ಸವಿಯೊಲವು

ಆನಂದ್.ಜಿ.

bee

ಒಂದು ಮುಂಜಾವಿನಲಿ ಮಲ್ಲೆ ಮೊಗ್ಗೊಂದು
ಹನಿಹನಿ ಇಬ್ಬನಿಯಲಿ ತಾನು
ಹಿತವಾಗಿ ಮಿಂದು
ಬಿರಿಯಲನುವಾಗಿಹುದು
ಆ ರವಿಯ ಕಂಡು

ಮಲ್ಲೆಯೊಡಲಲಿ ತುಂಬಿಹುದು ಜೇನು
ಹೀರಬಂದಿಹುದೊಂದು
ಮರಿದುಂಬಿ ತಾನು
ಸಿಹಿಯುಂಟು ಸೊಗಸುಂಟು
ಸವಿಯುಂಟು ಎಂದು

ಎಳೆ ಮಲ್ಲೆ
ಬಿಳಿ ಮಲ್ಲೆಯಾದರೇನು?
ಮರಿದುಂಬಿ
ಕರಿದುಂಬಿಯಾದರೇನು?
ಆಗಿರಲು ಸಿಹಿಜೇನು ಸವಿಯೊಲವು!

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: