ಬಾಯರ‍್ನ್ ಮ್ಯೂನಿಕ್ ತಂಡದ ಗೆಲುವಿನ ಓಟ

ರಗುನಂದನ್.

Allianz-Arena-Bayern-Munich-Football-Wallpapers-HD

ಜರ್‍ಮನಿ ದೇಶದ ಹೆಸರುವಾಸಿ ಪುಟ್ಬಾಲ್ ತಂಡವಾದ ಬಾಯರ್‍ನ್ ಮ್ಯೂನಿಕ್ ಈಗ ಜಗತ್ತಿದಲ್ಲಿಯೇ ಕಡುಹೆಚ್ಚು ಬೆಲೆಯುಳ್ಳ ಪುಟ್ಬಾಲ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದಿದೆ. ಈ ತಂಡದ ಒಟ್ಟು ಬೆಲೆ ಈಗ ಬರೋಬ್ಬರಿ 4954 ಕೋಟಿ. ಕಳೆದ ವರುಶಗಳಲ್ಲಿ ಮೊದಲನೇ ಸ್ತಾನದಲ್ಲಿದ್ದ ಮ್ಯಾಂಚೆಸ್ಟರ್‍ ಯುನಯ್ಟೆಡ್ ಈಗ ಎರಡನೇ ಸ್ತಾನಕ್ಕೆ ತಳ್ಳಲ್ಪಟ್ಟಿದೆ. ಈ ಸರತಿ ಯೂರೋಪಿನ ಚಾಂಪಿಯನ್ಸ್ ಲೀಗನ್ನು ಗೆದ್ದ ಕಾರಣ ಬಾಯರ್‍ನ್ ಮ್ಯೂನಿಕ್ ತಂಡಕ್ಕೆ ಅಬಿಮಾನಿಗಳು ಇನ್ನೂ ಹೆಚ್ಚಾಗಿದ್ದಾರೆ. ಬರೀ ಚಾಂಪಿಯನ್ಸ್ ಲೀಗ್ ಅಲ್ಲದೆ ಜರ್‍ಮನಿಯಲ್ಲಿ ನಡೆಯುವ ಲೀಗ್ ಆದ ಬುಂಡೇಸ್ ಲೀಗಾ ಮತ್ತು ಜರ್‍ಮನ್ ಕಪ್ ಅನ್ನು ಕೂಡ ಬಾಯರ್‍ನ್ ಮ್ಯೂನಿಕ್ ತಂಡವು ತನ್ನ ಮಡಿಲಿಗೆ ಹಾಕಿಕೊಂಡಿದೆ. ಈ ಮೂರೂ ಪಯ್ಪೋಟಿಗಳನ್ನು ಒಂದೇ ವರುಶದಲ್ಲಿ ಗೆದ್ದರೆ ಅದಕ್ಕೆ treble ಎನ್ನುತ್ತಾರೆ. ಮ್ಯಾಂಚೆಸ್ಟರ್‍ ಯುನಯ್ಟೆಡ್ ತಂಡವು ಈ ರೀತಿಯ ಟ್ರೆಬಲ್ ಅನ್ನು 1999 ರಲ್ಲಿ ಗೆದ್ದಿತ್ತು. ತಂಡದ ಒಟ್ಟು ಬೆಲೆಯಂತೆ ನೋಡಿದರೆ, ಬೇರೆ ಬೇರೆ ಪುಟ್ಬಾಲ್ ತಂಡಗಳು ಎಶ್ಟನೇ ಸ್ತಾನದಲ್ಲಿ ಇವೆ ಎಂಬುದನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.

ಸ್ತಾನ ತಂಡ ದೇಶ
1 ಬಾಯರ‍್ನ್ ಮ್ಯೂನಿಕ್ ಜರ‍್ಮನಿ
2 ಮ್ಯಾಂಚೆಸ್ಟರ್ ಯುನಯ್ಟೆಡ್ ಇಂಗ್ಲೆಂಡ್
3 ರಿಯಲ್ ಮಾಡ್ರಿಡ್ ಸ್ಪೇನ್
4 ಬಾರ‍್ಸಿಲೋನಾ ಸ್ಪೇನ್
5 ಚೆಲ್ಸಿ ಇಂಗ್ಲೆಂಡ್
6 ಆರ‍್ಸನಲ್ ಇಂಗ್ಲೆಂಡ್
7 ಲಿವರ‍್ಪೂಲ್ ಇಂಗ್ಲೆಂಡ್
8 ಮ್ಯಾಂಚೆಸ್ಟರ್ ಸಿಟಿ ಇಂಗ್ಲೆಂಡ್
9 ಎ.ಸಿ.ಮಿಲಾನ್ ಇಟಲಿ
10 ಬೊರುಸ್ಸಿಯಾ ಡಾರ‍್ಟ್‍ಮಂಡ್ ಜರ‍್ಮನಿ

ಬಾಯರ್‍ನ್ ಮ್ಯೂನಿಕ್ಕಿನ ಈ ಸಾದನೆಯಿಂದ ಜರ್‍ಮನಿಯಲ್ಲಿ ಆಡಲ್ಪಡುವ ಲೀಗ್ ಪಯ್ಪೋಟಿಯಾದ ಬುಂಡೇಸ್ ಲೀಗಾ ಕೂಡಾ ಮುಂದಿನ ದಿನಗಳಲ್ಲಿ ಇಂಗ್ಲಿಶ್ ಪ್ರೀಮಿಯರ್‍ ಲೀಗಿನಶ್ಟೆ ಹೆಸರುವಾಸಿ ಆಗುವ ಸಾದ್ಯತೆಯಿದೆ.

(ಚಿತ್ರ: http://www.footballwallpapershd.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: