ರವೆ ಉಂಡೆ

ಕಲ್ಪನಾ ಹೆಗಡೆ.

inchu p 7901

ಇದು ಸಾಮಾನ್ಯವಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲರ ಮನೆಯ ತಿನಿಸು ರವೆ ಉಂಡೆ. ಕೆಲವರು ತಿಂದಿರಬಹುದು ಅಲ್ವಾ? ರವೆ ಉಂಡೆ ತಿಂದವರಿಗೆ ಗೊತ್ತಿರತ್ತೆ ಎಶ್ಟು ಚೆನ್ನಾಗಿರತ್ತೆ ಅಂತ. ತಿನ್ನಬೇಕು ಅಂದಾಗ ನಾವು ಮನೆಯಲ್ಲಿಯೇ ಸುಲಬವಾಗಿ ತಯಾರಿಸಿಕೊಳ್ಳಬಹುದು. ರವೆ ಉಂಡೆ ಮಾಡುವುದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಿದ್ದರೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು

ಅರ್‍ದ ಕೆ.ಜಿ. ರವೆ, ಅರ್‍ದ ಕೆ.ಜಿ. ಸಕ್ಕರೆ, 250 ಗ್ರಾಂ ತುಪ್ಪ, 1 ಲೋಟ ನೀರು, ಕಾಯಿತುರಿ, ಚಿಟಿಕೆ ಏಲಕ್ಕಿ ಪುಡಿ.

ಮಾಡುವ ಬಗೆ

ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ. ಬಾಣಲೆಯಲ್ಲಿ ಸಕ್ಕರೆ ಪಾಕವನ್ನು ಮಾಡಿಕೊಳ್ಳಿ. ಸಕ್ಕರೆ ಪಾಕಕ್ಕೆ ಹುರಿದ ರವೆಯನ್ನು ಕಾಯಿತುರಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಬೆರೆಸಿ. ಸ್ವಲ್ಪ ಬಾಣಲೆಯಿಂದ ಬಿಟ್ಟ ನಂತರ ಆರಲಿಕ್ಕೆ ಪಕ್ಕಕ್ಕೆ ಇಟ್ಟುಕೊಳ್ಳಿ. ಸ್ವಲ್ಪ ಆರಿದ ನಂತರ ಕಯ್ಯಿಗೆ ತುಪ್ಪ ಹಚ್ಚಿಕೊಂಡು ಉಂಡೆಯನ್ನಾಗಿ ಮಾಡಿಕೊಳ್ಳಿ. ತಯಾರಿಸಿದ ರವೆ ಉಂಡೆಯನ್ನು ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks