ಎರಡು ವಚನಗಳು

– ಬರತ್ ಕುಮಾರ್.

golden-rays

1
ಹೂವೊಳಲಿಗೆ ಹೋದೆ ಹೂವುಗಳು ಕಾಣಲಿಲ್ಲ
ಬಾಂಬೊಳಲಿಗೆ ಹೋದೆ ಚುಕ್ಕಿಗಳು ಕಾಣಲಿಲ್ಲ
ನಡುವೊಳಲಿಗೆ ಹೋದೆ ಮಂದಿ ಕಾಣಲಿಲ್ಲ
ನನ್ನೊಳಗೆ ಹೋದೆ ನಾನೇ ಕಾಣಲಿಲ್ಲ!
ಏನಿದು ಮಾಯೆ ಮತ್ತಿತಾಳಯ್ಯ
ನಿನ್ನನೇ ಕಂಡೆನಲ್ಲ?!

2
ಒಲವಿನಲೇ ಚೆಲುವಿರಲು
ಚೆಲುವಿನಲೇ ಒಲವಿರಲು
ನಿಮ್ಮ ಒಕ್ಕಲೇ ಚೆಲುವು
ಮತ್ತಿತಾಳಯ್ಯ ನೀವೇ ಒಲವು
ಈ ಒಲವು ಚೆಲುವುಗಳ ಕೂಟವೇ
ತನ್ನೇಳಿಗೆಯ ಹೆನ್ನಲಿವು ಕಾಣಿರಯ್ಯ!

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: