BMW ನಿಂದ ಹೊಸ ಮಿಂಚಿನ ಕಾರು!

– ವಿವೇಕ್ ಶಂಕರ್

bmwi3

BMW ಕೂಟಕ್ಕೂ ಮಿಂಚಿನ ಕಾರುಗಳಿಗೂ (electric cars) ಇರುವ ನಂಟು ಹೊಸದೇನಲ್ಲ. ಹಿಂದೆ ಮಿನಿ ಕೂಪರ ಮಾದರಿಯ ಮಿಂಚಿನ ಕಾರುಗಳನ್ನು ಮಾಡಿ ಅವುಗಳನ್ನು ಹಲವು ಒರೆಗಳಿಗೆ (test) BMW ಒಳಪಡಿಸಿತ್ತು. ಈಗ ಹೊಸದೊಂದು ಮಿಂಚಿನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು BMW ಅಣಿಯಾಗಿದ್ದು, ಅದಕ್ಕೆ i3 ಅಂತಾ ಹೆಸರಿಡಲಾಗಿದೆ.

ಈ ಕಾರು ಉಳಿದ ಮಿಂಚಿನ ಕಾರುಗಳಿಂತ ಕಡಿಮೆ ತೂಕ ಹೊಂದಿದ್ದು, ಅದರ ಮಿನ್ನಡಕಗಳನ್ನು (batteries) ಹುರುಪುಗೊಳಿಸಲು (charge) ತಗಲುವ  ಹೊತ್ತು ತುಂಬಾ ಕಡಿಮೆಯಂತೆ. ತೂಕ ಕಡಿಮೆ ಮಾಡಲು i3 ಕಾರಿನ ಅಡಿಗಟ್ಟನ್ನು ’ಕರಿ ನಾರಿನ ಗಟ್ಟಿ ಪ್ಲಾಸ್ಟಿಕನಿಂದ’ (carbon-fiber-reinforced-plastic) ಮಾಡಲಾಗಿದೆ. ಈ ಗಟ್ಟಿ-ಪ್ಲಾಸ್ಟಿಕ್ ಉಕ್ಕು ಹಾಗೂ ಬೆಳ್ಳಿಹೊನ್ನಿನಶ್ಟೆ (aluminum) ಗಟ್ಟಿಯಾಗಿದ್ದು, ಅವುಗಳಿಗಿಂತ 30 ಇಂದ 50% ತೂಕ ಕಡಿಮೆ. ಈ ಪ್ಲಾಸ್ಟಿಕ್ಕಿನ ಬಾಳಿಕೆಯೂ ಹೆಚ್ಚು ಮತ್ತು ಇದನ್ನು ಮರುಬಳಕೆ ಕೂಡ ಮಾಡಬಹುದು.

ಕಾರಿಗೆ ಮಿಂಚು (electricity) ಒದಗಿಸಲು ಹಲವು ಮಿನ್ನಡಕಗಳನ್ನು (batteries) ಬಳಸಲಾಗಿದ್ದು,ಮಿಂಚಿನ ಕಸುವನ್ನು ಓಡುವ ಕಸುವಾಗಿ ಮಾರ‍್ಪಡಿಸುವ ಕದಲುಕವನ್ನು(motor) ಕಾರಿನ ಹಿಂಬಾಗದಲ್ಲಿ ಅಳವಡಿಸಲಾಗಿದೆ. ಹಗುರುಪೊನ್ನಿನಿಂದ (lithium-ion) ಮಾಡಿದ ಮಿನ್ನಡಕಗಳು 22 ಕಿಲೋವಾಟ್ ಕಸುವು ನೀಡುತ್ತವೆ.ಇವುಗಳಿಗೆ ಒಂದು ಸಾರಿ ಹುರುಪು (charge) ತುಂಬಿದರೆ ಸುಮಾರು 128-160 ಕಿ.ಮಿ ದೂರದವರೆಗೆ ಕಾರಿಗೆ ಕಸುವು ನೀಡಬಲ್ಲವು. 220 ಒತ್ತಾಟದಲ್ಲಿ (voltage) ಮಿನ್ನಡಕಗಳಿಗೆ ಹುರುಪು ತುಂಬಲು ತಗಲುವ ಹೊತ್ತು ಬರೀ ಮೂವತ್ತು ನಿಮಿಶಗಳು.

ಕಾರಿನ ಒಟ್ಟು ತೂಕ 1224 ಕೆ.ಜಿ. ಆಗಿದ್ದು, ಕಾರಿನ ಬೆಲೆ $ 41,350 ಅಂದರೆ ಸುಮಾರು 24,00,000 ರೂಪಾಯಿಗಳು. 2014 ನೆಯ ಮೊದಲ ಬಾಗದಲ್ಲಿ ಅಮೇರಿಕಾದಲ್ಲಿ i3 ಮಾರಾಟ ಶುರುವಾಗಲಿದೆ ಎಂದು BMW ತಿಳಿಸಿದೆ.

ಒಸಗೆಯ ಸೆಲೆ: popsci

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಎಲ್ಲರಗನ್ನಡ ನಾಡಿಗಳೆ, ನನಗೆ http://kn.wiktionary.org/ ಹಾಗೂ ಬರಹ ದಲ್ಲಿನ ಶಂಕರ ಬಟ್ ಗುರುಗಳು ಬರೆದಿರುವ ಕನ್ನಡದೇ ಪದ ನೆರಕೆಯ ಬಗ್ಗೆ ತಿಳಿದಿದೆ. ನಾನು ತಮ್ಮಲ್ಲಿ ಬಯಸುತ್ತಿರುವುದೇನೆಂದರೆ ಬರಹ ತಂತ್ರಾಂಶದಂತೆ ಈ ಆಂಗ್ಲದ ಪದಗಳಿಗೆ ಕನ್ನಡದ್ದೇ ಪದಗಳುಳ್ಳ ಪದನೆರಕೆ off line ಗೂ ಲಭ್ಯವಾದರೆ ಉತ್ತಮವಾಗಿ ಬರಿಗೆಗಳನ್ನು ಬರೆಯಲು ನೆರವಾಗುತ್ತದೆ. ತಾವು ಇದಕ್ಕೆ ಹಣವನ್ನು ನಿಗದಿಪಡಿಸಿದರೆ ಉತ್ತಮ.

  2. ybharath77 says:

    ಶ್ರೀನಿವಾಸಮೂರ‍್ತಿಯವರೆ,
    ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು – ₨ 180.00 Author:ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು

    ಈ ಹೊತ್ತಿಗೆ ಈಗಾಗಲೆ ಮಾರಾಟವಾಗುತ್ತಿದೆ , ಕೊಂಡುಕೊಳ್ಳಲು ಇಲ್ಲಿ ಚಿಟುಕಿಸಿ,
    http://www.akrutibooks.com/product/%E0%B2%87%E0%B2%82%E0%B2%97%E0%B3%8D%E0%B2%B2%E0%B2%BF%E0%B2%B6%E0%B3%8D-%E0%B2%AA%E0%B2%A6%E0%B2%97%E0%B2%B3%E0%B2%BF%E0%B2%97%E0%B3%86-%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B3%8D%E0%B2%A6%E0%B3%87-%E0%B2%AA%E0%B2%A6%E0%B2%97%E0%B2%B3%E0%B3%81

  3. ಕನ್ನಡ ನಾಡಿಗಳೆ ನೀವು ಹೊತ್ತಗೆಯಾಗಿಸಿರುವುದು ನನಗೆ ತಿಳಿದಿದೆ. ನಾನು ಕುರುಡನಾಗಿರುವುದರಿಂದ ಹೊತ್ತಗೆಯನ್ನು ಮತ್ತೊಬ್ಬರ ನೆರವಿನಿಂದ ಓದಿಸಿಕೊಳ್ಳಬೇಕಾದ ಅನಿವಾರ್ಯವಿದೆ. ಒಂದು ವೇಳೆ ತಾವು ಪದನೆರಕೆಯನ್ನು offline ತಂತ್ರಾಂಶವಾಗಿಸಿದರೆ ಅದನ್ನು ಹಣ ನೀಡಿ ಪಡೆಯುತ್ತೇನೆ. ಇದರಿಂದ ನನ್ನ ವೇಳೆ ಉಳಿದುಕೊಳ್ಳುತ್ತದೆ. ತಾವು ಆದಷ್ಟು ಬೇಗ ಈ ಕೆಲಸ ಮಾಡಬೇಕೆಂದು ನನ್ನ ಕೋರಿಕೆ. ಬರಹ ತಂತ್ರಾಂಶದಂತೆ ಈ ಪದನೆರಕೆಯನ್ನು ಟೋಟಲ್ ಕನ್ನಡ ಅಂಗಡಿಯಲ್ಲಿ ದೊರೆಯುವಂತೆ ಮಾಡಿದರೆ ಚೆನ್ನು.

ಅನಿಸಿಕೆ ಬರೆಯಿರಿ:

%d bloggers like this: