ಅನಾನಸ್ ಗೊಜ್ಜು

ಕಲ್ಪನಾ ಹೆಗಡೆ.

Pineapple

ಅನಾನಸ್ :
ತೋಟದಲ್ಲಿ ಬೇಳೆಯುವ ಅನಾನಸ್‍ನಿಂದ ಏನೆಲ್ಲಾ ಉಪಯೋಗ ಅಲ್ವಾ? ಅನಾನಸ್ಸಿನಿಂದ ಜ್ಯೂಸ್ ತಯಾರಿಸಬಹುದು, ಹೋಳುಗಳನ್ನಾಗಿ ಮಾಡಿ ಸಕ್ಕರೆ ಹಾಕಿ ತಿನ್ನಬಹುದು, ಕೇಸರಿ ಬಾತ್ ಹಾಗೂ ಗೊಜ್ಜು ಮಾಡಬಹುದು. ಗೊಜ್ಜುಗಳಲ್ಲೇ ಅನಾನಸ್ ಗೊಜ್ಜು ಅಂದ್ರೆ ತುಂಬಾ ರುಚಿಯಾದ ಗೊಜ್ಜು ಅಲ್ವಾ? ಗೊಜ್ಜು ಮಾಡೋದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಬನ್ನಿ ನೋಡೋಣ.

ಅನಾನಸ್ ಗೊಜ್ಜು:

ಬೇಕಾಗುವ ಸಾಮಗ್ರಿಗಳು:

ಅನಾನಸ್ ಹೋಳುಗಳು, 2 ಚಮಚ ಕಡ್ಲೆಬೇಳೆ, 3 ಚಮಚ ಉದ್ದಿನಬೇಳೆ, ಚಿಟಿಕೆ ಸಾಸಿವೆ, ಒಣಮೆಣಸಿನಕಾಯಿ, ಕರಿಬೇವು, ಎಣ್ಣೆ, ಇಂಗು, 4 ಕಾಳು ಕುತ್ತೂಂಬರಿ ಬೀಜ(ದನಿಯಾ) ಹಾಗೂ ಕಾಲು ಚಮಚ ಮೆಂತ್ಯ.

ಮಾಡುವ ಬಗೆ:

ಅನಾನಸ್ಸನ್ನು ಹೋಳುಗಳನ್ನಾಗಿ ಮಾಡಿಕೊಳ್ಳಿ. ಆನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಓಣಮೆಣಸಿನಕಾಯಿ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡ ನಂತರ ಹೆಚ್ಚಿದ ಹೊಳುಗಳನ್ನು ಹಾಗೂ ನೀರು, ಉಪ್ಪು, ಬೆಲ್ಲ ಹಾಕಿ ಬೇಯಿಸಿಕೊಳ್ಳಿ. ಆನಂತರ ಬಾಣಲೆಯಲ್ಲಿ ಎಣ್ಣೆ , ಒಣಮೆಣಸಿನಕಾಯಿ, 3 ಚಮಚ ಉದ್ದಿನಬೇಳೆ, 2 ಚಮಚ ಕಡ್ಲೆಬೇಳೆ, ಚಿಟಿಕೆ ಸಾಸಿವೆ, ಕಾಲು ಚಮಚ ಮೆಂತ್ಯ, 4 ಕಾಳು ಕುತ್ತೂಂಬರಿ ಬೀಜ(ದನಿಯಾ) ಹಾಗೂ ಇಂಗು ಹಾಕಿ ಹುರಿದ ನಂತರ ಕಾಯಿ ತುರಿಯನ್ನು ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಸಾಲವನ್ನು ಬೇಯಿಸಿದ ಹೋಳುಗಳ ಜೊತೆ ಹಾಕಿ ಕುದಿಸಿಕೊಳ್ಳಿ. ತಯಾರಿಸಿದ ಗೊಜ್ಜನ್ನು ಅನ್ನದೊಂದಿಗೆ ಇಲ್ಲವೇ ಚಪಾತಿಯೊಂದಿಗೆ ತಿನ್ನಲು ನೀಡಿ.

(ಚಿತ್ರಸೆಲೆ: nectarcafe)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: