ಎಲೆ ಅಲ್ಲ, ಹಲ್ಲಿ!

ಪ್ರಶಾಂತ ಸೊರಟೂರ.

gecko_2

ದಿಟ್ಟಿಸಿ ನೋಡಿದರೂ ದಿಟ ಎಲೆಯಂತೆ ಕಾಣುತ್ತೆ ಈ ಹಲ್ಲಿ! ಆಪ್ರಿಕಾದ ಮಡಗಾಸ್ಕರ್ ನಡುಗಡ್ಡೆಯಲ್ಲಿ ಕಂಡುಬರುವ ಈ ಬಗೆಯ ಹಲ್ಲಿಗಳು ತಮ್ಮ ಸುತ್ತಣಕ್ಕೆ ಹೋಲುವಂತೆ ತಮ್ಮ ಮಯ್ ಬಣ್ಣ, ಆಕಾರವನ್ನು ಬೆರಗುಗೊಳಿಸುವಂತೆ ಮಾರ‍್ಪಡಿಸಿಕೊಳ್ಳಬಲ್ಲವು. ಸುಮಾರು 9 ಸೆ.ಮೀ. ಉದ್ದವಿರುವ, ಯುರೋಪ್ಲಾಟಸ್ ಪಂಟಾಸ್ಟಿಕಸ್ (uroplatus phantasticus) ಎಂಬ ಅರಿಮೆಯ ಗುಂಪಿಗೆ ಸೇರಿರುವ ಈ ಹಲ್ಲಿಯು ತನ್ನ ಮಯ್ ಬಣ್ಣವನ್ನು ಕಂದು, ಬೂದು, ಹಸಿರು, ಕಿತ್ತಳೆ ಬಣ್ಣಕ್ಕೆ ತಿರುಗಿಸಿಕೊಳ್ಳಬಲ್ಲದು. ಆಪ್ರಿಕಾದ ಆಡುಮಾತಿನಲ್ಲಿ ಇದನ್ನು ಸಾಟನಿಕ್ ಎಲೆ ಹಲ್ಲಿ (Satanic leaf geckos) ಎನ್ನುತ್ತಾರೆ.

ಎದುರಾಳಿಯ ಕಣ್ಣಿಗೆ ಮಣ್ಣೆರೆಚುವ ಇಂತ ಚಳಕಗಳನ್ನು ಹಲವಾರು ಜೀವಿಗಳು ಅಳವಡಿಸಿಕೊಳ್ಳುತ್ತವೆ, ಇದಕ್ಕೆ ಮರೆಮಾಚುವಿಕೆ (camouflage) ಎಂದು ಕರೆಯುತ್ತಾರೆ. ಎಲೆಯನ್ನು ಅಣಕಿಸುವ ಈ ಕಲೆಯನ್ನು ಹಲ್ಲಿ ಮಯ್ಗೂಡಿಸಿಕೊಂಡರೆ ಇದೇ ಅಣಕರಿಮೆ ಬಳಸಿ ಜಗತ್ತಿನ ಎಲ್ಲ ಕಾಳಗಪಡೆಗಳು ಎದುರಾಳಿಯನ್ನು ಹಾದಿತಪ್ಪಿಸಲು ತಮ್ಮ ಉಡುಪುಗಳನ್ನು ಸುತ್ತಣಕ್ಕೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸುತ್ತವೆ.

ಮಾಹಿತಿ ಸೆಲೆ: www.dailymail.co.uk

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: