ಮೊಗ-ಬಗೆ

– ಬರತ್ ಕುಮಾರ್.

12353865-human-designer-and-the-intelligent-constructive-brain-with-a-front-facing-human-head-that-has-gears-

ಮೊಗವೊಂದ ಕಂಡರೆ
ಬಗೆಯು ಇನ್ನೊಂದ ಬಗೆವುದು

ಮೊಗಕ್ಕೆ ಮೀರಿದ ಹುರುಪು
ಅರಿವಿಲ್ಲದೆ ಮಾಡುವುದು ತಪ್ಪು
ಬಗೆಗೆ ತೀರದ ಉಂಕಿನ ಆಳ
ಸರಿತಪ್ಪುಗಳ ತೂಗುವುದು ಬಹಳ

ನೋಡಲಾಗದು ತನ್ನ ತಾ ಮೊಗ
ಪಡುವುದು ಹೆಮ್ಮೆ ಬಲುಬೇಗ
ಅಡಗಿ ತನ್ನ ತಾ ನೋಡುವುದು ಬಗೆ
ಅಡರದೆಂದೂ ನಿಗಿರಿ ಹೊರಗೆ

ಕಣ್ದಿಟಗಳ ನಂಬುವುದು ಮೊಗ
ಹೊರಗಿನ ಚೆಲುವೇ ಅದಕೆ ಮೆರುಗು
ಕಾಣದ ದಿಟಗಳ ತೋರುವುದು ಬಗೆ
ಒಳಗಿನ ಒಲವೇ ಬಗೆಯ ಪಾಂಗು

ಮೊಗ ಮಿಗಿಲೋ ಬಗೆ ಮಿಗಿಲೋ
ಮೊಗ ಮಿಗಿಲಲ್ಲ ಬಗೆ ಮಿಗಿಲಲ್ಲ
ಮೊಗ-ಬಗೆಯ ಹದದ ಬೆರಕೆ
ಮಾಗಿದ ಉಂಕಿಗೆ ಹರಕೆ

ನಿರಿನಿರಿಯಲ್ಲ ಈ ನೆಲದ ಕಟ್ಟಲೆ
ಬರಿಬರಿದು ಮೇಲ್ಮಯ್ಯ ತರಲೆ
ಮೊಗದ ನೊಗವು ಬಗೆಯ ಕಯ್ಯಲೇ
ಬಗೆಯ ನಡೆ ಮೊಗದ ಮೇಲೆ

(ಚಿತ್ರ: www.123rf.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Satish Joshi says:

    tumba chennagide bharat, ಮೊಗ-ಬಗೆಯ ಹದದ ಬೆರಕೆ, the line is too good

  2. smhamaha says:

    ಮೊಗದ ನೊಗವು ಬಗೆಯ ಕಯ್ಯಲೇ……ಸೊಗಸಾಗಿದೆ

ಅನಿಸಿಕೆ ಬರೆಯಿರಿ: