ಕಾಲ..!

ಮೇಗನಾ ಕೆ.ವಿ.

kaala
ಉರುಳುತಿಹುದು ಅವದಿ ,
ಎಲ್ಲಿದೆ ಕಾಲನಿಗೆ ಪರಿದಿ?
ಗೋಜಲಾಗಿಸಿ ಮುಂದೋಡುತಿದೆ
ಪ್ರಶ್ನೆ ನೂರುಂಟು ಮನದಿ !!!

ಆಶಿಸುವ ಮುನ್ನ
ಪಾಶಗಳು ಹಲವು!
ಕಾಲನ ಯೋಜನೆಯದಲ್ಲಿ
ನಾ
ಅಡಿಯಾಳು!!

ಹತ್ತಿ ಉರಿವ ಒಡಲಿಗೆ
ತತ್ವಜ್ನಾನ ತಂಪೆರೆದೀತೆ?
ಒಲವಿನ ಸಿಂಚನ
ಸಾಕಾದೀತು ..

ಗುಡುಗುವ ಮೋಡ
ಬೋರ್‍ಗರೆದು ಸುಮ್ಮನಾದೀತು ..
ಒಳಗಿರುವ ತಲ್ಲಣವ
ಬಗೆದು ಬಿಡಿಸಿಟ್ಟರೆ
ಪದಗಳೇ  ಸುರಿಮಳೆಯಾದೀತು!!

ಮಳೆ ಬಂದು ನಿಂತಂತೆ
ಸ್ತಬ್ದಗೊಂಡಿದೆ  ಮನದ ಬಯಲಿಂದು ..
ಮಂದಾರ ಪುಶ್ಪವು ಚಿಗುರಲು
ಸಜ್ಜಾಗಿದೆ, ಹಸಿರು ಹೆಚ್ಚಾಗಿದೆ
ಮುರಿದ ಕಾಲನ ಚಕ್ರ ಈಗ ಓಡಾಬೇಕಾಗಿದೆ!!

(ಚಿತ್ರ: ಮೇಗನಾ ಕೆ.ವಿ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: