ಮಾಯಾವಿ

ಕುಮಾರ ದಾಸಪ್ಪ

ಮಾಯಾವಿ-1

ಕನಸಲ್ಲಿ ಬಂದು ಮನಸಲ್ಲಿ ನಿಂದವಳಿಗೆ
ಕಾಣದ ಲೋಕದಿ ಹುಡುಕಾಟ ನಡೆದಿದೆ
ಒಮ್ಮೊಮ್ಮೆ ತಿರುಗಿ ಬರುವಳವಳು ನೆನಪಿಗೆ
ಸಿಗದಿದ್ದರೂ ಅರಸಿ ಈ ಮನವು ಹೊರಟಿದೆ।

ಸುಡುನೆಲದ ದೂರದಿ ನಿಂತಂತೆ ಕಾಣಲು
ಹತ್ತಿರದಿ ಸರಿದರೆ ಮರೀಚಿಕೆಯು ಅವಳು
ಎದೆಯ ಬಾಗಿಲು ತೆರೆದು ಕಣ್ತೆರೆಯಲು
ಕಯ್ಗೆಟುಕದ ಹಾಗೆ ಮಾಯವೇ ಆದಳು।

ತೂಕಡಿಸಿದರೆ ಚುಚ್ಚಿ ಬೆಚ್ಚಿಬೀಳಿಸುವಂತೆ
ಮಿಂಚಂತೆ ಮನದಲ್ಲಿ ಮಿನುಗಿ ಮರೆಯಾದಳು
ಆಗಾಗ ತುಂಬಿದ ತಿಂಗಳ ಬೆಳಕಿನ ಹಾಲಂತೆ
ಕಂಗೊಳಿಸಿ ಕೊನೆಗೆ ಮಾಯವಾಗುವಳವಳು।

ಬಯಕೆ ಮೂಡಿದೆ ಮನದ ಮೂಲೆಯಲಿ
ಅವಳನ್ನು ನಾನು ಹುಡುಕಿಯೇ ತೀರಲು
ಉಸಿರಿರುವ ತನಕ ಹುಡುಕಾಟ ನಡೆಯಲಿ
ನಾ ಕಂಡ ಕನಸಿಗೆ ಜೀವ ತುಂಬಿಸಲು!

ಇವುಗಳನ್ನೂ ನೋಡಿ

1 ಅನಿಸಿಕೆ

  1. ತುಂಬಾ ಒಳ್ಳೆಯ ಕವನ..ಅದರಲ್ಲೂ ನಾಲ್ಕನೆಯ ಪ್ಯಾರವು ಬಹಳ ವಿಭಿನ್ನವಾಗಿದೆ.

ಅನಿಸಿಕೆ ಬರೆಯಿರಿ: