ನಯ್ಜೀರಿಯಾದ ಎಣ್ಣೆ ಸೆಲೆಗಳು – ಬೆಂಗಳೂರಿನ ನೆರವಿನ ವಲಯಗಳು

– ವಲ್ಲೀಶ್ ಕುಮಾರ್.

oil-in-nigeria_wide-5b764a903f5a39803e5d77a791ea64a08ad843bb

ರಾಬಿನ್ ಬ್ರೂಸ್ – ಬ್ರಿಟನಿನ ಒಬ್ಬ ಕಲಿಕೆಯರಿಗರು. ಇವರು ನಯ್ಜೀರಿಯಾ ನಾಡಿನ ರಾಜದಾನಿಯಾದ ಅಬೂಜಾನಲ್ಲಿ ಮುಂದಿನ ತಲೆಮಾರಿಗೆ ಗುಣಮಟ್ಟದ ಕಲಿಕೆ ಒದಗಿಸುವ ಉದ್ದೇಶದಿಂದ ಹೊರಟಿರುವ “ಅಬೂಜ ಪ್ರಿಪರೇಟರಿ ಸ್ಕೂಲ್” ನ ಮೇಲುಗರಾಗಿದ್ದಾರೆ. ಈಗಿನ ನಯ್ಜೀರಿಯಾದ ಕಲಿಕಾ ಪದ್ದತಿಯ ಬಗ್ಗೆ ಅವರು ಈ ರೀತಿ ಹೇಳಿದ್ದಾರೆ :

“I find it personally saddening that parents are neglecting their mother-tongue; all parents want their children to learn English first, but studies have shown that it is best for a child to learn the mother-tongue in the formative years as it would help his educational development in the future. All children learn to speak English when they grow up, so it is not right to force them to learn it early; I personally find this saddening.”

ಮೇಲಿನ ಅವರ ಮಾತು ಹೀಗಿದೆ : “ಇಲ್ಲಿನ ಮಂದಿ ತಮ್ಮ ತಾಯ್ನುಡಿಯನ್ನು ಕಡೆಗಣಿಸುತ್ತಿರುವುದು ನನಗೆ ಬೇಸರ ತಂದಿದೆ; ಎಲ್ಲರೂ ತಮ್ಮ ಮಕ್ಕಳಿಗೆ ಇಂಗ್ಲೀಶ್ ಕಲಿಸುವ ಅವಸರದಲ್ಲಿದ್ದಾರೆ. ಹಲವಾರು ಅರಕೆಗಳ ಪ್ರಕಾರ ಮಕ್ಕಳು ಮೊದಲ ಹಂತದಲ್ಲಿ ತಮ್ಮ ತಾಯ್ನುಡಿಯನ್ನು ಕಲಿಯಬೇಕು. ಅದರಿಂದ ಅವರ ಕಲಿಕೆಗೆ ನೆರವಾಗುತ್ತದೆ. ಎಲ್ಲಾ ಮಕ್ಕಳೂ ದೊಡ್ಡವರಾದಂತೆ ಇಂಗ್ಲೀಶ್ ಕಲಿಯುತ್ತಾರೆ, ಎಳವೆಯಿಂದಲೇ ಒತ್ತಾಯವಾಗಿ ಅವರಿಗೆ ಇಂಗ್ಲೀಶ್ ಕಲಿಸುತ್ತಿರುವುದು ಸರಿಯಲ್ಲ.”

Bruce, who is the head of Abuja Preparatory School, stated that research had shown that children who learn their mother-tongue in their formative years perform better educationally, and are still able to grasp English language as they grow up.

ಮೇಲಿನ ಮಾತು ಹೀಗಿದೆ : “ಹಲವಾರು ಅರಕೆಗಳ ಸೆಲೆಯಂತೆ ತಾಯ್ನುಡಿಯನ್ನು ಚನ್ನಾಗಿ ಕಲಿತ ಮಕ್ಕಳು ಕಲಿಕೆಯಲ್ಲೂ ಮುಂದೆ ಇರುತ್ತಾರೆ ಅಲ್ಲದೆ ಇಂಗ್ಲೀಶ್ ನುಡಿಯನ್ನೂ ಚನ್ನಾಗಿ ಕಲಿಯುತ್ತಾರೆ.”

ನಯ್ಜೀರಿಯಾದಲ್ಲಿ ಎಣ್ಣೆಯ ಸೆಲೆಗಳು ಹೆಚ್ಚಿನ ಎಣಿಕೆಯಲ್ಲಿದ್ದು ಆ ನಾಡಿನ ಹೆಚ್ಚಿನ ಹುಟ್ಟುವಳಿ ಇದರಿಂದಲೇ ಆಗಿದೆ. ಆಪ್ರೀಕಾದಲ್ಲಿ ಹುಟ್ಟುವಳಿಯಲ್ಲಿ ನಯ್ಜೀರಿಯಾ ಎರಡನೇ ಮಟ್ಟದಲ್ಲಿದೆ. ಆದರೆ ಕೇವಲ ಇದೊಂದೇ ಉದ್ದಿಮೆಯಿಂದ ನಾಡಿನ ಏಳ್ಗೆ ಆಗದು; ಏಕೆಂದರೆ ಎಣ್ಣೆಯ ಸೆಲೆಗಳು ಯಾವಾಗಲೂ ಇರುವುದಿಲ್ಲ – ಒಂದಲ್ಲ ಒಂದು ದಿನ ಬತ್ತಿ ಹೋಗುತ್ತದೆ. ಆಗ ನಾಡಿನ ಬೆಳವಣಿಗೆಗೆ ಪೆಟ್ಟು ಬೀಳುತ್ತದೆ. ಹಾಗಾಗಿ ಕೇವಲ ಎಣ್ಣೆಯ ಸೆಲೆಗಳ ಮೇಲೆ ಒರಗದೇ, ಒಳ್ಳೆಯ ಗುಣಮಟ್ಟದ ಕಲಿಕೆಯನ್ನು ಕಟ್ಟಿಕೊಳ್ಳುವುದು ಮುಂದಿನ ತಲೆಮಾರಿಗೆ ನಾಡನ್ನು ಸಜ್ಜುಗೊಳಿಸುವ ಕೆಲಸವಾಗಿದೆ ಎಂದೂ ರಾಬಿನ್ ಹೇಳುತ್ತಾರೆ.

ನೂರಾರು ವರ‍್ಶಗಳ ಕಾಲ ಮರ ಕಡಿದು ಮಾರಿ ಜೀವನ ಸಾಗಿಸುತ್ತಿದ್ದ ಪಿನ್ಲ್ಯಾಂಡ್ ನಾಡಿನ ಮಂದಿ ಇದೇ ರೀತಿ ಎಚ್ಚರ ವಹಿಸಿ ಗುಣಮಟ್ಟದ ಕಲಿಕೆ ಕಟ್ಟಲು ಮುಂದಾದ ಕಾರಣ ನೋಕಿಯಾದಂತಹ ಅಲೆಯುಲಿ ತಯಾರಿಸುವಲ್ಲಿ ಮೊದಲಿಗರಾದರು ಎಂಬುದನ್ನು ಇಲ್ಲಿ ನೆನೆಯಬಹುದು.

ಇವರಿಂದ ನಾವು ಏನು ಕಲಿಯಬಹುದು?

ಯಾವುದೇ ನಾಡಿನ ಹಣಕಾಸಿನ ಏಳ್ಗೆ ಅಲ್ಲಿ ಹುಟ್ಟುವ ಉದ್ದಿಮೆಗಳಿಂದ ಆಗುತ್ತದೆ. ಈ ರೀತಿ ಒಳ್ಳೆಯ ಉದ್ದಿಮೆಗಳು ಹುಟ್ಟಲು ಆ ನಾಡಿನಲ್ಲಿ ಚುರುಕಾದ ಮತ್ತು ನುರಿತ ಮಾನವ ಸಂಪನ್ಮೂಲ ಬೇಕಾಗುತ್ತದೆ. ಒಳ್ಳೆಯ ಮಾನವ ಸಂಪನ್ಮೂಲವನ್ನು ಹುಟ್ಟು ಹಾಕಲು ಒಳ್ಳೆಯ ಕಲಿಕೆ ವ್ಯವಸ್ತೆ ಕಟ್ಟಬೇಕಾಗುತ್ತದೆ.

ಬೆಂಗಳೂರು ಸೇರಿದಂತೆ ಹಲವೆಡೆ ಈಗ ಹೆಚ್ಚಾಗಿ ಇಂಗ್ಲೀಶ್ ಮಾದ್ಯಮ ಶಾಲೆಗಳು ತಲೆಯೆತ್ತುತ್ತಿದ್ದು ತಾಯ್ತಂದೆಯರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾದ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದಕ್ಕೆ ಕಾರಣ “ಇಂಗ್ಲೀಶಿನಲ್ಲಿ ಕಲಿತರೆ ಉದ್ಯೋಗದ ಅವಕಾಶಗಳು ಹೆಚ್ಚು” ಅನ್ನುವ ಅವರ ನಂಬಿಕೆ. ತೊಂಬತ್ತರ ದಶಕದ ಕೊನೆಯಿಂದ ಈವರೆಗೆ ಸಾವಿರಾರು ಮಂದಿಗೆ ಹೆಚ್ಚಿನ ದುಡಿಮೆಯ ಕೆಲಸಗಳು ಸಿಕ್ಕಿರುವುದು ಇಂಗ್ಲೀಶ್ ನುಡಿಯಿಂದ ಎನ್ನುವುದು ಸುಳ್ಳಲ್ಲ. ಆದರೆ ಈ ಕೆಲಸಗಳು ಯಾವುವು? ನೆರವಿನ ವಲಯಕ್ಕೆ (ಸರ‍್ವಿಸ್ ಇಂಡಸ್ಟ್ರಿಗೆ) ಸೇರಿದಂತವು. ಈ ವಲಯದ ಕೆಲಸಗಳು ಸಣ್ಣ ಪುಟ್ಟ ತಾಂತ್ರಿಕ ನೆರವಿಗೋ, ,ಸಲಹೆಗೋ, ಸಾಲದ ಚೀಟಿ (ಕ್ರೆಡಿಟ್ ಕಾರ‍್ಡ್) ಮಾರುವುದಕ್ಕೋ ಮೀಸಲಾಗಿರುತ್ತದೆ. ಇಲ್ಲಿ ಅರಿಮೆಯ ಏಳ್ಗೆಗಿಂತ ಕೊಳ್ಳುಗರೊಂದಿಗೆ ನಂಟು ಕಾಯುವ (Customer Relationship Management) ಕೆಲಸಕ್ಕೆ ಹೆಚ್ಚು ಇಂಬು; ಹೊಸ ಅರಿಮೆಯ ಅರಕೆಗೆ ಹೆಚ್ಚಿನ ಇಂಬು ಇರುವುದಿಲ್ಲ.

ಅಲ್ಲದೆ ಅಮೆರಿಕನ್ನರು ಈ ಕೆಲಸಕ್ಕೆ ನಮ್ಮ ನಾಡಿನ ಮಂದಿಯನ್ನು ಆರಿಸಿರುವುದೇ ಇಲ್ಲಿ ಕಡಿಮೆ ಸಂಬಳಕ್ಕೆ ಕೆಲಸದವರು ಸಿಗುವರೆಂಬ ಕಾರಣಕ್ಕೆ. ನಾಳೆ ಬೇರೊಂದು ನಾಡು ನಮಗಿಂತ ಕಡಿಮೆ ಸಂಬಳಕ್ಕೆ ದುಡಿಯಲು ಮುಂದಾದರೆ ಆಗ ಈ ಎಲ್ಲಾ ಕಂಪೆನಿಗಳು ಆ ನಾಡಿಗೆ ಹೋಗುತ್ತವೆ. ಕೇವಲ ಇಂಗ್ಲೀಶ್ ನಂಬಿದ ಹುಡುಗರು ಬೇರೆಯ ಕೆಲಸದಲ್ಲಿ ತೊಡಗಲು ಕಶ್ಟವಾಗುತ್ತದೆ, ಅಲ್ಲದೆ ದುಡಿಮೆಯೂ ಕಡಿಮೆಯಾಗುತ್ತದೆ. 2001 ಮತ್ತು 2008 ರಲ್ಲಿ ಪಡುವಣ ದೇಶಗಳಲ್ಲಿ ಆದ ಏರಿಳಿತದಿಂದ ನಮ್ಮಲ್ಲಿ ಎಶ್ಟೋ ಮಂದಿ ಕೆಲಸ ಕಳೆದುಕೊಂಡಿದ್ದನ್ನು ನಾವೆಲ್ಲಾ ಬಲ್ಲೆವು. ಈ ರೀತಿ ಬೇರೆ ನಾಡುಗಳ ಮೇಲೆ ಒರಗಿ ನಿಂತರೆ ನಮ್ಮ ನೆಲೆ ಎಂದೂ ಗಟ್ಟಿಯಾಗದು. ಕೇವಲ ಹೊರ ನಾಡುಗಳಿಗೆ ನೆರವನ್ನು ಒದಗಿಸುವ ಕೆಲಸಗಳಿಂದ ನಮ್ಮ ನಾಡಿನ ಏಳ್ಗೆ ಆಗದು.

ನಮ್ಮ ನಾಡಿನಲ್ಲಿ ಉಂಟುಮಾಡುವಿಕೆಯ ಉದ್ದಿಮೆಗಳು (manufacturing sector) ಹೆಚ್ಚು ಬೆಳೆಯಬೇಕು. ನಮ್ಮ ನಾಡಿನ ಮಕ್ಕಳು ಅರಿಮೆಯಲ್ಲಿ ಮುನ್ನುಗ್ಗಿ ಹೊಸ ಅರಕೆಗಳನ್ನು ಮಾಡಬೇಕು. ಜರ‍್ಮನ್ನರನ್ನು ಮೀರಿಸುವ ಕಾರುಗಳನ್ನು ಕಂಡು ಹಿಡಿಯಬೇಕು. ಕೊರಿಯನ್ನರನ್ನು ಮೀರಿಸುವ ಮಿನ್ಕೆಯಂಕೆಗಳನ್ನು ತಯಾರಿಸಬೇಕು. ಆ ರೀತಿಯ ಉದ್ದಿಮೆಗಳಿಗೆ ಗುಣಮಟ್ಟದ, ಅರಿಮೆಯಲ್ಲಿ ಮುಂದಿರುವ ಮಾನವ ಸಂಪನ್ಮೂಲ ಬೇಕು. ಅದಕ್ಕೆ ಗುಣಮಟ್ಟದ ಕಲಿಕೆ ಆಗಬೇಕು. ವೈಗ್ನಾನಿಕ ಸೆಲೆಯಂತೆ ನಮ್ಮ ನಾಡಿನಲ್ಲಿಯೂ ಒಳ್ಳೆಯ ಗುಣಮಟ್ಟದ ತಾಯ್ನುಡಿ ಕಲಿಕೆ ಆಗಬೇಕು. ಈ ನಿಟ್ಟಿನಲ್ಲಿ ಸರ‍್ಕಾರದ ಹೊಣೆಗಾರಿಕೆ ಎಶ್ಟಿದೆಯೋ ತಾಯ್ತಂದೆಯರ ಹೊಣೆಯೂ ಅಶ್ಟೇ ಇದೆ.

(ಚಿತ್ರ ಸೆಲೆ: wbur)
(ಮಾಹಿತಿ ಸೆಲೆ: news.nom.co)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: