‘ಮಾಡಿದ’ ಕಯ್ಗೆ ಅರಿವಿನ ಕಸುವು

ವಿವೇಕ್ ಶಂಕರ್.

artificial hand

ಹಲವು ದೂಸರುಗಳಿಂದ ಹಲವು ಮಂದಿಗೆ ಕಯ್ಯನ್ನು ತುಂಡರಿಸುವ ಎಸಕ ಮಾಡಬೇಕಾಗುತ್ತದೆ. ಕಯ್ಯಿ ಕಳೆದುಕೊಂಡವರಿಗೆ ಮಾಡಿದ ಕಯ್ಯನ್ನು(artificial hand) ಆಮೇಲೆ ಹಾಕುತ್ತಾರೆ. ಆದರೆ ಈ ಮಾಡಿದ ಕಯ್ ನಮ್ಮ ಕಯ್ಯಿ ಹಾಗೆ ನೆರೆಯಾಗಿ ಕೆಲಸ ಮಾಡುವುದಿಲ್ಲ. ಮಾಡಿದ ಕಯ್ಯಿಗೆ, ನಮ್ಮ ಕಯ್ಗಿರುವ ಮುಟ್ಟುವ ಅರಿವು ಇರುವುದಿಲ್ಲ, ಹಾಗಾಗಿ ಇದನ್ನು ಬಳಸುವುದು ಕಯ್ ಕಳೆದುಕೊಂಡವರಿಗೆ ತೊಂದರೆ ಆಗುತ್ತದೆ. ಆದರೆ ಯೂರೋಪಿನ ಅರಕೆಗಾರರು ಈ ಮಾಡಿದ ಕಯ್ಗೆ ಅರಿವಿನ ಕಸುವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ಇದರ ಸಲುವಾಗಿ ಏನೇ ಕೆಲಸ ಮಾಡಿದರು ಮುಟ್ಟಿನ ಅರಿವನ್ನು ಒದಗಿಸುವ ಕೆಲಸ ದೊಡ್ಡ ಅಡ್ಡಿಯಾಗಿತ್ತು ಆದರೆ ಯುರೋಪಿನ ಈ ಅರಕೆ ನೋಡಿದರೆ ಇದನ್ನು ಕೂಡ ದಾಟುವ ನಂಬಿಕೆ ಮೂಡಿದೆ. ಇಕೋಲ್ ಕಲಿಕೆಕೂಟದ ಪೆಡರಲೆ ಡಿ ಲವ್ಸನ್ನಿನ (Federale de Lausanne) ನರಬಿಣಿಗೆಯರಿಗರಾದ ಸಿಲ್ವೆಸ್ಟ್ರೊ ಮಿಚೆರ (Silvestro Micera), ಸ್ವಿಸ್ ಮತ್ತು ಇಂಟಲಿ ಈ ಅರಕೆಯನ್ನು ಕಯ್ಗೊಂಡ ಅರಿಗರು. ಅರಕೆಯಲ್ಲಿ ಹೊಮ್ಮಿದ ’ಮಾಡಿದ’ ಕಯ್ಯನ್ನು ಡೆನ್ನಿಸ್ ಆಬೊ ಸೊರೆನ್ಸನ್ ಎಂಬ ಓರ‍್ವ ಡಚ್ ನಾಡಿಗರು ಉಪಯೋಗಿಸಿ ಅದರಿಂದ ತುಂಬಾ ನೆರವಾಗುತ್ತಿದೆ ಎಂದಿದ್ದು, ಮಾಡಿದ ಕಯ್ಯಿಗೆ ಅರಿವು ತುಂಬುವ ಅರಕೆ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ.

ಈ ಬೆಳವಣಿಗೆಯ ಮೊದಲು, ಮಾಡಿದ ಕಯ್ಯನ್ನು ಬೇನಿಗರು (patients) ಉಪಯೋಗಿಸುವಾಗ ಏನೇ ಹಿಡಿದರು ಕಣ್ಣಿನಿಂದಲೇ ನೋಡಬೇಕಾಗಿತ್ತು ಜತೆಗೆ ವಸ್ತುಗಳು ಕಯ್ಯಿಂದ ಬೀಳುವುದು ಹೆಚ್ಚಾಗಿತ್ತು. ಆದರೆ ಈ ಮೇಲಿನ ಆರಯ್ಕೆಯಲ್ಲಿ ಡೆನ್ನಿಸ್ ಸೊರೆನ್ಸನ್ ಅವರ ಕಯ್ನಲ್ಲಿ ನಡುವಿನ ಮತ್ತು ಮೊಣೆಲಿನ ನರಗಳ (median and ulnar nerves) ಒಳಗೆ ಒಂದು ಸಣ್ಣ ಮಿಂಚುಗಣೆಗಳನ್ನು (electrode) ಒಳಕೂರಿಸಿದರು. ಈ ನರಗಳು ಕೆಲವು ಅರಿವುಗಳನ್ನು(sensations) ಉಂಟುಮಾಡುತ್ತವೆ. ಸಣ್ಣ ಮಟ್ಟದಲ್ಲಿ ಮಿಂಚನ್ನು ಕಳುಹಿಸಿದಾಗ ಕಾಣೆಯಾದ ಬೆರಳುಗಳು ಕದಲುತ್ತವೆಂದು ಸೊರೆನ್ಸನ್ ತಿಳಿಸಿದರು, ಇದರಿಂದ ನರಗಳು ಬೇಕಾದ ಮಾಹಿತಿಯನ್ನು ಕಳುಹಿಸುತ್ತಿವೆ ಎಂಬುದು ಗೊತ್ತಾಗುತ್ತದೆ.

ಬೆರಳುಗಳು ಏನನ್ನು ಮುಟ್ಟಿದೆಂದು ತಿಳಿಯುವ ಸಲುವಾಗಿ ಮಿಚೆರ್ ತಂಡವೂ ಮಾಡಿದ ಕಯ್ಯಿನ ಎರಡು ಬೆರಳುಗಳ ಮೇಲೆ ಎರಡು ಅರಿವುಗೆಗಳನ್ನು(sensors) ಹಾಕಿತು. ಸೊರೆನ್ಸನ್ ಏನೇ ಮುಟ್ಟಿದರು ಮುಟ್ಟುವ ಬಲಕ್ಕೆ ತಕ್ಕಂತೆ ಈ ಅರಿವುಗೆಗಳ ಮಿಂಚುಗಣೆಗಳು ನರಗಳನ್ನು ತಟ್ಟುತಿತ್ತು. ಇದರಿಂದ ಮಾಡಿದ ಕಯ್ ಹಾಗೂ ಮಿದುಳಿಗೂ ಅರುಹು ನಡೆಯುತ್ತಿತ್ತು. ಈ ಆರಯ್ಕೆ ನಡೆಯುವಾಗ ಸೊರೆನ್ಸನ್ ಅವರು ಏನನ್ನು ಮುಟ್ಟುತ್ತಿದ್ದಾರೆಂದು ನೋಡದ ಹಾಗೆ ಕಣ್ಣುಕಟ್ಟಿದರು. ಅರಿವುಗೆಗಳು ಕೆಲಸ ಮಾಡಲು ತೊಡಗಿದಾಗಿನಿಂದ ತಮ್ಮ ಕಯ್ಗೆ ಮುಟ್ಟುವ ಅರಿವಾಗುತ್ತಿದೆ ಎಂದು ಸೊರೆನ್ಸನ್ ತಿಳಿಸಿದರು.

Sorensen_orange

ಮಾಡಿದ ಕಯ್ಯಿಗೆ ಅರಿವು ನೀಡುವ ಸಲುವಾಗಿ ಇನ್ನೂ ಕೆಲಸ ನಡೆಯಬೇಕಾಗಿದೆ, ಇಂದಿನ ಬೆಳವಣಿಗೆಗಳು ಅಂಬೆಗಾಲಿನ ಹೆಜ್ಜೆಗಳೆಂದು ಅರಿಗರು ತಿಳಿಸಿದ್ದಾರೆ ಯಾಕೆಂದರೆ ಇಲ್ಲಿ ಬಳಸಿದ ‘ಮಾಡಿದ ಕಯ್’ ನಮ್ಮ ದಿಟವಾದ ಕಯ್ಯಿಯ ಪರಿಜು ಪಡೆಯಬೇಕಾದರೆ ಇನ್ನೂ ಹಲವು ಏಡುಗಳ ಕೆಲಸವಿದೆಯೆಂದು ಮಿಚೆರ ತಿಳಿಸಿದ್ದಾರೆ ಆದರೆ ಈ ಮೇಲಿನ ಆರಯ್ಕೆ ನೋಡಿದರೆ ಒಂದು ಹೊಸ ನಂಬಿಕೆ ಮೂಡಿದೆ. ಕಯ್ ಇಲ್ಲದಿದ್ದರೂ ಮತ್ತೊಮ್ಮೆ ಈ ಮಾಡಿದ ಕಯ್ಯಲ್ಲಿ ಅರಿವು ದೊರೆಯುತ್ತದೆಂಬ ನಂಬಿಕೆ ಒಸಗೆನುಡಿ, ಇದು ಬೇಗ ಬರಲಿಯೆಂದು ಹಾರಯ್ಸೋಣ.

ಬಗೆಯ ಮಾತು: ಈ ಮೇಲಿನ ಅರಕೆ ಯುರೋಪಿನಲ್ಲಿ ನಡೆದಿದೆಂದು ತಿಳಿಯುತ್ತದೆ. ಈ ನಾಡುಗಳಲ್ಲಿ ತಾಯ್ನುಡಿಯ ಕಲಿಕೆಗೆ ತುಂಬಾ ಒತ್ತುಕೊಟ್ಟಿರುವುದನ್ನು ನಾವು ಗಮನಿಸಬೇಕು. ಆದರೆ ಬಾರತದಲ್ಲಿ ತಾಯ್ನುಡಿಯಲ್ಲಿ ಕಲಿತರೆ ಹಿಂದಕ್ಕೆ ಸಾಗುತ್ತೇವೆಂಬ ತಪ್ಪು ಅನಿಸಿಕೆಗಳಿವೆ. ಈ ಮೇಲಿನಂತಹ ಅರಕೆಗಳನ್ನು ನೋಡಿದರೆ ತಾಯ್ನುಡಿಯಲ್ಲಿ ಕಲಿಯುವುದರಿಂದ ಬೆರಗು ಉಂಟಾಗುವಂತಹ ಅರಕೆಗಳು ಹೊಮ್ಮುತ್ತವೆಂದು ನಮಗೆ ತಿಳಿಯುತ್ತದೆ ಆದುದರಿಂದಲೇ ತಾಯ್ನುಡಿಯ ಕಲಿಕೆ ಎಂದೆಂದಿಗೂ ಒಳಿತೆಂದು ನನ್ನ ಗಟ್ಟಿಯಾದ ನಂಬಿಕೆ.

(ಒಸಗೆಯ ಮತ್ತು ತಿಟ್ಟದ ಸೆಲೆ: news.msn.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: