ಸೇರು ನೀ ನನ್ನ…

ಜಗದೀಶ್ ಗವ್ಡ

pleasant_sunset_alone-wide

ಸಂಜೆ ಮಬ್ಬು ಕವಿಯಿತು
ಬೀದಿ ದೀಪ ಬೆಳಗಿತು
ತಂಪುಗಾಳಿ ಬೀಸಿತು
ಪ್ರೇಮಿಗಳು ಬರುವ ಸಮಯವಾಯಿತು
ನೆರಳಲ್ಲಾದರು ಸರಿಯೆ
ಸೇರು ನೀ ನನ್ನ ಸೂರ‍್ಯ ಜಾರುವ ಮುನ್ನ

ಬರಗಾಲದಿ ನನ್ನ ಪಾಲಿನ ನೀರನ್ನು ನಿನಗೆ ನೀಡುವೆನು
ಬಾರಿ ಮಳೆಯಲಿ ನೀ ಬೀಳದಂತೆ ತಬ್ಬಿ ಹಿಡಿವೆನು
ನಂಜುಗಾಳಿಯು ನಿನ್ನತ್ತ ಸುಳಿಯದಂತೆ ತಡೆಯುವೆನು
ನಿನ್ನ ಕಡಿಯಲು ಬಂದ ಕೊಡಲಿಗೆ ನಾ ತಲೆಕೊಡುವೆನು
ಹೇಗಾದರೂ ಸರಿಯೆ
ಸೇರು ನೀ ನನ್ನ ಸೂರ‍್ಯ ಜಾರುವ ಮುನ್ನ

(ಚಿತ್ರ: www.hd2wallpapers.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: