ಒಂದು ರಾತ್ರಿ…

ವಿಬಾ ರಮೇಶ್

rain-night-wallpaper

ಒಂದು ರಾತ್ರಿ…
ಸುರಿವ ಸೋನೆ ಮಳೆ
ಯಾರೋ ಬಿಕ್ಕಿ ಬಿಕ್ಕಿ ಅತ್ತಂತೆ
ನುಂಗುವ ಕತ್ತಲು ,ಗುಯ್ಯುಗುಟ್ಟುವ ಶಬ್ದ
ಎಲ್ಲಿಂದಲೋ ಬಂದು ತಿವಿಯುವ ಈಟಿಯಂತೆ

ಕತ್ತಲಲ್ಲಿ ಹುದುಗಿ ಹೋಗಿರುವ ಕತೆಗಳು
ಬೂದಿ ಮುಚ್ಚಿದ ಕೆಂಡದಂತೆ
ಆಗಾಗ ಹಾರುವ ಚಟಾಕೆಗಳು
ಮುಕವಾಡಗಳ ಹಿಂದೆ ಅಡಗಿರುವ ಮುಕಗಳಂತೆ

(ಚಿತ್ರ: downloadwallpaperhd.net)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: