ಶಾಸಕರ ವಿದೇಶ ಪ್ರವಾಸ ಒ೦ದು ವಿವೇಚನೆ

ಆನಂದ ಬಿದರಕುಂದಿ.

Vidhana-Sabha

ಮತ್ತೊಮ್ಮೆ ಶಾಸಕರ ಪ್ರವಾಸ ಸುದ್ದಿಯಲ್ಲಿದೆ. ಮಾದ್ಯಮಗಳಲ್ಲಿ ಅದರ ಬಗ್ಗೆ ವಿಸ್ತ್ರುತವಾಗಿ ಚರ‍್ಚೆಯಾಗುತ್ತಲೇ ಇದೆ. ಪದೆ ಪದೆ ಇದಕ್ಕೆ ಯಾಕೆ ಇಶ್ಟೊಂದು ವಿರೋದ ವ್ಯಕ್ತವಾಗುತ್ತಿದೆ? ಹಾಗಾದರೆ ಇದು ತಪ್ಪೆ? ಇದು ನಮ್ಮ ಶಾಸಕರಿಗೆ ಗೊತ್ತಿಲ್ವೆ? ಎಂಬ ಪ್ರಶ್ನೆಗಳೂ ಎದುರಾಗುತ್ತವೆ. ಅಬಿವ್ರುದ್ದಿ ಪರವಾದ ಯಾವುದೆ ಕೆಲಸ ಸ್ವಾಗತಾರ‍್ಹ. ಆದರೆ ಸದ್ಯದ ಪರಿಸ್ತಿತಿಯಲ್ಲಿ ಇದು ಎಶ್ಟು ಸರಿಯಾದದ್ದು ಎಂಬುದರ ಬಗ್ಗೆ ಮಾತ್ರ ನಮ್ಮ ತಕರಾರು.

ರಾಜ್ಯದಲ್ಲೇ ಅನೇಕ ಸಮಸ್ಯೆಗಳು ತುಂಬಿ ತುಳುಕುತ್ತಿರುವಾಗ ಇಂತಹ ಪ್ರವಾಸಗಳು ಸಾದಿಸುವುದಾದರೂ ಏನು? ಯಾವ ಸುಕಕ್ಕೆ ಈ ಪ್ರವಾಸ? ಇದು ನಯ್ತಿಕ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಈಗ ಸುಮಾರು ಏಳು ವರ‍್ಶಗಳ ಹಿಂದೆ ಉತ್ತರ ಕರ‍್ನಾಟಕದಲ್ಲಿ ಸಂಬವಿಸಿದ ಜಲ ಪ್ರಳಯದಲ್ಲಿ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ ಬಹಳಶ್ಟು ಜನಗಳಿಗೆ ಇನ್ನೂ ಸರಿಯಾದ ನೆಲೆಯಾಗಲಿ ಸೂರಾಗಲಿ ಸಿಕ್ಕಿಲ್ಲ. ಅಂದಿನ ಸರಕಾರದಲ್ಲಿದ್ದ ಮುಕ್ಯಮಂತ್ರಿಗಳ, ಜನರಿಂದ ದೇಣಿಗೆ ಸಂಗ್ರಹಿಸುವ ಕೆಲಸಕ್ಕೆ ಅಬ್ಬರದ ಪ್ರಚಾರವೇನೋ ಸಿಕ್ತು, ಬೇರೆ ಪಕ್ಶದವರು ನಾವೇನು ಕಮ್ಮಿ ಎಂದು ಅವರೂ ಹಾಗೆ ಮಾಡಿದರು. ಆದರೆ ಎಲ್ಲಾ ಅಬ್ಬರ, ಪ್ರಚಾರ ಅಲ್ಲಿಗೇ ಮುಗಿಯುತು. ಇನ್ನೂ ಆ ಜನರು ಯಾವ ಪರಿಹಾರವಿಲ್ಲದೆ ನರಳುತ್ತಿದ್ದಾರೆ.

ಸ್ತಳೀಯವಾಗಿ ಇಂತಹ ಅನೇಕ ಸಮಸ್ಯೆಗಳು ಇನ್ನೂ ಇರುವಾಗ ಶಾಸಕರ ವಿದೇಶ ಪ್ರವಾಸ ಜನರಲ್ಲಿ ಅಸಮಾದಾನ ಮೂಡಿಸುವುದು ಸಹಜ. ನಮ್ಮನ್ನಾಳುವವರು ನಮಗೆ ಒಳ್ಳೆಯದನ್ನು ಮಾಡುವುದರ ಬದಲು, ಇಂತಹ ಮೋಜು ಮಸ್ತಿಗಳಲ್ಲಿ ಅದಿಕಾರವದಿಯನ್ನು ಕಳೆದುಬಿಡುತ್ತಾರೆಂಬ ಬಾವನೆ ಮೂಡಿಬಿಡುತ್ತದೆ. ಇದು ನಮ್ಮ ಶಾಸಕರಿಗೆ ಗೊತ್ತಿಲ್ಲವೆಂದೇನಲ್ಲ. ಇದು ಗೊತ್ತಿದ್ದು ಪದೆ ಪದೆ ಮುಜುಗುರವನ್ನೇಕೆ ಎದುರಿಸಬೇಕು ಎಂಬುದೇ ದೊಡ್ಡ ಪ್ರಶ್ನೆ. ಇದಕ್ಕೆ ಒಂದು ಸರಿಯಾದ ನೀತಿ ನಿಯಮಾವಳಿಯನ್ನು ರೂಪಿಸಿದರೆ ಸಾಕು.

ಇನ್ನು, ವಿದೇಶ ಪ್ರವಾಸ ಮಾಡಿ ಅಲ್ಲಿ ಸಾದಿಸಿದ ಅಬಿವ್ರುದ್ದಿಯನ್ನು ಅಬ್ಯಾಸ ಮಾಡಿ, ಆ ಅಬಿವ್ರುದ್ದಿಯ ತಾಂತ್ರಿಕ ರೂಪುರೇಶೆಗಳನ್ನು ಇಲ್ಲಿ ಅಳವಡಿಸಿ, ಹೆಚ್ಚುಕಮ್ಮಿ ಅದೇ ತೆರನಾದ ಅಬಿವ್ರುದ್ದಿ ಸಾದಿಸುವ ಗುರಿ ಸರಕಾರದ್ದಾಗಿರಬಹುದು. ಇದು ಸರಿಯಾದದ್ದೆ, ಆದರೆ ಯಾವುದೋ ದೇಶ ತನ್ನ ಸ್ತಳೀಯ ಸಂಸ್ಕ್ರುತಿಗನುಗುಣವಾಗಿ ಒಂದು ಅಬಿವ್ರುದ್ದಿ ಮಾಡಿದೆಯೆಂದರೆ, ಆ ಮಟ್ಟದ ಅಬಿವ್ರುದ್ದಿ ನಮ್ಮ ಸ್ತಳೀಯತಗೆ ಹೇಗೆ ಸರಿಹೊಂದುತ್ತದೆ ಎಂದು ಮೊದಲು ಪರಾಮರ್‍ಶೆ ಮಾಡಬೇಕಾಗುತ್ತದೆ. ಮಾಹಿತಿ ತಂತ್ರಜ್ನಾನ ನಮ್ಮ ಮುಂದಿದೆ, ಯಾವುದೇ ಮಾಹಿತಿ ಬೇಕೆಂದರೂ ತಕ್ಶಣ ಸಿಗುತ್ತದೆ. ಎಲ್ಲಿ, ಏನು ಅಬಿವ್ರುದ್ದಿಯಾಗಬೇಕು ಎಂಬುದನ್ನು ಗಮನಿಸಿ, ಯಾವ ದೇಶ ಅದನ್ನು ಸಾದಿಸಿದೆ ಎಂದು ಗುರುತಿಸಿ ಅಲ್ಲಿನ ಸ್ತಳೀಯ ಆಡಳಿತ ಸಂಸ್ತೆಯನ್ನು ಸಂಪರ್‍ಕಿಸಬೇಕು. ಅಲ್ಲಿಂದ ಅಬಿವ್ರುದ್ದಿಗೆ ಪೂರಕವಾದ ಮಾಹಿತಿಯನ್ನು ಮೊದಲೆ ತರಿಸಿಕೊಂಡು ವಿಚಾರ ವಿಮರ್‍ಶೆ ಮಾಡಬೇಕು. ಅದು ನಮಗೆ ಸರಿ ಹೊಂದುವುದಾದರೆ ಅಲ್ಲಿಗೆ ಹೋಗಿ ವಿಚಾರವನ್ನು ಅಬ್ಯಾಸ ಮಾಡಿ ಅದನ್ನು ಇಲ್ಲಿ ಅಳವಡಿಸಬಹುದು. ಆಗ ಅದು ಸರಿಯಾದ ಕ್ರಮವೆಂದೆನಿಸಬಹುದು.

ಇತ್ತೀಚಿಗೆ ನಮ್ಮ ಶಾಸಕರೊಬ್ಬರು ನೀರಿನ ಸದ್ಬಳಕೆ ಬಗ್ಗೆ ಸರಿಯಾದ ವಿಚಾರ ತಿಳಿಯಲು ಇಸ್ರೆಲ್ ಗೆ ಹೋಗುತ್ತಿರುವುದಾಗಿ ಹೇಳಿದರು. ನಿಜ, ಇಂದು ರಾಜ್ಯ, ರಾಶ್ಟ್ರಗಳೆರೆಡರ ನೀರಿನ ಕೊರತೆ ಒಂದು ಸುಡುಸಮಸ್ಯೆ, ಇದರ ಬಗ್ಗೆ ಒಂದು ಕಾರ್‍ಯಕ್ರಮ ಹಮ್ಮಿಕೊಂಡು ಯಶಸನ್ನು ಸಾದಿಸಿದರೆ ಕಂಡಿತಾ ಶ್ಲಾಗನೀಯ. ಆದರೆ ಮೊದಲು ಇಲ್ಲಿನ ನೀರಿನ ಸಂಪನ್ಮೂಲಗಳ ಬಗ್ಗೆ ಯೋಚಿಸ ಬೇಕಾಗುತ್ತದೆ ಮೊದಲು ನದಿ, ಕೆರೆ-ಕುಂಟೆಗಳ ನಿರ‍್ವಹಣೆ ಬಗ್ಗೆ ಯೋಚಿಸಬೇಕು. ಅವುಗಳ ಹೂಳು ಎತ್ತುವಿಕೆ ಹಾಗು ರಿಯಲ್ ಎಸ್ಟೇಟ್ ಉದ್ದಿಮೆದಾರರು ಅವುಗಳನ್ನೇನಾದರು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಸರಿಪಡಿಸುವುದು ಮೊದಲು ಆಗಬೇಕಾಗಿರುವ ಕೆಲಸ, ಬಳಿಕ ನೀರಿನ ಸದ್ಬಳಕೆ ಬಗ್ಗೆ ಯೋಚಿಸಿದರೆ ಒಳ್ಳೆಯದಲ್ಲವೆ?

ಈ ಹಿಂದಿನ ಶಾಸಕರ ವಿದೇಶ ಪ್ರವಾಸದ ಬಗ್ಗೆ ನಮ್ಮ ಸರ್‍ಕಾರ ಒಂದು ನೋಟ ಹರಿಸಿದರೆ ತುಂಬಾ ಒಳ್ಳೆಯದು. ಅವರು ಕೊಟ್ಟ ವರದಿಯಲ್ಲಿ ಒಂದಿ‍ಶ್ಟಾದರು ಒಳ್ಳೆಯ ಅಂಶಗಳಿದ್ದರೆ ಅನುಶ್ಟಾನಕ್ಕೆ ಪ್ರಯತ್ನಿಸಬೇಕು, ಇಲ್ಲದೇ ಹೋದರೆ ಮತ್ತೊಂದು ಪ್ರವಾಸ ಕೂಡ ಹತ್ತರಲ್ಲಿ ಹನ್ನೊಂದು ಎಂಬಂತೆ ಆಗಿ ಬಿಡುತ್ತದೆ ಮತ್ತು ಸಾರ‍್ವಜನಿಕರ ಹಣ ಸುಮ್ಮನೆ ಪೋಲಾಗುತ್ತದೆ. ತುಂಬಿದ ಸಬೆಯಲ್ಲಿ ವೀರಾವೇಶದಿಂದ ಏನೇನೊ ಮಾತಾಡಿ, ಜನರಿಂದ ಚಪ್ಪಾಳೆ ಗಿಟ್ಟಿಸಿ, ಸುಮ್ಮನೆ ಮನೆಗೆ ಹೋಗಿಬಿಟ್ಟರೆ ಉತ್ತರನ ಪವ್ರುಶವಾಗುತ್ತದೆ. ಉತ್ತರ ಕುಮಾರ ಎನ್ನಿಸಿ ಕೊಳ್ಳುವ ಬದಲು ಒಳ್ಳೆಯ ಕೆಲಸ ಮಾಡಿ ಉತ್ತಮ ಕುಮಾರ ಎಂದು ಅನಿಸಿಕೊಳ್ಳ ಬೇಕೆಂಬುದೇ ಈ ಲೇಕನದ ಆಶಯ, ಅಶ್ಟೆ.

(ಚಿತ್ರ ಸೆಲೆ: newindiaexpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: