ಮನುಶ್ಯನ ಎದೆಯೊಳಗೆ ಸೇರಿಸುವುದಕ್ಕೆ ಕಾನೂನಾತ್ಮಕ ಸೆಲವನ್ನು ಪಡೆದುಕೊಂಡಿದ್ದಾರೆ. ಈ ಸೇರುವೆಯವರು ಹೇಳಿರುವಂತೆ ಈ ’ಮಾಡಿದ ಗುಂಡಿಗೆ’ಯನ್ನು ಬೆಲ್ಜಿಯಂ, ಪೋಲಂಡ್, ಸವ್ದಿ ಅರೇಬಿಯ ಮತ್ತು ಸ್ಲೊವೇನಿಯದಲ್ಲಿರುವ ’ಹಲನಾಡಿನ ಗುಂಡಿಗೆಯ ಕಯ್ದುಮಾಂಜುಗೆ ಮನೆ’ಗಳಲ್ಲಿ ಎದೆಬೇನಿಗರ ಎದೆಗೆ ಹಾಕಿ ಅದನ್ನು ಒರೆಗೆ ಹಚ್ಚಲಿದ್ದಾರೆ. ಪ್ರಾನ್ಸಿನಲ್ಲಿ ಇನ್ನೇನು ಕಾನೂನಾತ್ಮಕ ಅನುಮತಿ ಸಿಗುವುದರಲ್ಲಿದೆ.

fig-1

ಎದೆಗೆ ಹಾಕಬಲ್ಲ ಈ ’ಮಾಡಿದ ಗುಂಡಿಗೆ’ಯಲ್ಲಿ ಎರಡು ಅಂದರೆ ಬಲ ಮತ್ತು ಎಡ ಕಿಗ್ಗುಳಿಯ ಕೋಣೆಗಳಿವೆ. ಈ ಕೋಣೆಗಳನ್ನು ಬೇರ್‍ಪಡಿಸುವಂತೆ ಒಂದು ಪರೆಯಿದೆ. ಒಂದು ಕೋಣೆ ನೆತ್ತರಿಗೆ ಮತ್ತೊಂದು ಆಡಿಸುವ ಹರಿಕ(actioning fluid)ಕ್ಕೆ ಇರಿಸಲಾಗಿದೆ. ಅಳ್ಳಕದ ಹಾಗೆ ಹೊರಗಿರುವ ಚೀಲದಲ್ಲಿ ಈ ’ಆಡಿಸುವ ಹರಿಕ’ವನ್ನು ತುಂಬಿಡಲಾಗಿದೆ. ಅದು ಒಳಗಿರುವ ಗುಂಡಿಗೆಗೆ ಸಮನಾಗಿ ಬಡಿದುಕೊಳ್ಳುತ್ತದೆ. ಈ ’ಮಾಡಿದ ಗುಂಡಿಗೆ’ಯೊಳಗೆಯೇ ಮಿನ್ಕೆಯ ಬಿಲ್ಲೆಯನ್ನು ಅಳವಡಿಸಲಾಗಿದೆ. ಇದರಿಂದ ಗುಂಡಿಗೆಯ ಕೆಲಸವನ್ನು ಅಂಕೆಯಲ್ಲಿಡಬಹುದಾಗಿದೆ. ಇದಲ್ಲದೆ ಹಲವು ಅರಿವುಗೆ(sensor)ಗಳನ್ನು ಇದರಲ್ಲಿ ಬಳಸಲಾಗಿದೆ. ಅರಿವುಗೆಗಳು ಕೊಡುವ ತಿಳಿಹವನ್ನು ಮಯ್-ಕ್ರೊಪ್ರೊಸರ್‍ಗಳ ಮೂಲಕ ಪ್ರಾಸೆಸ್ ಮಾಡಲಾಗುತ್ತದೆ.

fig.2

ಕಾರ್‍ಮಟ್ ಹೇಳಿರುವಂತೆ ಈ ಗುಂಡಿಗೆಯ ಜೊತೆಯಲ್ಲಿ ತೊಡಬಲ್ಲ ಅರುಹುಗೆಯನ್ನು ಕೊಡಲಾಗಿದೆ. ಇದರ ಮೂಲಕ ಬೇನಿಗರ ಬೇನೆತಿಳಿಹಗಳನ್ನು ತಂತಿಯಿಲ್ಲದ ಅರುಹುಗೆಯ ಮೂಲಕ ಹತ್ತಿರದ ಮಾಂಜುಮನೆಗೆ ಕಳಿಸಲಾಗುತ್ತದೆ. ಇದರಿಂದ ಬೇನಿಗರ ಮಯ್ಯಲ್ಲಿರುವ ’ಮಾಡಿದ ಗುಂಡಿಗೆ’ಯು ಹೇಗೆ ಕೆಲಸ ಮಾಡುತ್ತಿದೆಯೆಂಬುದು ಯಾವಾಗಲೂ ಮಾಂಜುಮನೆಯ ಗಮನದಲ್ಲಿರುತ್ತದೆ.

fig-4

ಈ  ಮದ್ದೆಣಿಯ ಮೊದಲ ತಲೆಮಾರಿನವುಗಳಲ್ಲಿ  ಲಿತಿಯಮ್-ಅಯಾನ್  ಬ್ಯಾಟರಿಗಳನ್ನು ಬಳಸಲಾಗಿದೆ. ಎರಡನೆ ತಲೆಮಾರಿನ ಮದ್ದೆಣಿಗಳು ಬೇನಿಗರು ತೊಡಬಲ್ಲ ’ಉರುವಲು ಗೂಡು’ಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.  ಪ್ರಕ್ರುತಿದತ್ತವಾದ ಗುಂಡಿಗೆಗಳು ಸಿಗದೆ ಸಾವಿರಾರು ಎದೆಬೇನಿಗರು ಸಾಯುತ್ತಿರುವಾಗ ಈ ’ಮಾಡಿದ ಗುಂಡಿಗೆ’ಯು ವರವಾಗಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಮದ್ದೆಣಿಯನ್ನು ಮಾಡಲು ಕಾರ್‍ಮಟ್ ಸೇರುವೆಯವರು ಪ್ರೆಂಚ್ ಏಜೆನ್ಸಿ ಪಾರ್ ಇನ್ನೋವೇಶನ್ (French Agency for Innovation) ಎಂಬ ಸಂಸ್ತೆಯಿಂದ 33 ಮಿಲಿಯನ್ ಯೂರೊಗಳ ಸಬ್ಸಿಡಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.

ಕೊಸರು:  ತಾಯ್ನುಡಿಯಲ್ಲಿ ಕಲಿಕೆ ಮಾಡುವ ಪ್ರೆಂಚರಿಂದಲೇ ಇಂತಹ ಅರಕೆಗಳು ಸಾದ್ಯವಾಗುವುದು ಅಲ್ಲವೆ?

ಸುದ್ದಿಸೆಲೆ: http://www.eetimes.com/

ಚಿತ್ರಗಳು: http://www.carmatsa.com/

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: