ಗಣಿ ಮುಚ್ಚಿದ್ದಕ್ಕೆ ’ಗುಂಕಂಜಿಮಾ’ ಕಾಲಿ

ಪ್ರಿಯಾಂಕ್ ಕತ್ತಲಗಿರಿ.

OLYMPUS DIGITAL CAMERA

ಜಪಾನ್ ದೇಶದ ನಾಗಸಾಕಿ ಊರಿನ ಕಡಲತೀರದಿಂದ 11ಕಿ.ಮೀ. ದೂರವಿರುವ ಕುರುವೆ (ದ್ವೀಪ) ಹಶಿಮಾ. ಇದಕ್ಕಿರುವ ಇನ್ನೂ ಒಂದು ಹೆಸರು ಗುಂಕಂಜಿಮಾ. ಗುಂಕಂಜಿಮಾ ಎಂದರೆ ಜಪಾನಿ ನುಡಿಯಲ್ಲಿ ಕಾಳಗದ ಹಡಗಿನ ಕುರುವೆ (battleship island) ಎಂಬ ಹುರುಳಂತೆ. ಸುಮಾರು 12 ಕಾಲ್ಚೆಂಡಾಟದ ಬಯಲಿನಶ್ಟು ದೊಡ್ಡವಿರುವ ಈ ಕುರುವೆಯನ್ನು 1890ರಲ್ಲಿ ಮಿತ್ಸುಬಿಶಿ ಕಂಪನಿಯು ಕೊಂಡುಕೊಂಡಿತ್ತು. ಇಲ್ಲಿ ಸುತ್ತಮುತ್ತಲ ಕಡಲತಡಿಯಲ್ಲಿ ಹೇರಳವಾಗಿ ಸಿಗುತ್ತಿದ್ದ ಕಲ್ಲಿದ್ದಲನ್ನು ತೆಗೆಯುವುದೇ ಮಿತ್ಸುಬಿಶಿಯ ಗುರಿಯಾಗಿತ್ತು.

ಸುಮಾರು 1959ರ ಹೊತ್ತಿಗೆ ಇಲ್ಲಿ ಹೆಚ್ಚು-ಕಮ್ಮಿ 5,000 ಕೆಲಸಗಾರರು ಗಣಿ ತೆಗೆಯುವ ಕೆಲಸದಲ್ಲಿ ತೊಡಗಿದ್ದರಂತೆ. 5,000 ಕೆಲಸಗಾರರು ಮತ್ತವರ ಕುಟುಂಬದವರೆಲ್ಲಾ ಸೇರಿ, ಈ ಚಿಕ್ಕ ಕುರುವೆಗೆ ಜಗತ್ತಿನಲ್ಲೇ ಹೆಚ್ಚಿನ ಜನದಟ್ಟಣೆ ಹೊಂದಿರುವ ಊರು ಎಂಬ ಹೆಗ್ಗಳಿಕೆ ಸಿಕ್ಕಿಬಿಟ್ಟಿತ್ತು. ಆದರೆ, 1960ರಿಂದಾ ಮೊದಲ್ಗೊಂಡು ಜಪಾನು ಕಲ್ಲಿದ್ದಲ ಬಳಕೆಯನ್ನು ಕಡಿಮೆಗೊಳಿಸತೊಡಗಿತು. ಪೆಟ್ರೋಲ್ ಬಳಕೆಯನ್ನೇ ಹೆಚ್ಚಿಸುತ್ತಾ ಸಾಗಿತು. ನಿದಾನವಾಗಿ, ಜಪಾನಿನ ಹಲವೆಡೆಗಳಲ್ಲಿದ್ದ ಕಲ್ಲಿದ್ದಲು ಗಣಿಗಳು ಬಾಗಿಲು ಹಾಕತೊಡಗಿದವು. 1974ರ ಜನವರಿಯಲ್ಲಿ ಮಿತ್ಸುಬಿಶಿಯು ಗುಂಕಂಜಿಮಾದಲ್ಲಿನ ಗಣಿಗಾರಿಕೆ ನಿಲ್ಲಿಸಿಬಿಟ್ಟಿತು. ಎರಡು ತಿಂಗಳೊಳಗೆ, ಗುಂಕಂಜಿಮಾದಲ್ಲಿದ್ದ ಒಬ್ಬೊಬ್ಬರೂ ಊರು ಬಿಟ್ಟರು.

ಈಗ, ಇಡೀ ಗುಂಕಂಜಿಮಾ ಊರೇ ಒಂದು ದೊಡ್ಡ ಬೂತಬಂಗಲೆಯಂತೆ ಕಾಣುತ್ತದೆ. ಎಲ್ಲಿ ನೋಡಿದರೂ ಅಲ್ಲಿ ಪಾಳು ಬಿದ್ದ ಬಂಗಲೆಗಳೇ ಕಾಣುತ್ತವೆ.

ಮಾಹಿತಿ ಸೆಲೆ: ವಿಕಿಪೀಡಿಯಾ

ಪೋಟೋ ಸೆಲೆtravelstalker.wordpress.com

– ಪ್ರಿಯಾಂಕ್ ಕತ್ತಲಗಿರಿ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks