ಜಾರಲಿಲ್ಲ ನಾನು…

– ಬರತ್ ಕುಮಾರ್.

05122010180

ಆಟವ ಆಡಿ ನೆಟ್ಟರು ನನ್ನ,
ಬಿಟ್ಟರು ಇಲ್ಲೆ, ಕೊಟ್ಟರು ಕಯ್!
ಬೆಟ್ಟವ ಕೊಟ್ಟರೂ
ಕೂಟಕಿಲ್ಲಿ ಯಾರಿಹರು?

ಮಂಜು ಮುತ್ತಿತು
ಸಂಚಿನ ಮಳೆ-ಗಾಳಿಗೆ
ಅಂಜದೆ ಬಿಸಿಲೆದುರಿಸಿದೆ
ಕೊಂಚವು ಅಲುಗದೆ ನಿಂತಿರುವೆ

ಜರ್ರನೆ ಜಾರಿದರೂ ಮಂದಿ
ಜಾರಲಿಲ್ಲ ನಾನು
ಜೋರಾದ ಆಟದಲಿ, ಬದುಕಿನಲಿ
ಜರೆಯಲಾರರು ನನ್ನ

ಮೇಲೆ ಬಾನಿಗೆ ಮೊಗವಿಟ್ಟೆ, ಮಂಜು
ಮಲೆಯ ತಲೆಯ ಮೇಲೆ ಕಾಲಿಟ್ಟೆ
ಸೋಲೇ ಇಲ್ಲದ ನನ್ನ ನಗೆ
ಬಾಳೇ ಗೆಲುವಿನ ಕಯ್ಯೊಳಗೆ

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಚೆನ್ನಾಗಿದೆ ಬರತ

ಅನಿಸಿಕೆ ಬರೆಯಿರಿ: