ಬಯ ಬೇಡ ಗೆಳತಿ

 ಹರ‍್ಶಿತ್ ಮಂಜುನಾತ್.

1369941

ಒಲವು ಸುರಿದ
ಮೊದಲ ಮಳೆಗೆ ಏಕಾಂಗಿ ನಾನು,
ಪ್ರಣಯ ಮಿಡಿದ
ಮೊದಲ ಸ್ವರಕೇ ತನ್ಮಯ ನಾನು.

ಕೊರೆಯೋ ಚಳಿಗೆ
ನಡುಗೋ ಬಯ ಬೇಡ ಗೆಳತಿ,
ನಿನ್ನ ಬಿಗಿದಪ್ಪೋ
ನನ್ನ ತೋಳತೆಕ್ಕೆಯಿದೆ ಉಸಿರ ಒಡತಿ.

ಸುರಿಯುವ ಮಳೆಗೆ
ನನೆಯುವ ಬಯ ಬೇಡ ಗೆಳತಿ,
ನನ್ನ ಒಲವೇ
ನಿನ್ನ ಕಾಯೋ ಕೊಡೆಗಳು ಗರತಿ.

ಬಿರಿಯುವ ಬಿಸಿಲಿಗೆ
ಉರಿಯುವ ಬಯ ಬೇಡ ಗೆಳತಿ,
ಪೊರೆಯೋ ಸೆಲೆಯಾಗಿ
ನಿನ್ನೊಂದಿಗೆ ಇರುವೆ ಪ್ರತಿ ಸರತಿ.

ಬೀಸೋ ಬಿರುಗಾಳಿಗೆ
ಸಿಲುಕೋ ಬಯ ಬೇಡ ಗೆಳತಿ,
ಪ್ರೀತಿ ತಂಗಾಳಿ
ಬಿಗಿದಪ್ಪುವುದು ಕೇಳದೇ ನಿನ್ನ ಅಣತಿ.

ನಟ್ಟ ನಡುರಾತ್ರಿ
ದಟ್ಟ ಕತ್ತಲ ಬಯ ಬೇಡ ಗೆಳತಿ,
ಪೂರ್‍ಣ ಚಂದ್ರನಾಗಿ
ಜೊತೆ ಇರುವೆ ನಾ ನಿನ್ನ ಪ್ರಣತಿ.

ಒಲವ ಹೇಳಲು
ನಿನಗ್ಯಾರ ಬಯ ಬೇಡ ಗೆಳತಿ,
ನಿನಗೆ ಆಸರೆಯಾಗಿ
ನಾನಿರುವಾಗ ನಮಗೇಕೆ ಪರರ ಸಮ್ಮತಿ ???

(ಚಿತ್ರ: www.desicomments.com)

 

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: