ತಾಯ ರುಣವು ತೀರಲಿ

– ಶ್ವೇತ ಪಿ.ಟಿ.

kanada-rajyotsava

ಕಡೆದ ಕಲ್ಲು ಶಿಲ್ಪವಾಗಿ
ಇತಿಹಾಸವ ಸಾರಿದೆ
ದಾಸ ಶರಣ ಸಾಹಿತ್ಯದಿ
ಜ್ನಾನ ಜ್ಯೋತಿ ಬೆಳಗಿದೆ

ಕನ್ನಡ ನುಡಿ ಸಿರಿಯು ಮೆರೆದು
ಬಾವ ಚಿಲುಮೆಯಾಗಿದೆ
ಕನ್ನಡ ಗುಡಿ ಬಾವಯ್ಕ್ಯದಿ
ತೆರೆದ ಬಾಗಿಲಾಗಿದೆ

ಕನ್ನಡಾಂಬೆ ಹಿರಿಮೆ ಹೊತ್ತು
ಸುವರ‍್ಣ ತೇರು ಸಾಗಲಿ
ಕನ್ನಡ ಕಲೆ ಸಂಸ್ಕ್ರುತಿಯ ಬೇರು
ನಾಡಿನೆಲ್ಲೆ ಹರಡಲಿ

ಎಲ್ಲರೆದೆಯ ದರ‍್ಪಣದಿ
ಕನ್ನಡದ ಬಿಂಬ ಮೂಡಲಿ
ಮತ್ತೆ ಜನಿಸಿ ಈ ನೆಲದಿ
ತಾಯ ರುಣವು ತೀರಲಿ

(ಚಿತ್ರ: putti-prapancha.blogspot.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: