ಪೂರ‍್ಣಚಂದ್ರ ತೇಜಸ್ವಿ

ತ.ನಂ.ಜ್ನಾನೇಶ್ವರ

purana

ಪೂರ‍್ಣಚಂದ್ರನಿಗೆ ಎಶ್ಟೊಂದು ಕಳೆಗಳು!
ಬರೆವಣಿಗೆ, ಹೋರಾಟ, ಪರಿಸರ, ಬೇಟೆ,
ವಿಜ್ನಾನ, ಪೋಟೋಗ್ರಪಿ, ಕಂಪ್ಯೂಟರ್, ಗ್ರಾಪಿಕ್ಸ್,…
ಒಂದೆ, ಎರಡೆ!
ಅಪ್ಪನ ಹಾದಿಯ ಬಿಟ್ಟು,
ತನ್ನದೇ ಜಾಡು ಹಿಡಿದು ಹೊರಟ.
ಆನೆ ನಡೆದದ್ದೇ ದಾರಿ!
ಇವ ಬಾಯಿ ತೆರೆದರೆ
ಪತ್ರಕರ್‍ತರಿಗೆ ಹಬ್ಬ!
ನೇರ ಮಾತು, ಹರಿತ ವಾಗ್ಬಾಣಗಳ ಸುರಿಮಳೆ!
ಪ್ರಶಸ್ತಿ ಸನ್ಮಾನಗಳಿಂದ ಮಾರು ದೂರ!
ಜನಜಂಗುಳಿಯಿಂದ ದೂರವಿದ್ದೂ
ಜನಮಾನಸಕ್ಕೆ ಹತ್ತಿರ!
ನಡುಮದ್ಯಾಹ್ನ ಹೊಟ್ಟೆಬಿರಿಯೆ ಬಿರಿಯಾನಿ ತಿಂದು,
ನಡುಮನೆಯಿಂದ ಎದ್ದು ಹೇಳದೆ ಕೇಳದೆ ಹೊರಟೇಬಿಟ್ಟ!
ಸದಾ ಬೆರಗು ಹುಟ್ಟಿಸು ಸುತ್ತಣ ಮಾಯಾಲೋಕವ ಬಿಟ್ಟು,
ಇನ್ನೊಂದು ಮಾಯಾಲೋಕವ ಅರಸುತ್ತ ಹೊರಟನೆ?
ನಮ್ಮೆಲ್ಲ ಪ್ರಶ್ನೆಗಳಿಗೆ ಉಳಿದದ್ದು ನಿರುತ್ತರ!
ಇವ ಸ್ರುಶ್ಟಿಸಿದ ಪಾತ್ರಗಳು
ನಮ್ಮ ನಡುವೆ ಇನ್ನೂ ಜೀವಂತ.

(ಚಿತ್ರ: karavenalnudi.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಕೆಳಗಿನಿಂದ ಐದನೇ ಸಾಲಿನಲ್ಲಿ ‘ಹುಟ್ಟಿಸು’ ಎಂಬುದು ‘ಹುಟ್ಟಿಸುವ’ ಎಂದಾಗಲಿ.

ಅನಿಸಿಕೆ ಬರೆಯಿರಿ: