ಚೂಟಿಯಾದ ದೂರತೋರುಕ

 ವಿವೇಕ್ ಶಂಕರ್.

’ಮಂಗಳ ಇಂದು ನೆಲಕ್ಕೆ ಹತ್ತಿರದಲ್ಲಿ ಸಾಗಲಿದೆ’, ‘ನಾಳೆ ಹೊಳಪಿನ ಅರಿಲುಗಳ (stars) ಸಾಲನ್ನು ನೋಡಲು ಮರೆಯದಿರಿ’,  ’ಚಂದಿರನ ಮೇಲ್ಮಯ್ ಇಂದು ಎಂದಿಗಿಂತ ಚಂದವಾಗಿ ಕಾಣಲಿದೆ’, ಹೀಗೆ ಹಲವು ಬಾನರಿಮೆಯ ಬಿಸಿಸುದ್ದಿಗಳು ಆಗಾಗ ಕೇಳಿಬರುತ್ತಿರುತ್ತವೆ. ಕುತೂಹಲದಿಂದ ಮುಗಿಲೆಡೆಗೆ ಕಣ್ಣು ಹಾಯಿಸುವ ನಮಗೆ ತೆರೆದ ಬಾನಲ್ಲಿ ಯಾವ ಕಡೆ ನೋಡಬೇಕು ಅನ್ನುವುದೇ ದೊಡ್ಡ ಗೊಂದಲವಲ್ಲವೇ? ಇಗೋ ಇಲ್ಲಿದೆ ಇದಕ್ಕೊಂದು ಚೂಟಿಯಾದ ಪರಿಹಾರ.

ಬಾನದೆರವಿನಲ್ಲಿ ಇಂತ ವಸ್ತು ಇಂತಲ್ಲಿದೆ ಎಂದು ಅರಿತುಕೊಂಡು ತಂತಾನೇ ಅಣಿಗೊಳ್ಳುವ ಚೂಟಿಯಾದ ದೂರತೋರುಕ (telescope) ಈಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Telescope

ಸೆಲೆಸ್ಟ್ರಾನ್ ಕಾಸ್ಮಾಸ್ 90 ಜಿ.ಟಿ (Celestron Cosmos 90 GT) ಎಂಬ ಹೆಸರಿನ ಈ ದೂರತೋರುಕ, ವಯ್-ಪಯ್ ಬಳಸಿ ಚೂಟಿಯುಲಿಯ ನೆರವಿನಿಂದ ಬಳಕೆದಾರರಿಗೆ ಬಾನದೆರವಿನ ವಸ್ತುವನ್ನು ಗುರುತು ಹಿಡಿದು ತೋರಿಸುತ್ತದೆ. ಬಳಕೆದಾರರು ಯಾವ ಬಾನದೆರವಿನ ವಸ್ತುವನ್ನು ನೋಡಲು ಬಯಸುತ್ತಾರೋ ಅದನ್ನು ಒಂದು ಬಳಕದ (apps) ನೆರವಿನಿಂದ ಆಯ್ಕೆ ಮಾಡಬಹುದು. ಸೆಲೆಸ್ಟ್ರಾನಿನ ತಿಳಿಹದಲ್ಲಿ (database) 1,20,000 ಬಾನದೆರವಿನ ವಸ್ತುಗಳ ಮಾಹಿತಿಯಿದ್ದು, ಬಳಕೆದಾರರು ಆಯ್ಕೆ ಮಾಡಿದ ಮೇಲೆ ಅದನ್ನು ತೋರಿಸುವ ಕೆಲಸವೇ ಸೆಲೆಸ್ಟ್ರಾನದು.

ಇನ್ಮೇಲೆ ಬಾನಂಗಳದಲ್ಲಿ ನಡೆಯುವ ಆಗುಹಗಳ ಬಗ್ಗೆ ಬಾನರಿಗರಶ್ಟೇ ಅಲ್ಲ ಸಾಮಾನ್ಯ ಮಂದಿಯೂ ಅರಿತುಕೊಳ್ಳಬಹುದು.

ಸೆಲೆಸ್ಟ್ರಾನ್ ಕಾಸ್ಮಾಸ್ 90 ಜಿ.ಟಿ ಕುರಿತು:

  • ದೂರತೋರುಕ ಕಿಂಡಿ: 3.5 ಇಂಚುಗಳು (ಹೆಬ್ಬೆರಳುಗಳು)
  • ಹೇರಾಗಿಸುವಿಕೆ (magnification): ದೊಡ್ಡ ಕಸುವಿನ ನೋಡುಕ (high power eyepiece): 91x
  • ಚಿಕ್ಕ ಕಸುವಿನ ನೋಡುಕ(low power eyepiece) : 3x
  • ಬಾನ ತಿಳಿಹಗಳು (astronomical database): 1,20,000 ವಸ್ತುಗಳು
  • ಬೆಲೆ: $400 (ಸುಮಾರು ರೂ 22,000)

(ಸುದ್ದಿ ಮತ್ತು ತಿಟ್ಟಸೆಲೆ: ww.popsci.com)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: