ಕವಿಯಾಗಿ ಮರೆಯಾದೆ

 ಹರ‍್ಶಿತ್ ಮಂಜುನಾತ್.

Karnataka-background-check

ಬರೆಯದೇ ಕವಿಯಾದೆ
ಕವಿತೆಯ ಕಂಪಿಗೆ ಮರುಳಾದೆ,ಕಸ್ತೂರಿ ಕಂಪಾದೆ
ಕನ್ನಡ ಕಸ್ತೂರಿಗೆ ಮಗನಾದೆ.

ಹೂಬಿಡದ ಮರವಾದೆ
ಬಯಸಿ ಬಂದವರಿಗೆ ನೆರಳಾದೆ,
ಸ್ನೇಹಕ್ಕೆ ಜೊತೆಯಾದೆ
ಗೆಳೆತನವ ಹಿಂಬಾಲಿಸೊ ಗೆಳೆಯನಾದೆ.

ಮನಕೆ ದನಿಯಾದೆ
ಹೊರಸೂಸೊ ರಾಗ ಸ್ವರವಾದೆ,
ಹುಣ್ಣಿಮೆ ರಾತ್ರಿಯಾದೆ
ಬೆಳಕು ತರುವ ಪೂರ‍್ಣಚಂದ್ರನಾದೆ.

ಒಲವಿನ ಓಲೆಯಾದೆ
ಪ್ರೀತಿ ಚಿಗುರುವಾಗ ದ್ಯಾನಿಯಾದೆ, ಸಲ್ಲಾಪದ ಮಾತಾದೆ
ನೀ ನುಡಿವಾಗ ಮವ್ನಿಯಾದೆ.

ಪ್ರೇಮ ಪರ‍್ವವಾದೆ
ಪಲಿಸೋ ಮುಂಚೇನೆ ಮರೆಯಾದೆ
ತಾಯಿಯಾಗಿ ದಯ್ವವಾಗಿ ಸಲಹಿ
ಉಸಿರು ನೀಡಿ ಹಸಿವು ನೀಗಿದ
ಚೆಲುವ ಕನ್ನಡನಾಡಿಗೆ ಚಿರರುಣಿಯಾದೆ.

(ಚಿತ್ರ: www.crederity.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks