ಮಾನವೀಯತೆ, ಗಾಂದಿ ಮತ್ತು ನೋಟು

– ಶ್ವೇತ ಪಿ.ಟಿ.

money

ನಿನ್ನೆಯಶ್ಟೆ ಕಂಡ ನೆನಪು ಇದೇಕೋ ಮಾಸಲು
ದಟ್ಟ ಕಾನನದ ನಡುವೆ ಬಟ್ಟ ಬಯಲು
ರಾಜಬೀದಿಯಲಿಲ್ಲ, ಹಾಳು ಸಂತೆಯಲಿಲ್ಲ

ನೀ ಕನಸಿನಲ್ಲಿ ಕಳೆದುಹೋದೆಯಾ?
ಮತ್ತೆ ಬಯಸದ ಹಾಗೆ!

ಗಾಂದಿ ಎದೆಯಲ್ಲಿ ಬೆಳಗಿ, ಜಾರಿ
ಈಗ ಬೂದಿ, ಗಾಂದಿ ನೋಟಿನ ಕಾಲಡಿಯಲ್ಲಿ
ಸತ್ತ ಪ್ರೇತದಂತೆ ನಿರ‍್ಜೀವ, ಸ್ಮಶಾನ ಶಾಂತಿ

ಹುಡುಕುವ ಹುಚ್ಚು ನನಗೆ
ಹಣತೆ ಹಚ್ಚಿ ಹುಡುಕಿಕೊಡಿ ’ಮಾನವೀಯತೆ’
ಈ ಜಗ ಕೊರಗುತಿದೆ, ಕೊರತೆಯಲ್ಲಿ.

(ಚಿತ್ರ: www.criticaltwenties.in)

ಇವುಗಳನ್ನೂ ನೋಡಿ

2 ಅನಿಸಿಕೆಗಳು

  1. ವಿಶ್ವಮಾನವ says:

    ಒಳ್ಳೆಯ ಪದ್ಯ. ಚಂಪಾರ “ಗಾಂಧಿ ಸ್ಮರಣೆ”ಯನ್ನು ನೆನಪಿಸಿತು. ಹೀಗೆ ಬರೆಯುತ್ತಿರಿ… ಈ ಪದ್ಯ ಓದಿದ ಮೇಲೆ ನನಗೆ “ಗೂಗಲ್ ನಲ್ಲಿ ಗಾಂಧಿ” ಎಂಬ ಪದ್ಯ ಬರೆಯಬೇಕೆನಿಸಿದೆ.

  2. Shwetha PT says:

    ಧನ್ಯವಾದ. ನನ್ನ ಸಾಲುಗಳು ಚಂಪಾರನ್ನು ನೆನಪಿಸಿದ್ದು ತುಂಬಾ ಸಂತೋಷದ ವಿಷಯ.

ಅನಿಸಿಕೆ ಬರೆಯಿರಿ: