ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 2

ಅವ್ವನ ಸಹಜ ಕಲಿಸುವಿಕೆ:

ಕಳೆದ ಬರಹದಲ್ಲಿ ತಿಳಿಸಿದಂತೆ ಚಿಕ್ಕ ಮಕ್ಕಳ ಬೇಕು-ಬೇಡಗಳನ್ನು ಈಡೇರಿಸುವಾಗ ಅವ್ವನಾದವಳು ತನ್ನ ಅರಿವಿಗೆ ಬಾರದಂತೆಯೇ ಸಹಜವಾಗಿ ಒಬ್ಬ ಕಲಿಸುಗಳಾಗಿಬಿಡುತ್ತಾಳೆ. ಈ ಗುಟ್ಟನ್ನು ಅರಿತು, ಅವ್ವಂದಿರು ಮಕ್ಕಳೊಡನೆ ನಡೆಸುವ ಆಟ-ಊಟ-ಪಾಟದ ಸಹಜ ಒಡನಾಟಗಳಲ್ಲಿ ಮಕ್ಕಲಿಕೆ (ಮಕ್ಕಳ ಕಲಿಕೆ) ಕುರಿತು ಈ ಮೂರು ವಿಚಾರಗಳನ್ನು ಗಮನಿಸಬೇಕು,

avvana_neralalli_kalike_2

1. ಮಕ್ಕಲಿಕೆ ಬಗೆ (ಮಕ್ಕಳ ಕಲಿಕೆಯ ಬಗೆ)

  • ಮಕ್ಕಳು ತಾವೇ ಹೊಸ ಹೊಸ ಬಗೆ ಕಂಡುಕೊಳ್ಳುವುದು, ಅತವಾ
  • ಅವ್ವಂದಿರ ಚಟುವಟಿಕೆಗಳನ್ನು, ಚಲವಲನಗಳನ್ನು ಅನುಕರಿಸುವುದು

2. ಮಮ್ಮಿಡಿತ (ಮಕ್ಕಳ ಮಿಡಿತ) – ಮಕ್ಕಳು ಯಾವ ವಿಶಯಗಳಿಗೆ ಹೆಚ್ಚು ಮಿಡಿಯುತ್ತಾರೆ (ಸ್ಪಂದಿಸುತ್ತಾರೆ)

3. ಮಕ್ಕಳ ಒಲ್ಲ-ಸಲ್ಲಗಳು – ಮಕ್ಕಳಿಗೆ ಏನು ಇಶ್ಟವಾಗುತ್ತದೆ, ಏನು ಇಶ್ಟವಾಗುವುದಿಲ್ಲ.

ಈ ಮೂರು ಮಕ್ಕಲಿಕೆ ಗುಟ್ಟುಗಳನ್ನು ಅರಿತ ಅವ್ವನು ಮುಂದೆ ಮಕ್ಕಳಿಗೆ ಇತರೆ ವಿಚಾರಗಳನ್ನು ಕಲಿಸುವಾಗ ಆ ಗುಟ್ಟುಗಳನ್ನೇ ಕಲಿಸುವ ಸಲಕರಣೆಗಳು (ಮುಟ್ಟುಗಳು) ಮತ್ತು ತಂತ್ರಗಳನ್ನಾಗಿ ಬಳಸಿ, ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು. ಈ ಕುರಿತು ನನ್ನ ಅನುಬವದ ಕೆಲ ಎತ್ತುಗೆಗಳನ್ನು ನೋಡೋಣ,

ಮಕ್ಕಳಿಗೆ ತಿನ್ನುವುದನ್ನು ಕಲಿಸುವುದು

ಹೆಚ್ಚಿನ ಮಕ್ಕಳು ಆಹಾರ ಪದಾರ‍್ತಗಳನ್ನು ಅಗಿಯುವುದು, ನುಂಗುವುದು ಇತ್ಯಾದಿ ಬಗೆಗಳಾಗಿ ತಾವೇ ಕಲಿಯುತ್ತಾರೆ. ಹಲವಾರು ಮಕ್ಕಳು ಇವನ್ನು ಸರಿಯಾಗಿ ಕಲಿಯುವುದೇ ಇಲ್ಲ. ಎತ್ತುಗೆಗೆ: ಎಲ್ಲವನ್ನು ಬಾಯಿಗೆ ತುರುಕಿಕೊಂಡು, ಅಗಿಯದೆ ಸುಮ್ಮನೆ ಕುಳಿತುಬಿಡುತ್ತಾರೆ. ಇನ್ನೂ ಕೆಲವರು ಅವ್ವನು ತನ್ನ ಕಯ್ಯಾರೆ ತಿನ್ನಿಸೋವರೆಗೂ ಊಟವನ್ನು ಮುಟ್ಟುವುದಿಲ್ಲ. ಇಂತಹ ಸಮಯದಲ್ಲಿ ಮೇಲಿನ ವಿಚಾರಗಳನ್ನು ಅರಿತ ಅವ್ವನು ಈ ಕೆಳಗಿನ ತಂತ್ರಗಳನ್ನು ಬಳಸಿ ಮಕ್ಕಳಿಗೆ ತಿನ್ನಲು ಕಲಿಸಬಹುದು.

ಎತ್ತುಗೆಗೆ: ನನ್ನ ಮಗಳಿಗೆ ಎರಡೂವರೆ ವರುಶವಾಗುವವರೆಗೂ ಸರಿಯಾಗಿ ತಿನ್ನುತ್ತಲೇ ಇರಲಿಲ್ಲ. ಬಹಳ ದಿನಗಳ ಕಾಲ ಅಗಿಯುವುದನ್ನೇ ಕಲಿತಿರಲಿಲ್ಲ.ಆದರೆ ತಿನ್ನುವಾಗ ನನ್ನನ್ನು ಅನುಕರಿಸುತ್ತಿದ್ದಳು. ಅದನ್ನು ಅರಿತ ನಾನು ನನ್ನ ಮಗಳಿಗೆ ಹಸಿದಿರಬಹುದಾದ ವೇಳೆಯಲ್ಲಿ ಒಂದು ತಟ್ಟೆಯಲ್ಲಿ ನನ್ನಊಟವನ್ನು ಇಟ್ಟುಕೊಂಡು, ಅವಳಿಗೂ ಒಂದು ಚಿಕ್ಕ ತಟ್ಟೆಯಲ್ಲಿ ಅವಳ ಊಟ ಹಾಕಿ, ತಟ್ಟೆಯನ್ನು ಅವಳ ಮುಂದಿಟ್ಟು ನಾನೂ ತಿನ್ನಲಾರಂಬಿಸಸಿದೆ. ಆಗ ಅವಳು ನನ್ನನ್ನು ಅನುಕರಿಸುತ್ತಾ ಅಗಿಯುವುದನ್ನು ಕಲಿಯರಾರಂಬಿಸಿದಳು. ಈ ಪ್ರಯೋಗದಲ್ಲಿ ಸಹಜವಾಗಿ ಮಕ್ಕಳು ಬಹಳಶ್ಟು ಊಟವನ್ನು ಚೆಲ್ಲಬಹುದು. ಅದನ್ನು ನೋಡಿಕೊಂಡು ಸಹಿಸಿಕೊಳ್ಳುವ, ನಂತರ ಅದನ್ನು ಚೊಕ್ಕಟ ಮಾಡುವ ತಾಳ್ಮೆಯನ್ನು ಅವ್ವಂದಿರು ಬೆಳೆಸಿಕೊಳ್ಳಬೇಕು.

ನಿಮಗೂ ಇಂತಹ ಅನುಬವಗಳಾಗಿದ್ದರೆ, ದಯವಿಟ್ಟು ಅವನ್ನು ಈ ಬರಹಕ್ಕೆ ಕಮೆಂಟ್ ಬರೆಯುವುದರ ಮೂಲಕ ಹಂಚಿಕೊಳ್ಳಿ. ಮಕ್ಕಲಿಕೆಯ ಇನ್ನೂ ಹಲವಾರು ವಿಚಾರಗಳನ್ನು ಮುಂದಿನ ಬಾಗದಲ್ಲಿ ನೋಡೋಣ.

– ಮದು ಜಯಪ್ರಕಾಶ್

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Maaysa says:

    ನಸುಗೂಸಿನ ( ೦ – ೬ ತಿಂಗಳು ) ಪುಷ್ಟಿಕತೆಗೆ ಎಂತಹ “ಸಸ್ಯಾಹಾರಿ”ಯಾದ ಆಹಾರವು ತಕ್ಕುದ್ದು ಎಂದು ನಿಮ್ಮ ಮುಂದಿನ ಬರಹದಲ್ಲಿ ದಯವಿಟ್ಟು ತಿಳಿಸಿ-ಕೊಡಿ.

  2. Maaysa says:

    http://pre20031103.stm.fi/suomi/eho/julkaisut/mamuvauva/vauva_englanti.pdf

    Finland ದೇಶದ ಮಕ್ಕಳನ್ನು ಹೆರುವುದು ಮತ್ತು ಅವರನ್ನು ಪೊರೆಯುವುದರ ಕುರಿತ ಕೈಪಿಡಿ. ತುಂಬಾ ಚೆನ್ನಾಗಿದೆ .

  1. 15/07/2013

    […] ಹಿಂದಿನ ಬಾಗದಲ್ಲಿ ಮಕ್ಕಲಿಕೆ ಗುಟ್ಟುಗಳಾದ “ಮಕ್ಕಲಿಕೆ ಬಗೆ”, “ಮಮ್ಮಿಡಿತ” ಹಾಗೂ “ಮಕ್ಕಳ ಒಲ್ಲ-ಸಲ್ಲಗಳು” ಬಗ್ಗೆ ಅರಿತುಕೊಂಡೆವು ಮತ್ತು ಅವುಗಳ ಬಳಕೆಯ ಬಗ್ಗೆ ಎತ್ತುಗೆಯನ್ನೂ ನೋಡಿದೆವು. ಈ ಬಾರಿ ಆ ಗುಟ್ಟುಗಳ ಬಳಕೆ ಮಾಡುವ ಕೆಲ ಚಳಕಗಳು ಮತ್ತು ನಿಗಾವಹಿಸಬೇಕಾದ ಕೆಲ ಅಂಶಗಳನ್ನು ನೋಡೋಣ. […]

ಅನಿಸಿಕೆ ಬರೆಯಿರಿ: