ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದು?

ರಗುನಂದನ್.

brazil-2014-world-cup

ಹಿಂದಿನ ಬರಹದಲ್ಲಿ ಪಿಪಾ(FIFA) ಹೊರಹಾಕಿರುವ ವಿಶ್ವಕಪ್ ಡ್ರಾ ಗಳನ್ನು ನೋಡಿದೆವು. ಈಗ ಒಂದೊಂದು ಗುಂಪಿನೊಳಗೆ ಯಾವ ಬಗೆಯ ಪಯ್ಪೋಟಿ ಏರ್‍ಪಡಬಹುದು ಎಂಬುದನ್ನು ನೋಡೋಣ. ಕಾಲ್ಚೆಂಡು ತಿಳಿವಿಗರು(Football Pundits) ಸಾಮಾನ್ಯವಾಗಿ ಯಾವುದೇ ದೊಡ್ಡ ಮಟ್ಟದ ಕಾಲ್ಚೆಂಡು ಕೂಟದ ಡ್ರಾಗಳು ಹೊರಬಿದ್ದಮೇಲೆ ಆ ಗುಂಪುಗಳಲ್ಲಿ ಹೆಚ್ಚು ತೊಡಕಾಗಿರುವ ಗುಂಪನ್ನು ಗುರುತಿಸುತ್ತಾರೆ. ಅದಕ್ಕೆ ಅವರು ಗ್ರೂಪ್ ಆಪ್ ಡೆತ್ (group of death) ಎಂದು ಹೆಸರಿಸುತ್ತಾರೆ. ಅಂದರೆ ಈ ಗುಂಪಿನಲ್ಲಿ ಹೆಚ್ಚು ಬಲವಾದ ತಂಡಗಳು ಆಡುತ್ತವೆ ಮತ್ತು ಎಶ್ಟೇ ಬಲಶಾಲಿಯಾಗಿದ್ದರೂ ಆ ತಂಡಗಳಿಗೆ ಮುಂದಿನ ಹಂತಕ್ಕೆ ಹೋಗುವುದೇ ಒಂದು ತೊಡಕಾಗಿ ಮಾರ್‍ಪಡಬಹುದು. ಕನ್ನಡದಲ್ಲಿ ಇದಕ್ಕೆ ತೊಡಕಾದ ಗುಂಪು ಎಂದು ಹೆಸರಿಸೋಣ. ಈ ಸಲಿಯ ವಿಶ್ವಕಪ್ಪಿನಲ್ಲಿ ತೊಡಕಾದ ಗುಂಪು ಯಾವುದು ಮತ್ತು ಅದನ್ನು ಹೇಗೆ ಗುರುತಿಸುತ್ತಾರೆ ಎಂದು ನೋಡೋಣ.

ಮೊದಲಿಗೆ FIFA ಒಕ್ಕೂಟವು ಕೊಟ್ಟಿರುವ ಸ್ತಾನ(Ranking) ಗಳು ಮತ್ತು ಗಳಿಸಿರುವ ಅಂಕಗಳನ್ನು ನೋಡೋಣ. ಕ್ರಿಕೆಟ್ಟಿನಲ್ಲಿ ಹೇಗೆ ತಂಡಗಳಿಗೆ ಸ್ತಾನ ಮತ್ತು ಅಂಕಗಳು ಕೊಡಲಾಗುತ್ತೋ ಅದೇ ಬಗೆಯಲ್ಲಿ ಕಾಲ್ಚೆಂಡಿನಲ್ಲಿಯೂ ತಂಡಗಳಿಗೆ ಸ್ತಾನಗಳನ್ನು ಕೊಡಲಾಗುತ್ತೆ. ಇದು ಆ ತಂಡಗಳ ಇದುವರೆಗಿನ ಸಾದನೆಯ ಮೇಲೆ ಕೊಡಲಾಗಿದೆ.

A ಗುಂಪು

ಸ್ತಾನ/ಅಂಕ

B ಗುಂಪು

ಸ್ತಾನ/ಅಂಕ

C ಗುಂಪು

ಸ್ತಾನ/ಅಂಕ

D ಗುಂಪು

ಸ್ತಾನ/ಅಂಕ

ಬ್ರೆಜಿಲ್ 10/1102 ಸ್ಪೇನ್ 1/1507 ಕೊಲಂಬಿಯಾ 4/1200 ಉರುಗ್ವೆ 6/1132
ಕ್ರೊವೇಶಿಯಾ 16/971 ಹಾಲೆಂಡ್ 9/1106 ಗ್ರೀಸ್ 12/1055 ಕೋಸ್ಟಾ ರಿಕಾ 31/738
ಮೆಕ್ಸಿಕೊ 20/892 ಚಿಲಿ 15/1014 ಅಯ್.ಕೋಸ್ಟ್ 17/918 ಇಂಗ್ಲೆಂಡ್ 13/1041
ಕ್ಯಾಮರೂನ್ 51/612 ಆಸ್ಟ್ರೇಲಿಯಾ 59/564 ಜಪಾನ್ 48/638 ಇಟಲಿ 7/1120
ಒಟ್ಟು 97/3577 ಒಟ್ಟು 84/4191 ಒಟ್ಟು 81/3811 ಒಟ್ಟು 57/4031
E ಗುಂಪು ಸ್ತಾನ/ಅಂಕ  F ಗುಂಪು ಸ್ತಾನ/ಅಂಕ G ಗುಂಪು ಸ್ತಾನ/ಅಂಕ H ಗುಂಪು ಸ್ತಾನ/ಅಂಕ
ಸ್ವಿಟ್ಜರ್‍ಲ್ಯಾಂಡ್ 8/1113 ಅರ್‍ಜೆಂಟೀನ 3/1251 ಜರ್‍ಮನಿ 2/1318 ಬೆಲ್ಜಿಯಮ್ 11/1098
ಇಕ್ವೆಡಾರ್ 23/852 ಹೆರ್‍ಜಿಗೋವಿನ 21/886 ಪೋರ್‍ಚುಗಲ್ 5/1172 ಆಲ್ಜೀರಿಯಾ 26/800
ಪ್ರಾನ್ಸ್ 19/893 ಇರಾನ್ 45/650 ಗಾನಾ 24/849 ರಶ್ಯಾ 22/870
ಹೊಂಡುರಾಸ್ 41/688 ನಯ್ಜೀರಿಯಾ 36/710 ಯು.ಎಸ್.ಎ 14/1019 ಕೊರಿಯಾ 54/577
ಒಟ್ಟು 91/3546 ಒಟ್ಟು 105/3497 ಒಟ್ಟು 45/4358 ಒಟ್ಟು 113/3345

ಮೇಲಿನ ಎಂಟು ಗುಂಪುಗಳ ಪಟ್ಟಿಯನ್ನು ನೋಡಿದರೆ ಮೊದಲಿಗೆ ಕಾಣುವುದು G ಗುಂಪು. ಕಡು ಹೆಚ್ಚು ಅಂಕಗಳನ್ನು ಹೊಂದಿರುವ ಈ ಗುಂಪಿನಲ್ಲಿ ಜರ್‍ಮನಿ ಮತ್ತು ಪೋರ್‍ಚುಗಲ್ ಮುಂದಿನ ಹಂತಕ್ಕೆ ಹೋಗಬಹುದು. ಆದರೆ ಯು.ಎಸ್.ಎ ಅದನ್ನು ತಡೆದೀತೇ ಎಂಬುದನ್ನು ಕಾದುನೋಡಬೇಕು.

ಬಳಿಕ ಕಾಣುವುದು B ಗುಂಪು. ಇಲ್ಲಿ ಮೂರು ಬಲಶಾಲಿ ತಂಡಗಳಿವೆ. ಸ್ಪೇನ್-ಹಾಲೆಂಡ್ ಸೆಣಸಾಟ ಕಳೆದ ವಿಶ್ವಕಪ್ಪಿನ ಕಡೆಯಾಟ(Final) ಮತ್ತೆ ಮರುಕಳಿಸಲಿದೆ. ಚಿಲಿ ಕೂಡ ಒಳ್ಳೆ ತಂಡವೇ ಆಗಿದೆ. D ಗುಂಪಿನಲ್ಲಿ ಇರುವ ಬಲಶಾಲಿ ತಂಡಗಳು ಉರುಗ್ವೆ, ಇಂಗ್ಲೆಂಡ್ ಮತ್ತು ಇಟಲಿ. ಇಂಗ್ಲೆಂಡ್ ತಂಡಕ್ಕೆ ಜಗತ್ತಿನಲ್ಲಿ ಹೆಚ್ಚು ಅಬಿಮಾನಿಗಳಿದ್ದು ಈ ಗುಂಪನ್ನು ನೋಡಿದ ಬಳಿಕ ಇಂಗ್ಲೆಂಡ್ ಮುಂದೆ ಹೋಗಬಲ್ಲುದೆ ಎಂಬ ದೊಡ್ಡ ಪ್ರಶ್ನೆ ಕಾಡಿದೆ.

ಮುಂದಿನ ಬರಹದಲ್ಲಿ ಒಂದೊಂದು ಎಲ್ಲಾ ಗುಂಪುಗಳ ತೆರಹುಗಳ(chances) ಬಗ್ಗೆ ಒಂದು ಕಣ್ಣಾಡಿಸೋಣ.

(ಚಿತ್ರಸೆಲೆ: brazilfifaworldcup2014.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 22/01/2014

    […] ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು […]

ಅನಿಸಿಕೆ ಬರೆಯಿರಿ: