ಚುಟುಕಗಳು

ಅಮರ್ ಮೋಹನ್

1.
ಅವರಿವರ ನೋಡಿ ಅರಿವಾಗದೇ.
ಅರಿವಾದರೂ ಅರ‍್ತಯಿಸದೇ ಹೋಯಿತೇ…
ನೋಡಿದರೂ ನೋವು ತಿಳಿಯದೇ!
ತಿಳಿಯದೇ… ತಿಳಿಯಾಯಿತೇ…
ನರ ನಾಡಿಗಳು ನರಳಿವೇ..
ಅದು ಚಳಿಗಾಗೀಯೋ…
ಚಡಪಡಿಕೆಗಾಗೀಯೋ….. ತಿಳಿಯದಾಗಿದೆ!!

2.
ಕಾಣುವ ಕಾತರ ಕಂಗಳಲ್ಲಿದ್ದರೆ ಸಾಲದು.
ಮನದ ದೀವಿಗೆ ಬೆಳಗುತ್ತಿರಬೇಕು.

3.
ಮವ್ನವೆಂಬ ಆಯುದ ಇಶ್ಟು ತೀಕ್ಶ್ಣಎಂದು ತಿಳಿದದ್ದೆ ಆಕೆ ಮವ್ನವಾದಾಗ!
ಮವ್ನದಲ್ಲೂ ಮಂದಹಾಸ ಬೀರುವ ಕಣ್ ರೇಕೆಗಳು, ಆದರೆ ಚಾಟಿ ಏಟಿನ ಬಿರುಸು ಸೂಸುವ ನೋಟ!
ಆ ನೋಟ ಎದುರಿಸಲಾಗದೆ… ಮೇಲೆ ನೋಡಿದರೆ ಉರಿ ಬಿಸಿಲು!!

4.
ಮನಸ್ಸಿನ ಹಂಬಲದ ಕನಸು
ಮಂಜಿನಂತೆ ಕರಗಿ…
ಮರೆಯಾಯಿತು!!
ಈ ಮನಸ್ಸಿಗಿಲ್ಲವೆ ಮರುವಸಂತ!

5.
ಮನೋಹರ ನಿನ್ನ ನಯನ
ಅರಳುತಿರಲಿ ಹಾಗೆ ಪ್ರತಿದಿನ
ದ್ರುಶ್ಟಿಗೇ ದ್ರುಶ್ಟಿ ಬಿದ್ದಾತು ಜೋಪಾನ!!

6.
ನಾ ತಿರುಗಿ ನೋಡದೆ ಮಾಡಿದೆ ತಪ್ಪು..
ಆದಕೆ ಬಾರದ ಮನಸಿನ ಹೆಜ್ಜೆಯು ಏಕೆ!
ಕಾಯುವೆ ನಿನಗೆ ಎಂದೆಂದೂ
ಕಾಯಿಸಬೇಡ ಬಾರದೇ ನೀನು ಎಂದೆಂದೂ!

7.
ಚೂರಾದ ಹ್ರುದಯ ಜವರಾಯನತ್ತಾ ಜಾರುತಿರಲು…
ಅದ ಹಿಂದಿರುಗಿ ಸೆಳೆಯಲು ಜಂಗಮರಿಂದ ಸಾದ್ಯವೇ?
ಹಾಲಕ್ಕಿ ನುಡಿದರೂ… ಹಾಲಾಹಲ ಹಾಲಾದರೂ…
ಚಿತ್ರಿಸಿದ ಬಿಂದು… ಮತ್ತೆಂದೂ ಬವ್ಯವಾಗಲಾರದು !

8.
ಸಂತಸದ ಅಲೆಯೋ…
ಕಣ್ಣಿರೀನ ಮಳೆಯೋ…
ಒಟ್ಟಾರೇ…??
ಮನಸ್ಸು ನಗುವುದು… ಎಲ್ಲವೂ ಮವ್ನವಾದಾಗ !!!

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: