‘ಯಾಕೆ ಬರಲಿಲ್ಲ ಮಳೆಯೇ ನೀನು ? ‘

 ಹರ‍್ಶಿತ್ ಮಂಜುನಾತ್.

2003-004-f07

ನಡು ನೆತ್ತಿಯನು ಸುಡುತಿಹನು ಸೂರಿಯ
ಬೆಂಕಿ ಉಂಡೆಗಳ ಉಗುಳುತ,
ಬಿಡು ಬಿಸಿಲಿಗೆ ಬರಡಾಯ್ತು ಬೂಮಿ
ತನ್ನನ್ನು ತಾನು ಬಿರಿದುಕೊಳ್ಳತ
ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ?

ಮುಗಿಲ ಅಂಚಿನಲಿ ಮೋಡ ಇಣುಕಿದೆ
ಹೊಸದೇನೋ ಒಂದು ಚಯ್ತನ್ಯ ತುಂಬುತ,
ನಿರಂತರತೆಯಲಿ ವಿಶೇಶತೆಯನು ಕಾಣಲು
ಮುಚ್ಚದೆಯೆ ಕಾಯುತಿದೆ ಜೋಡಿ ಕಣ್ಗಳು
ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ?

ಒಣಗಿ ಹೋದ ನೆಲದ ನಡುವೆ
ಪಯ್ರು ಬೆಳೆದು ಪಲವ ಕಾಣೋ ಕನಸು,
ಮುರಿದ ಬದುಕ ಎಳೆದು ಒಡನೆ
ಇರುಳ ನಡುವೆ ಬೆಳಕು ಹುಡುಕೊ ಹುರುಪು
ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ?

ಪೊರೆದ ನಂಬಿಕೆ ಸುಳ್ಳಾಯ್ತು ಕೊನೆಗೆ
ಕಂಡ ಕನಸು ಮಾಸಿ ಹೋಯ್ತು ಮೆಲ್ಲಗೆ
ತಿಂದಿದ್ದೆಲ್ಲ ನೋವೆ ಕೊನೆ ವರೆಗೆ
ಕೊನೆಗೂ ಜೀವ ಮಣ್ಣಾಯ್ತು ದರೆಗೆ
ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ?

(ಚಿತ್ರ: data.iucn.org)Categories: ನಲ್ಬರಹ

ಟ್ಯಾಗ್ ಗಳು:, , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s