ಒಲವಿನ ನುಡಿ

ಜಯತೀರ‍್ತ ನಾಡಗವ್ಡ

Hearts-Wallpaper

ಮನಸೆಂಬ ಮಂಚೂರಿಯಲ್ಲಿ ಗೆಳತಿ ನೀನು ಕಡ್ಡೀಯ ಚುಚ್ಚಿದೆ
ಅದಕೆ ನನ್ನ ನೆತ್ತರುನಾಳಗಳೆಲ್ಲ ಮುಚ್ಚಿದೆ
ಇಶ್ಟಾದರೂ ಈ ಮನ ನಿನ್ನನೆ ಮೆಚ್ಚಿದೆ,
ನಿನ್ನ ಪಡೆಯಬೇಕೆಂಬ ಹುಚ್ಚಿದೆ, ಎಂದೂ ಆರದ ಕೆಚ್ಚಿದೆ.

ಎಲ್ಲಿ ನೋಡಿದರೂ ಅವಳು
ಕನಸಲೂ ಮನಸಲೂ
ಸದಾಕಾಲ ತುಂಬಿದೆ ಹುಡುಗಿ ನಿನ್ನದೆ ಅಮಲು
ತಿಳಿಯದಾಗಿದೆ ಮುಂದಿನ ದಾರಿ ಮಾತ್ರ ಕವಲು?
ಆಟವಾಡದಿರು ಈ ಮನಸಿನೊಂದಿಗೆ ಯಾವಾಗಲೂ
…..ನನ್ನ ಮನವಲ್ಲ ಆಟದ ಬಯಲು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.