ಹಕ್ಕಿ ಮತ್ತು ಹೂವು

ಅನಂತ್ ಮಹಾಜನ್

sini_gal_birdbug_11
ಗಿಡದಿಂದ ಗಿಡಕ್ಕೆ ಹಾರುವ ಹಕ್ಕಿ ನಾನು,
ಪ್ರತಿ ಗಿಡದಲು ಹೊಸ ತಾಣ ಪಡೆದೆ ನಾನು,
ನೇರಳೆಯ ಹೊಳಪಿನ ಹೂವನು ಕಂಡೆ ನಾನು,
ಬಳಿಗೆ ಬಾ ಎಂದು ಕಯ್ ಬೀಸಿ ಕರದೆ ನೀನು,

ಗಾಳಿಗೆ ಹೆಣ್ಣಿನ ನಾಚಿಕೆಯಂತೆ ನುಲಿವೆ ನೀನು,
ನಿನ್ನ ಈ ನಲ್ಗುಣಿತವ ಕಂಡು ಪುಳಕಿತನಾದೆ ನಾನು,
ಬದುಕ ತುಂಬ ನಿನ್ನ ಮಡಿಲಲಿ ನೆಲೆಸುವೆ ನಾನು,
ಹೀಗೆ ಕಣ್ಣಿನಲಿ ಕಣ್ಣಿಟ್ಟು ಸದಾ ನೋಡುವೆನು ನಾನು

(ಚಿತ್ರ: http://universini.com/)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: