ಮರೆಯಲಾರೆ…

ದೇವೆಂದ್ರ ಅಬ್ಬಿಗೇರಿ

brain_600

ಅಗಲಿಕೆಯ ಈ ಕ್ಶಣದಲಿ
ನೆನಪುಗಳನು ಮೆಲಕು ಹಾಕಿ
ಅಸಹನೀಯ ದೂರವನು ಮೀರಿಸುವ ಸಾಹಸದಲಿ
ಇಂದಿನ ಕಹಿ ಸತ್ಯ ಹಿಂದಿನ ಸಿಹಿ ನೆನಪನ್ನು ಮೆಟ್ಟಿ ನಿಂತು
ಅಟ್ಟಹಾಸದಿಂದ ನಗುತಿದೆ.
ಕೊನೆಗೆ ಕಹಿಯೊಂದೆ ನಿಜ ಸತ್ಯವೆಂದು ಒಪ್ಪಿಕೊಳ್ಳದೆ
ಬೇರೆ ದಾರಿ ಕಾಣುತಿಲ್ಲ…

ಅಂದಿನ ಸವಿಗಳಿಗೆ, ಇಂದಿನ ದೂರದ ಕಹಿಯನ್ನು
ಇಮ್ಮಡಿಸಿದೆಂದ ಮೇಲೆ,
ಸಿಹಿ-ಕಹಿ ಒಂದೆ ಅಲ್ಲವೆ?
ಕಾಲಚಕ್ರದ ಗತಿಯಲ್ಲಿ
ಕಂಡಿವೆ ಇಬ್ಬಗೆಯಾಗಿ
ಮರೆವು-ನೆನಪುಗಳ ನಡುವೆ ಅಂತರ ಮಾಯವಾಗಿ
ಅವುಡುಗಚ್ಚಿ ಕುಳಿತು ಮರೆಯಲೇಬೇಕೆಂದಾಗ
ನಿನ್ನ ನೆನಪು ದುತ್ತನೆ ಎದಿರು ನಿಂತು ನಗುತಿದೆ.
ಇಗೋ! ನಿನ್ನನ್ನು ಮರೆತೇ ಬಿಟ್ಟೆ ಎಂದು ನಿಟ್ಟುಸಿರು ಬಿಟ್ಟ ಆ ಗಳಿಗೆಯಲಿ
ನಿನ್ನ ನೆನಪು ಮತ್ತೆ ಹುಟ್ಟಿ, ಸಾಯದೆ
ಕಾಣುತಿದೆ ಅನುಗಳಿಗೆ

(ಚಿತ್ರ: www.nytimes.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: