ಮಂದಿನುಡಿ

ಶ್ರೀನಿವಾಸಮೂರ‍್ತಿ ಬಿ.ಜಿ (ಕಲೆ ಹಾಕಿದವರು)

{ಆಡುನುಡಿಯನ್ನು ಬರಹಕ್ಕೆ ಇಳಿಸುವ ಮೊಗಸುಗಳಲ್ಲಿ ಇದೂ ಒಂದು. ಇಲ್ಲಿ ಮಂದಿಯಾಡುವ ನಗೆಯ, ಹುರುಳ್ದುಂಬಿದ ಮಾತುಗಳನ್ನು ಕೊಡಲಾಗಿದೆ. ಈ ಕೆಳಗಿನ ಮಾತುಗಳು ತುಮಕೂರು ಜಿಲ್ಲೆ ಹಾಗೂ ನೆಲಮಂಗಲದ ಸುತ್ತಲೂ ಬಳಕೆಯಲ್ಲಿದೆ. ಇಲ್ಲಿ ಬರೆಯಲಾದ ಯಾವುದೇ ಜಾತಿ ಹಾಗೂ ದರ‍್ಮಗಳ ಹೆಸರುಗಳನ್ನು ಕೀಳಾಗಿಸಲಾಗಿದೆ ಎಂದು ಪರಿಗಣಿಸದೆ ಸಾಮಾಜಿಕ ಮಾತುಗಳೆಂದು ಪರಿಗಣಿಸಬೇಕೆಂದು ಮನವಿ. ಅಂತೆಯೇ ನುಡಿಯ ಚವ್ಕಟ್ಟಿನಲ್ಲಿ ಓದಿಕೊಳ್ಳಬೇಕಾಗಿ ಮನವಿ }

1.
ಬೇವರ‍್ಸಿ ಬೇವರ‍್ಸಿ ಬೇಸ್ಕೊಂಡ್ ತಿನ್ನು
ಅಂಗ್ಡಿ ಸಾಲಲ್ ಆಯ್ಕೊಂಡ್ ತಿನ್ನು
ತುರ‍್ಕ್ರು ಮನೆಲ್ ತುಪ್ಪ ತಿನ್ನು
ಅಗಸ್ರು ಮನೆಲ್ ಅನ್ನ ಉಣ್ಣು

2.
ಅಯ್ನೋರೇ ಅಯ್ನೋರೆ
ಅವ್ರೆಕಾಳ್ ತಿನ್ನವ್ರೆ
ದರ‍್ರಾಬುರ‍್ರಾ ಊಸವ್ರೆ
ಮಡ್ಕೆ ತುಂಬಾ ಕಸಿಯೋರೆ

3.
ತಿಂದಿದ್ದೇ ಬಂತು, ಉಂಡಿದ್ದೇ ಬಂತು
ವಿಬೂತಿ ಪುರ‍್ದಲ್ ತಂಗಿದ್ದೇ ಬಂತು
ಓದ್ರ್ ಓತದೆ
ವಡಿಯಲ ಬಂಡಿ ಅರೆ ಮೇಲೆ

4.
ಅಕ್ಕಾ ಅಕ್ಕ ಗಬ್ಬೂರಿ ನೋಡೆ
ಗಬ್ಬಾದ ಕುರಿ ಕೂಯ್ಕೊಂಡ್ ಒಬ್ಳೆ ತಿಂದೋಳ್ನ ನೋಡೆ

5.
ಅತ್ತೆ ಬಯ್ಯೋದ್ ಇಲ್ಲಿ ನೆತ್ತಿ ಸೀಳೋದ್ ಅಲ್ಲಿ
ಮಾವುನ್ ಬಯ್ಯೋದ್ ಇಲ್ಲಿ ಮಾನಾ ತೆಗ್ಯೋದ್ ಅಲ್ಲಿ
ನಾದ್ನಿ ಬಯ್ಯೋದ್ ಇಲ್ಲಿ ನಾಲ್ಗೆ ಸೀಳೋದ್ ಅಲ್ಲಿ
ಗಂಡುನ್ ಬಯ್ಯೋದ್ ಇಲ್ಲಿ ಗುಂಡ್ಗೆ ಸೀಳೋದ್ ಅಲ್ಲಿ

6.
ವಲಕ್ಕೋದ್ರೆ ಒರ‍್ಳಾಡ್ತಿ
ಗದ್ದೇಗ್ ಓದ್ರೆ ಗುದ್ದಾಡ್ತಿ
ಪಟ್ಣುಕ್ ಓದ್ರೆ ಪರ‍್ದಾಡ್ತಿ
ಸಿನ್ಮಕ್ಕ್ ಓದ್ರೆ ನಗಾಡ್ತಿ

7.
ಸುಂದ್ರಮ್ ಸುಂದ್ರಮ್ ಚನಾಗಿದ್ದೀಯಾ?
ಅತ್ತೆ ಬಂದ್ರೆ ಅಳ್ತೀಯ?
ಮಾವಾ ಬಂದ್ರೆ ಮುಳ್ಕಾಡ್ತಿ
ಗಂಡಾ ಬಂದ್ರೆ ನಗಾಡ್ತಿ

8.
ಅವ್ವಾಲೇ ಅಣ್ಣಾ ಆರ್ ಬಣ್ಣ ಹಾರಾಕ್ತೀನಿ
ಮೂರ್ ಬಣ್ಣ ಮುರ‍್ದಾಕ್ತೀನಿ
ತುಂಕೂರ್ ಬಣ್ಣನ್ ತೂರಾಕ್ತೀನಿ
ನಿನ್ ಬಣ್ಣನ್ ಮೇಲಾಕ್ತೀನಿ

9.
ಮೂರ್ ಮಾತಾಡ್ಕೊಂಡ್ ಬರ‍್ತೀಯ
ಮೂಲಂಗಿ ತಿಂತೀಯ
ಹಾರಾಡ್ಕೊಂಡ್ ಬರ‍್ತೀಯ
ಹಾಗ್ಲು ಕಾಯ್ ತಿಂತೀಯ

10.
ಪಟ್ಣುದ್ ಮಂದಿ ಪರ‍್ದಾಡ್ಕೊಂಡ್ ಪಗ್ರುಕ್ ಓತಾರೆ
ಮನೆ ಮಕ್ಳು ಮಾನಾನ್ ಕಳಿತಾರೆ

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    ಚನ್ನಾಗಿದೆ … ೩, ೫, ೮,೯ ಹಾಗು ೧೦ ಇವುಗಳ ಹುರಳನ್ನು ಯಾರಾದರು ಬಿಡಿಸಿ ಹೇಳಿ

ಅನಿಸಿಕೆ ಬರೆಯಿರಿ: