ನಾ ಬರೆವ ಕವಿತೆ ನೀ ಅರಿಯಲಾರೆ

– ಬರತ್ ಕುಮಾರ್.

{ತಮಿಳಿನ ನಲ್ಬರಹಗಳನ್ನು ಕನ್ನಡಕ್ಕೆ ನುಡಿಮಾರು ಮಾಡಲಾಗಿದಿಯೋ ಇಲ್ಲವೊ ಗೊತ್ತಿಲ್ಲ. ಈಗಾಗಲೇ ಮಾಡಲಾಗಿದ್ದರೂ ಎಶ್ಟು ಆಗಿದಿಯೋ ಗೊತ್ತಿಲ್ಲ. ಹಾಗಾಗಿ ಆ ಒಂದು ದಿಕ್ಕಿನಲ್ಲಿ ಹೊಸಗಾಲದ ತಮಿಳಿನ ನಲ್ಬರಹಗಳು ಹೇಗಿವೆ ಎಂದು ಅರಿತುಕೊಳ್ಳಲು ಮತ್ತು ಅವುಗಳಿಂದ ನಾವು ಪಡೆಯಬೇಕಾದುದೇನಾದರೂ ಇದ್ದರೆ ಪಡೆದುಕೊಳ್ಳೋಣವೆಂದು ಈ ಮೊಗಸು. ಕೂಡಲ್.ಕಾಂ ನಿಂದ ಆಯ್ದುಕೊಂಡ ಜೆಯರಾಮ್ ಎಂಬುವರ ತಮಿಳು ಕವನವನ್ನು ಕನ್ನಡಕ್ಕೆ ತರುವ ಮೊಗಸೇ ಇದೋ ಇಲ್ಲಿದೆ… }

407422299_eef7bd414b

ನಾ ಬರೆವ ಕವಿತೆ
ನಿಕ್ಕಿಯಾಗಿ
ನೀ ಅರಿಯಲಾರೆ

ಎನ್ನ ಬಗೆಗನ್ನಡಕವ ನೀ
ತೊಟ್ಟು ನೋಡಿದರೂ
ನೀ ತಿಳಿಯಲಾರೆ

ಎನ್ನ
ಒಳನೋಟದಲ್ಲಿ
ನನಗೆ ಸರಿಯಾಗಿ
ತಿಳಿಯುವ ನಿಲ್ಮೆಯಲಿ
ಅದೇ ಪಟವಿಡಿದು
ಕಯ್ಯಲ್ಲಿ ಕವಿತೆಯಾಯ್ತು
ಎಂಬುದು ನಿನಗೆ ಮಾತ್ರ ಗೊತ್ತಾ?
ನನ್ನ ಕವಿತೆ ತಿಳಿಯಿತಾ?

ನಿನಗೆ
ನನ್ನ ಕವಿತೆ ತಿಳಿಯುವಹಾಗೆ
ನನಗೆ
ಬರೆಯಲಾಗದು

ನನ್ನ ನೋವುಗಳೇ
ಕವನವಾಗಿ ಕಯ್ಯ ಪಡೆದು
ಅದನ್ನು ಹುಟ್ಟಿಸಲು ತಿಳಿಯದೆ
ಅದನ್ನು ಬಂದ ಹಾಗೆ ಪೋಣಿಸಿದೆ

ನನ್ನ ಬಗೆಯಲಿರುವ
ಉಂಕುಗಳಿಂದ
ಪದಗಳ ಗೋರಿ
ನೆನಪುಗಳ ಹರಿಸಿ
ಅನಿಸುಗಳ ಸೇರಿಸಿ
ಕವಿತೆಯ ಹನಿ ಹನಿಸಿದೆನು

ತೂರಿಬಂದ ಹನಿಗಳಲಿ
ನೆನೆವುದು
ನಿನಗೆ ಆಗುವುದಿಲ್ಲವೆಂದರೂ
ನನ್ನ ಹನಿಗವನ ನಿನ್ನ ಬಿಡದು

ನಾ ಪಡೆದ
ಸಿರಿಯು ನೆಲೆಯಾಗಿ ನಿಂತಿದೆ
ಸೇತುವೆಯ ಮೇಲೆ ಹರಡಿದ
ಮಳೆಗಾಲದ ಮೋಡದ ಹಾಗೆ
ಕೊಂಚ ನೇರ
ನನ್ನ ಕವಿತೆ

ಮೀರಿ ಹೇಳುವೆ
ನಾ ಬರೆದ ಕವಿತೆ
ನಿಕ್ಕಿಯಾಗಿ
ನಿನಗೆ ತಿಳಿಯದು

(ಚಿತ್ರ: www.flickr.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks