ಅರಿವನ್ನು ಕಟ್ಟಿ ಹಾಕದಿರಲಿ ಕಾಪಿರಯ್ಟ್

 ಶ್ರೀನಿವಾಸಮೂರ‍್ತಿ ಬಿ.ಜಿ.

book

ಅರಿವು ಒಬ್ಬರಿಂದ ಮತ್ತೊಬ್ಬರಿಗೆ ಹರಿಯುತ್ತಲೇ ವಿಸ್ತರಣೆಯಾಗುತ್ತ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸಲು ಇರುವ ಉಸಿರು ಎಂದರೆ ತಪ್ಪು ಆಗಲಾರದು ಅಲ್ಲವೇ?

ಈ ಕೇಳ್ವಿಯನ್ನು ಕೇಳಲು ಅನಿಸಿದ್ದರ ಹಿಂದೆ ಒಂದು ಹುರುಳು ಇದೆ. ಅದೇನೆಂದರೆ, ಯಾವುದೇ ಒಂದು ಅರಕೆ, ಸಾಹಿತ್ಯದ ಪ್ರಕಾರ, ಸಂಹಿತೆ, ಬರಹ ಇತ್ಯಾದಿಗಳು ಹೊತ್ತಗೆಯಾಗಿ ಮಂದಿಯ ಕಯ್ ಸೇರಿದಾಗ ಅವುಗಳಲ್ಲಿನ ಒಳ್ಳೆಯ ಸತ್ವಗಳನ್ನು ಇದ್ದ ಹಾಗೇ ತಿಳಿಸಬೇಕೆಂದು ಕೆಲವರು ಪ್ರಯತ್ನ ಮಾಡುತ್ತಾರೆ. ಅಂತೆಯೇ ಅವರು ತಮ್ಮದೇ ನುಡಿಗೆ ಮಾರ‍್ಪಡಿಸಿಕೊಳ್ಳುತ್ತಾರೆ. ಕಾಪಿರಯ್ಟಿನ ತೊಡಕು ಉಂಟಾಗುವುದು ಇಲ್ಲೇ. ಇದರ ಪ್ರಕಾರ ಮೊದಲಿನ ಬರಹಗಾರರ ಅನುಮತಿಯನ್ನು ಪಡೆದೇ ಸದರಿಗಳನ್ನು ಮತ್ತೊಂದು ನುಡಿಗೆ ಮಾರ‍್ಪು ಮಾಡಬೇಕೆಂಬ ನಿಯಮವಿದೆ. ಆದರೆ, ಮತ್ತೊಂದು ನುಡಿಗೆ ಮಾರ‍್ಪಾಟಾದಾಗ, ಮಾರ‍್ಪಾಟುಗೊಂಡ ಸದರಿಗಳ ಹೊತ್ತಗೆಯ ನುಡಿಗೆ ಮಂದಿಯ ವ್ಯಾಪ್ತಿ ಎಶ್ಟಿದೆ? ಆ ಮಂದಿಯ ಬಾಳ್ವೆಯ ಮಟ್ಟ ಹೇಗಿದೆ? ಕಲಿಕೆ ಮನೆಗಳಲ್ಲಿ ಕಲಿಯುಗರ ವ್ಯಾಪ್ತಿ ಎಶ್ಟಿದೆ? ಈ ಅಂಶಗಳು ಗವ್ಣವಾಗುತ್ತವೆ.

ಇದಕ್ಕೆ ಒಳ್ಳೆಯ ಎತ್ತುಗೆ ಕೂಡಣ ಕೆಲಸಿಗರ ನಾಡಿನ ಕೂಟದ ನೀತಿ ಸಂಹಿತೆ (Code of Ethics of the National Association of Social Workers). ಈ ಕೂಡಣ ಕೆಲಸಿಗರ ನಾಡಿನ ಕೂಟದ ನೀತಿ ಸಂಹಿತೆಯನ್ನು ಇಂಗ್ಲೀಶ್ನಿಂದ ಕನ್ನಡಕ್ಕೆ ಮಾರ್‍ಪುಗೊಳಿಸಲಾಗಿದೆ. ಇದನ್ನು ಹೊತ್ತಗೆಯಾಗಿಸಲು $1500ರಶ್ಟು ತಗಲುವುದರಿಂದ ನಮ್ಮ ರುಪಾಯಿಯಲ್ಲಿ ಸರಿಸುಮಾರು 97500 ಆಗುತ್ತದೆ. ಇದು ಕೂಡಣದ ಕೆಲಸಿಗರಿಗೆ (social workers) ಕೆಲಸದ ಕಡೆಗಳಲ್ಲಿ ದಾರಿದೀಪವಾಗಿದೆ. ಇದನ್ನು ಅಮೇರಿಕಾದಲ್ಲಿರುವ ‘National Association of Social Workers’ರವರು ಅಣಿಗೊಳಿಸಿದ್ದಾರೆ. ಇವರನ್ನು ಸದರಿಯ ಪ್ರಕಟಣೆಗಾಗಿ ಅನುಮತಿ ನೀಡಬೇಕೆಂದು ಕೇಳಿಕೊಂಡಾಗ ಅವರು $1500 ನೀಡಬೇಕೆಂದೂ ಮತ್ತು ಕಾಪಿರಯ್ಟ್ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು. ಆದರೆ ರೂಪಾಯಿಯ ಬೆಲೆ ಹೆಚ್ಚಾಗುತ್ತದೆಂದೂ, ಕರ್‍ನಾಟಕದಲ್ಲಿ ಕೂಡಣಗೆಲಸ (social work)ವನ್ನು ಕಲಿಯುತ್ತಿರುವ ಮಂದಿ ತುಂಬಾ ಕಡಿಮೆ ಇದ್ದಾರೆಂದೂ, ಅದರಲ್ಲೂ ಕನ್ನಡ ನುಡಿಯಲ್ಲಿ ಕಲಿಯುತ್ತಿರುವ ಕಲಿಯುಗರ ಸಂಕ್ಯೆಯೂ ತೀರಾ ಕಡಿಮೆ ಇದೆ ಎಂದು ಅವರಿಗೆ ಮನವರಿಕೆ ಮಾಡಿದಾಗ್ಯೂ ಅವರು $1500 ನೀಡಿಯೇ ಪ್ರಕಟಿಸಬೇಕೆಂದು ತಿಳಿಸಿದರು.

ಹೀಗೆ ಬಹಳಶ್ಟು ಓದಿಕೊಂಡು ಅರಿವಿನ ವಿಸ್ತರಣೆಗೆಂದು ಇರುವವರು ಹಾಕುವ ಶರತ್ತುಗಳಿಗೆ ಏನೆಂದು ಹೇಳೋದು? ಹಣವಿದ್ದರೆ ಮಾತ್ರ ಜ್ನಾನ ಹವ್ದೇ? ವಿವೇಚನೆಯನ್ನು ಬಳಸಿ ಎಂದು ಹೇಳುವವರು ವಿವೇಚನೆಯನ್ನು ಬಳಸದೇ ಇರುತ್ತಾರಲ್ಲಾ? ಅಬ್ಬಾ!

(ಚಿತ್ರ ಸೆಲೆ: www.appsmylife.com)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s