ದೂರು

ಸಿದ್ದೇಗವ್ಡ

healthy-heart

ನನ್ನ ಮೇಲೆ
ನಿನಗೆ
ಅಶ್ಟೊಂದು ಪ್ರೀತಿ ಇದ್ದಿದ್ದರೆ
ನೀನೇ
ಹೇಳಬಹುದಿತ್ತಲ್ಲ ಮೊದಲು

ನನ್ನ ಹ್ರುದಯವ ನಾನು
ಹಗಲಿರುಳೂ ಹಿಂಸಿಸಿ
ಅಡ್ಡ ಬಂದೆಲ್ಲಾ ಬಾವಗಳನ್ನು
ದಂಡಿಸಿ
ಗೊಂದಲದೊಳಗೊಂದು ವರುಶ
ಬಾದಿಸಿದ
ಕನಸುಗಳನ್ನೆಲ್ಲಾ ಬಂದಿಸಿ
ನಿದ್ದೆ,ನೆಮ್ಮದಿಗಳಿಲ್ಲದೆ ಕೊನೆಗೆ
ದಯ್ರ್ಯ ಮಾಡಿದ ಮೇಲೆ
“ನಾನೂ ಪ್ರೀತಿಸುತ್ತಿದ್ದೆ”
ಅನ್ನುವುದರ ಬದಲು

(ಚಿತ್ರ: interestingmarketingtidbits.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: