ಕಸವನ್ನು ಎತ್ತುವ ನೀರ‍್ಗಾಲಿ

ವಿವೇಕ್ ಶಂಕರ್.

ನಮಗೆಲ್ಲ ಗೊತ್ತಿರುವಂತೆ ಹಲವು ಕೆರೆಗಳಲ್ಲಿ ಇಲ್ಲವೇ ರೇವುಗಳಲ್ಲಿ (harbour) ನೀರಿನ ಮೇಲ್ಮಯ್ಯಲ್ಲಿ ಕಸ ತೇಲಾಡುತ್ತಿರುತ್ತದೆ. ಇದು ತುಂಬಾ ತೊಂದರೆಯನ್ನು ನೀಡುತ್ತದೆ ಮತ್ತು ಇದನ್ನು ತೆಗೆಯುವುದು  ತುಂಬಾ ಸಿಕ್ಕಲಾದ ಕೆಲಸ.

ಆದರೆ ಇತ್ತೀಚೆಗೆ ಬಾಲ್ಟಿಮೋರಿನ ಒಳ ರೇವಿನಲ್ಲಿ ಈ ಕೆಲಸ ಸುಳುವಾಗಿಸಲು ಒಂದು ನೀರ‍್ಗಾಲಿಯನ್ನು ಬಳಸಲು ತೀರ‍್ಮಾನಿಸಿದ್ದಾರೆ. ಈ ನೀರ‍್ಗಾಲಿಯೂ ನೀರಿನ ಹರಿವು ಮತ್ತು ನೇಸರದ ಕಸುವಿನ ಮೇಲೆ ಓಡುತ್ತದೆ.

water-wheel

ಮೇಲಿನ ತಿಟ್ಟದಲ್ಲಿ ನೀರ‍್ಗಾಲಿಯ ಬಾಗಗಳು ಕಾಣುತ್ತವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ,

A – ನೀರ‍್ಗಾಲಿಯ ತೊಲೆಯು (boom) ಕಸವನ್ನು ಒಯ್ಯುಕಕ್ಕೆ ಕಳುಹಿಸುತ್ತದೆ.

B – ಕುಂಟೆ ಏರ‍್ಪಾಟು (rake system) ಕಸವನ್ನು ಮುರಿದು ಸಣ್ಣದಾಗಿ ಮಾಡುತ್ತದೆ.

C – ಒಯ್ಯುಕದ ಪಟ್ಟಿ (conveyor belt) ಕಸವನ್ನು ಕಸದತೊಟ್ಟಿಗೆ ಕಳುಹಿಸುತ್ತದೆ.

D – ಕಸದತೊಟ್ಟಿಯು (dumpster) ಕಸವನ್ನು ಕೂಡಿಡುತ್ತದೆ, ಈ ಕಸವನ್ನು ಆಮೇಲೆ ಬೇರೆಡೆ ಸಾಗಿಸಲಾಗುತ್ತದೆ.

E – ಗಾಲಿಯು ಒಯ್ಯುಕದ ಪಟ್ಟಿಯನ್ನು ತಿರುಗಿಸುತ್ತದೆ.

F – ನೇಸರ ಪಟ್ಟಿಯು (solar panel) ಬೇಕಾದ ಕಸುವನ್ನು ಒದಗಿಸುತ್ತದೆ.

ನೀರಿನಲ್ಲಿ ತೇಲಾಡುವ ಕಸದ ತೊಂದರೆಯನ್ನು ಬಗೆಹರಿಸಲು ನೇಸರ ಕಸುವಿನಿಂದ ನಡೆಯುವ ಈ ಸಲಕರಣೆಯನ್ನು ಎಲ್ಲೆಡೆ ಅಳವಡಿಸಿದರೆ ಒಳಿತಲ್ಲವೇ?

(ತಿಟ್ಟದ ಮತ್ತು ಒಸಗೆಯ ಸೆಲೆ: popsci)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: