ಜೊತೆಗಾರ

ಪ್ರೇಮ ಯಶವಂತ

_____-_______

ಜೊತೆಗಾರ ನೀನಿರಲು ನನ್ನಲಿ
ಹೊಸತನ ಮೂಡಿದೆ ಬಾಳಲಿ
ಪ್ರತಿ ಕ್ಶಣವೂ ಬಯಸುವೆ ಮನದಲಿ
ಜೊತೆಗಾರ ನೀನಿರು ನನ್ನಲಿ

ನನ್ನೆಲ್ಲ ತಪ್ಪುಗಳ ತಿದ್ದುತಲಿ
ಜೊತೆಯಾದೆ ನೀ ನನ್ನ ನೋವಿನಲಿ
ನಲಿವನು ತುಂಬುತ ನನ್ನಲಿ
ಜೊತೆಗಾರ ನೀನಿರು ನನ್ನಲಿ

ಹಿಡಿದಿಟ್ಟಿರುವೆ ನಿನ್ನ ಒಲವಿನಲಿ
ಬೆಳಕಾಗಿ ನನ್ನ ಬಾಳಿನ ದಾರಿಯಲಿ
ನಾನಿಡುವ ಒಂದೊಂದು ಹೆಜ್ಜೆಯಲಿ
ಜೊತೆಗಾರ ನೀನಿರು ನನ್ನಲಿ

ಹೊಸ ಜೀವ ತುಂಬಿ ನನ್ನಲಿ
ಹೊಸ ಹುರುಪು ಮೂಡಿಸಿ ಬಾಳಲಿ
ಹೊಸ ಬದುಕಿನ ಹುಡುಕಾಟದಲಿ
ಜೊತೆಗಾರ ನೀನಿರು ನನ್ನಲಿ

(ತಿಟ್ಟದ ಸೆಲೆ: ತಿಳಿದಿಲ್ಲ; ಬರಹಗಾರರನ್ನು ಸಂಪರ‍್ಕಿಸಿ)