ರಾಜಕೀಯ ರಂಗಕ್ಕೆ ಚದುರಂಗ

– ಶ್ರೀನಿವಾಸಮೂರ‍್ತಿ ಬಿ.ಜಿ.

King.webp

ಚದುರಂಗ ಅಪ್ಪಟ ನಮ್ಮ ದೇಶದ ಆಟ. ಅಂತೆಯೇ, ಅರಸರುಗಳಿಗೆ ಅಚ್ಚುಮೆಚ್ಚಿನ ಆಟ. ಅರಸರಿಗೆ ಚದುರಂಗ ಮಾತ್ರ ಅಚ್ಚುಮೆಚ್ಚು ಎಂದು ಹೇಳಬಹುದೇ?. “ಪಗಡೆ?” ಅಂತ ನಿಮ್ಮ ಮನಸ್ಸಿನಲ್ಲಿ ಕೇಳ್ವಿ ಇದೆ ಅಲ್ಲವೆ? ಊಊಊ! ಕಂಡಿತವಾಗಿಯೂ ಸರಿ. ಅದೂ ಇದೆ. ತಮ್ಮ ನಾಡಿನ ಬವಿಶ್ಯವನ್ನು ಊಹಿಸಲು ರೂಪಿಸಿಕೊಂಡ ಆಟವಶ್ಟೇ ಪಗಡೆ. ಚದುರಂಗ ಯುದ್ದಗಳಲ್ಲಿ ಜಯ/ಅಪಜಯಗಳನ್ನು ಗುರುತಿಸಿಕೊಳ್ಳಲು ಒಂದು ಎಚ್ಚರಿಕೆಯ ಯೋಜನೆಗೆ ನೆರವಾಗುವ ಒಂದು ಆಟ. ಅದಕ್ಕಾಗಿಯೇ ಈ ಆಟವನ್ನು ಅರಸರು, ಮಂತ್ರಿಗಳು ಹಾಗೂ ಪಡೆಗಳ ಮುಂದಾಳುಗಳು ಆಡುತ್ತಿದ್ದದ್ದು.

“ಈಗ ಯಾಕೆ ಇದನ್ನು ಈತ ಎಲ್ಲರಿಗೂ ತಿಳಿದಿರುವುದನ್ನು ಹೇಳುತ್ತಿದ್ದಾನೆ ” ಎಂದು ಯೋಚನೆ ಹತ್ತಿದೆಯೇ? ಚದುರಂಗದ ನಿಯಮಗಳನ್ನು ಬರೆಯದೆ ಚದುರಂಗವನ್ನು ರಾಜಕೀಯ ರಂಗಕ್ಕೆ ಬಳಸಬಹುದೆಂದು ನಾನು ನಿಮಗೆ ತಿಳಿಸಲು ಬಯಸಿದ್ದೇನೆ. ಅದರ ಬಗ್ಗೆ ಈ ಕೆಳಗೆ ಬರೆದಿದ್ದೇನೆ.

ಸಮವಾಗಿ ಕಪ್ಪು ಹಾಗೂ ಬಿಳಿಯ ಚವ್ಕಗಳಿಂದ ಕೂಡಿದ 8×8ರ ಮಣೆಯಲ್ಲಿ ಆನೆಗಳು-4, ಕುದುರೆಗಳು-4, ಒಂಟೆಗಳು-4, ಮಂತ್ರಿಗಳು-2, ರಾಜರು-2 ಹಾಗೂ ಸಯ್ನಿಕರು-16. ಒಟ್ಟು 32 ದಾಳಗಳು ಬೇಕಾಗಿದ್ದು ಅವುಗಳಲ್ಲಿ ಕಪ್ಪು ಹಾಗೂ ಬಿಳಿ ದಾಳಗಳು 16 ಬೇಕಾಗುತ್ತವೆ. ಎರಡು ಪಡೆಗಳು ಕಾದಾಡುವ ಹಾಗೆ ಇಬ್ಬರು ಆಳುಗಳು ಈ ಮಣೆಯಲ್ಲಿನ ದಾಳಗಳನ್ನು ಅನುಕ್ರಮವಾಗಿ ಜೋಡಿಸಿಕೊಂಡು ಆಡಬೇಕು. ಇದು ಚದುರಂಗದ ಆಟಕ್ಕೆ ಮೊದಮೊದಲಿಗೆ ಬೇಕಾಗುವ ವಸ್ತುಗಳು. ಈ ಆಟದಲ್ಲಿ ಬಳಸುವ ದಾಳಗಳ ಬದಲಾಗಿ ಮನುಶ್ಯರೇ ಸಯ್ನಿಕ, ಕುದುರೆ, ಆನೆ, ಒಂಟೆಗಳಾಗಿರಬೇಕು. ಮಂತ್ರಿ ಹಾಗೂ ಅರಸರುಗಳ ಪಾತ್ರವನ್ನು ರಾಜಕೀಯ ಪಕ್ಶಗಳಲ್ಲಿ ನಾಯಕರಾಗುವವರು ನಿರ‍್ವಹಿಸಬೇಕು. ಈ ಈರ್‍ವರೇ ಉಳಿದ ದಾಳಗಳನ್ನು ನಡೆಸಬೇಕು.

ಚದುರಂಗವನ್ನು ತಮ್ಮ ಪಕ್ಶಕ್ಕೆ ನೆರವಾಳುಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮತ್ತು ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಈ ಆಟವನ್ನು ಅವರು ಬಳಸಿಕೊಳ್ಳುವುದಾದರೆ ಮಡಿ-ಮಯ್ಲಿಗೆಯನ್ನು ಇಲ್ಲವಾಗಿಸಿಕೊಳ್ಳಬೇಕು. ಗೊಡ್ಡು ನೀತಿಗಳನ್ನು ಹೊಂದದೆ ನಾಡ ಒಳಿತಿಗೆ ಕಾರಣಿಗಳಾಗುವ ಮನಸ್ಸು ಮಾಡಬೇಕು. ಹಿಂಸೆಯ ದೋರಣೆಗಳನ್ನು ಬಿಟ್ಟು ಬಿಡಬೇಕು. ಬಳಿಕ ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಬೇಕು.

ಆಟಕ್ಕೂ ಮುನ್ನ

  1. ಪಕ್ಶದಲ್ಲಿ ನಾಯಕನಾಗಲು ಆಸಕ್ತರಾಗುವಂತಹ ಆಳುಗಳನ್ನು ಆ ಪಕ್ಶದವರು ಗುರುತಿಸಿಕೊಳ್ಳಬೇಕು.
  2. ಯಾರು ಹೆಚ್ಚು ತುಳಿತಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಚದುರಂಗವನ್ನು ಕಲಿಸುತ್ತಾರೋ ಮತ್ತು ಗೆಲ್ಲುತ್ತಾರೋ ಅವರೇ ನಾಯಕನೆಂದು ಸದರಿ ಪಕ್ಶದವರು ಗೋಶಿಸಬೇಕು.
  3. ಗುರುತಿಸಿದ ಆಳುಗಳಿಗೆ ದರ‍್ಮ/ಜಾತಿಗಳ ಬೇದವಿಲ್ಲದೆ ಎಲ್ಲಾ ವಯಸ್ಸಿನ ಹೆಣ್ಣು ಗಂಡುಗಳನ್ನು ಆಟಕ್ಕೆ ಹೊಂಚಿಕೊಳ್ಳುವಂತೆ ಸೂಚಿಸಬೇಕು.
  4. ಹೊಂಚಿಕೊಂಡ ಬಳಿಕ ಅವರಿಗೆ ಚದುರಂಗ ಆಟದ ಬಗ್ಗೆ ತಿಳಿಸಬೇಕು.

ಆಟವಾಡುವಾಗ

  1. ಎತ್ತರದ ನೆಲದಲ್ಲೇ ಚದುರಂಗದ ಅಂಗಣವನ್ನು ಸಜ್ಜುಗೊಳಿಸಿದ ಬಳಿಕ ಆಟವನ್ನು ನೋಡುವವರಿಗೆ ಇಂತಿಶ್ಟು ಹಣವನ್ನು ನಿಗದಿಪಡಿಸಿ ಜನರನ್ನು ಸೇರಿಸಿ ಹಣವನ್ನು ಕೂಡಿಸಿಕೊಳ್ಳಬೇಕು. ಆಟದ ಮೊದಲಿಗೆ ಎನ್.ಸಿ.ಸಿ. ಹಾಗೂ ಸಯ್ನಿಕರು ಬಳಸುವಂತಹ ವಾದ್ಯಗಳನ್ನು ನುಡಿಸುತ್ತಾ ನಾಡ ಹಾಡನ್ನು ಆಡಬೇಕು ಮತ್ತು ನೆಲದವ್ವಳಿಗೆ ವಂದಿಸಬೇಕು.
  2. ಸಯ್ನಿಕರು, ಅರಸರು ಮತ್ತು ಮಂತ್ರಿಗಳನ್ನು ಬಿಂಬಿಸುವಂತಹ ಟೋಪಿಗಳನ್ನು ಹಾಕಿಕೊಳ್ಳುವುದರ ಜೊತೆಗೆ ಕುದುರೆ, ಆನೆ, ಒಂಟೆ ಇವುಗಳ ಬದಲಿಗೆ ಈಗ ಯುದ್ದಗಳಲ್ಲಿ ಬಳಕೆಯಾಗುತ್ತಿರುವ ವಸ್ತುಗಳನ್ನು ಬಿಂಬಿಸುವ ಟೋಪಿಗಳನ್ನು ಹಾಕಿಕೊಳ್ಳಲು ಆಟಕ್ಕೆ ದಾಳವಾದವರಿಗೆ ಹೇಳಬೇಕು.
  3. ದಾಳವನ್ನು ಕಳೆದುಕೊಂಡ ಗುಂಪು ರೋದಿಸಬೇಕು. ದಾಳವನ್ನು ಉರುಳಿಸಿದ ಗುಂಪು ಸಂತೋಶದಲ್ಲಿ ಬೀಗಬೇಕು. ಮತ್ತು ವಾದ್ಯಗಳು ಬಾವನೆಗೆ ತಕ್ಕಂತೆ ಹಿನ್ನೆಲೆಯಾಗಬೇಕು.
  4. ಗೆದ್ದ ಗುಂಪು ನಗುವಿನಲ್ಲಿಯೂ ಸೋತ ಗುಂಪು ಅಳುಮೋರೆಯಲ್ಲಿಯೂ ಮುಳುಗಬೇಕು. ವಾದ್ಯಗಳು ಬಾವನೆಗೆ ತಕ್ಕಂತೆ ಹಿನ್ನೆಲೆಯಾಗಬೇಕು.
  5. ಗೆದ್ದ ಗುಂಪಿನಲ್ಲಿ ದಾಳವಾಗಿ ಬಳಕೆಯಾದವರಿಗೆ ಹಣದ ನೆರವನ್ನು ನೀಡಬೇಕು.

ಹೀಗೆ ಪಕ್ಶಗಳು ಚದುರಂಗವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳಬಹುದು. ಇದು ಕೇವಲ ರಾಜಕೀಯ ಪಕ್ಶಗಳಿಗೇನೆ ಇರುವ ಆಟವಶ್ಟೆ ಎಂದುಕೊಳ್ಳದಿರಿ. ಈ ಆಟ ಎಲ್ಲಾ ಕ್ಶೇತ್ರಗಳಿಗೂ ಹೊಂದಿಕೆಯಾಗಬಲ್ಲ ಆಟವಾಗಿದೆ. ಕ್ರೀಡಾ ಇಲಾಕೆಯವರು ಈ ಆಟವನ್ನು ಮಂದಿ ಮೆಚ್ಚುಗೆಯ ಆಟವಾಗಿಸಬಹುದು. ಚದುರಂಗ ಒಂದು ನಾಡನ್ನು ಕಟ್ಟಲೋಸುಗ ಅರಸರಿಗೆ ಪೂರಕವಾಗಿದ್ದ ಆಟವಾಗಿದ್ದರಿಂದ ಇಂದಿನ ಸನ್ನಿವೇಶಕ್ಕೆ ಈ ಆಟದ ಬಳಕೆಯನ್ನು ಜನಪ್ರೀಯಗೊಳಿಸಲಿಕ್ಕಾಗಿಯಶ್ಟೇ ಈ ಕಲ್ಪನೆಯನ್ನು ಬರೆದಿದ್ದೇನೆ. ನಾಡು ಎಂದ ಮೇಲೆ ರಾಜಕೀಯ ಇದ್ದೇ ಇರುತ್ತದಾದ್ದರಿಂದ ರಾಜಕೀಯ ಪಕ್ಶಗಳಲ್ಲಿ ನಾಯಕರಾಗುವವರಿಗೆ ಪ್ರಾಕ್ಟಿಕಲ್ ಟಾಸ್ಕ್‍ಗೆ ಈ ಆಟವನ್ನು ಬಳಸಿಕೊಳ್ಳುವುದು ಸರಿಯಾಗಿಯೇ ಇದೆ ಎಂದೇ ನನ್ನ ಅನಿಸಿಕೆ.

ಇದರ ಆಶಯ

ಸವಾಲಿಗೊಂದು ಸವಾಲ್ ಇದ್ದೇ ಇರುತ್ತದೆ. ಅದಕ್ಕಾಗಿಯೇ ಎಲ್ಲರೂ ಸವಾಲಿಗೆ ತೆರೆದುಕೊಳ್ಳಬೇಕು. ಆಗಲ್ಲ ಎಂದು ಕಯ್ಚೆಲ್ಲುವವರು ಯಾರಿಗೂ ತೊಂದರೆ ನೀಡದೆ ಸವಾಲಿಗೆ ಸವಾಲನ್ನು ಒಡ್ಡುವವರಿಗೆ ದಾರಿ ಬಿಟ್ಟುಕೊಡಬೇಕು. ಈ ಆಟದಲ್ಲಿ ತಪ್ಪು ಕಂಡಿತವಾಗಿಯೂ ಇಲ್ಲ. ಆದರೆ ರಾಜಕೀಯದವರು ಈ ಆಟವನ್ನು ಈಗ ನಾನು ವಿವರಿಸಿದಂತೆ ಬಳಸಿಕೊಂಡಲ್ಲಿ ತಪ್ಪನ್ನು ಅಂಟಿಸುವ ಸಾದ್ಯತೆ ಇರುತ್ತದೆ. ದಯವಿಟ್ಟು ಈ ಆಟದ ಹುರುಳಿಗೆ ತಪ್ಪನ್ನು ಅಂಟಿಸಬೇಡಿ ಎಂದು ತಮ್ಮಲ್ಲಿ ಮನವಿ.

(ಚಿತ್ರ ಸೆಲೆ: susanpolar.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: