ನೀರಿನಲ್ಲಿ ನಂಜು

-ವಿವೇಕ್ ಶಂಕರ್

tap-water

ನೀರಿಲ್ಲದೇ ನಮ್ಮ ಬದುಕಿಲ್ಲ. ಆದರೆ ಕುಡಿಯುವ ನೀರಿನಲ್ಲಿ ನಂಜಿದ್ದರೆ! ನೀರೇ ನಮ್ಮ ಬಾಳಿಗೆ ಹಲವು ಬಗೆಯ ತೊಂದರೆಗಳನ್ನು ತಂದೊಡ್ಡಬಲ್ಲದು. ಇಂತ ನೀರಿನ ನಂಜುಗಳಲ್ಲಿ ನಂಜಿರ‍್ಪು(arsenic) ಕೂಡಾ ಒಂದು.

ನಂಜಿರ‍್ಪು ನೆಲದೊಳಗಿನ ಕಲ್ಲುಗಳಲ್ಲಿ, ನೀರಿನಲ್ಲಿ ಹಾಗೂ ಮಣ್ಣಿನಲ್ಲಿ ಇರುವಂತದು. ಚಿಲಿ, ಆರ‍್ಜಂಟಿನಾ, ಚೀನಾ, ಬಾರತ, ಮೆಕ್ಸಿಕೊ ಹಾಗೂ ಅಮೇರಿಕಾದ ನಾಡುಗಳಲ್ಲಿ ನೆಲನೀರಿನಲ್ಲಿ ತಾನಾಗಿಯೇ ಹೆಚ್ಚಿನ ಮಟ್ಟದಲ್ಲಿ ನಂಜಿರ‍್ಪು ಇರುತ್ತದೆ ಜೊತೆಗೆ ನಾಡುಗಳ ಕಯ್ಗಾರಿಕೆಯ ಚಟುವಟಿಕೆಯಿಂದಲೂ ಇದು ಹೆಚ್ಚಾಗುತ್ತದೆ.

ನಂಜಿರ‍್ಪಿನ(arsenic) ಮಟ್ಟ ಒಂದು ಎಲ್ಲೆಯೊಳಗಿದ್ದರೆ ಒಳ್ಳೆಯದು. ಇದರ ಮಟ್ಟ ಹೆಚ್ಚಾದಾಗ ಹಲವು ಬಗೆಯ ಬೇನೆಗಳು ಉಂಟಾಗುತ್ತವೆ. ಅವುಗಳಲ್ಲಿ ನರಗಳ,ಕರುಳು,ಈಲಿ(liver),ಕಾಪು ಏರ‍್ಪಾಟು(immune system),ಕಿಡ್ನಿ ಅಂಗಗಳ ಬೇನೆಗಳು ಮುಕ್ಯವಾದವುಗಳು. ಇವುಗಳ ಜೊತೆ ಸಕ್ಕರೆಬೇನೆ ಹಾಗೂ ಗುಂಡಿಗೆ ಬೇನೆ ಬರುವ ಸಾದ್ಯತೆ ಕೂಡಾ ಇದೆ.

ಇವೆಲ್ಲ ಕೇಳಿದ ಮೇಲೆ ಸಾಕಪ್ಪ ಸಾಕು ಅಂದುಕೊಂಡರೆ, ಉಸಿರುಗೂಡಿನ ಏಡಿಹುಣ್ಣಿಗೂ(lung cancer) ನಂಜಿರ‍್ಪಿನ ನಂಟಿದೆ ಎಂದು ಮಾಂಜುಗರು(doctors) ಅರಕೆಯಿಂದ ಕಂಡುಕೊಂಡಿದ್ದಾರೆ.ಹಲವು ಹತ್ತೇಡುಗಳಿಂದ (decades) ಹೊಗೆಬತ್ತಿ ಸೇದಿದ ಮೇಲೆ ಆಗುವ ಹಾನಿಯನ್ನು ನಂಜಿರ‍್ಪು ಕೆಲವು ವರುಶಗಳಲ್ಲಿಯೇ ಮಾಡಬಲ್ಲದು.

ಇತ್ತೀಚೆಗೆ ಬಾಂಗ್ಲಾದೇಶದ ಕುಡಿಯುವ ನೀರಿನಲ್ಲಿ ನಂಜಿರ‍್ಪಿನ ಮಟ್ಟ ತುಂಬಾ ಹೆಚ್ಚಾಗಿದ್ದು ಈ ನೀರನ್ನು ಕುಡಿದ ಮಂದಿಯಲ್ಲಿ ಉಸಿರುಗೂಡಿನ ಹಾನಿಗೊಳಗಾಗಿರುವುದು ಅರಕೆಗಳಿಂದ(research) ಕಂಡುಬಂದಿದೆ. ಅಮೇರಿಕಾದಲ್ಲಿ ಕೊಳಾಯಿ-ನೀರಿನಲ್ಲಿ ಕೂಡ ನಂಜಿರ‍್ಪು ತೊಂದರೆ ಮಟ್ಟದಲ್ಲಿರುವುದು ಕಂಡುಬಂದಿದೆ. ನೀರಲ್ಲಶ್ಟೇ ಅಲ್ಲದೇ ಇತ್ತೀಚಿಗೆ ಬೆಳೆಗಳಲ್ಲೂ ಈ ನಂಜಿನ ಅಂಶ ಇರುವುದಾಗಿ ತಿಳಿದು ಬಂದಿದೆ.

ಕುಡಿಯುವ ನೀರು ಚೊಕ್ಕವಾಗಿಸುವುದು ಎಂದಿಗಿಂತ ಇಂದು ತುಂಬಾ ಅರಿದಾಗಿದೆ.

(ಸುದ್ದಿಸೆಲೆ: popsci)

ಇವುಗಳನ್ನೂ ನೋಡಿ

2 ಅನಿಸಿಕೆಗಳು

 1. Anusha Rao says:

  ವಿವೇಕ್ ಶಂಕರ್’ರವರೇ,
  ಗುಂಡಿಗೆ ಬೇನೆ = ?
  ಸಕ್ಕರೆಬೇನೆ = ?

 2. ಬೇನೆ = disease
  ಸಕ್ಕರೆಬೇನೆ = diabetes
  ಗುಂಡಿಗೆಬೇನೆ = heart-disease

ಅನಿಸಿಕೆ ಬರೆಯಿರಿ: