STAP ಅರಕೆ ತಂದ ವಿವಾದ

– ಸುಜಯೀಂದ್ರ ವೆಂ.ರಾ.

ಕಾಂಡಗೂಡುಗಳು (Stem cells), ಎಲ್ಲಾ ಬಗೆಯ ದೇಹದ ಗೂಡುಗಳನ್ನು ಉಂಟು ಮಾಡಲು ಬೇಕಾದ ಮೂಲ ಗೂಡುಗಳು. ಇವುಗಳಿಂದ ಯಾವುದೇ ಬಗೆಯ ದೇಹದ ಅಂಗಗಳನ್ನು ಮತ್ತೆ ಹುಟ್ಟಿಸಿ ಪಡೆಯಬಹುದಾಗಿದೆ. ಹೀಗೆ ಪಡೆದ ಆರೋಗ್ಯಕರವಾದ ಅಂಗಗಳನ್ನು ಬೇನೆಗೆ ಒಳಗಾದವರ ಅಂಗಗಳ ಬದಲಿಗೆ ಅಳವಡಿಸಬಹುದಾಗಿದೆ. ಇಂತಹ ಚಿಕಿತ್ಸೆಗಳಿಂದ ಬೇನಿಗರಿಗೆ ಹೊಸ ಜೀವ ತಂದುಕೊಡುವುದರ ಜೊತೆಗೆ ಅಯಸ್ಸು ಹೆಚ್ಚಿಸಬಹುದಾಗಿದೆ.

ಸಾಮಾನ್ಯವಾಗಿ ಕಾಂಡಗೂಡುಗಳಿಂದ ಬೇಕಾದ ದೇಹದ ಗೂಡುಗಳನ್ನು ತಯಾರಿಸಲು ಹೆಚ್ಚು ಹೊತ್ತು, ದಿನಗಳೇ ಬೇಕಾಗುತ್ತದೆ. ಕಾಂಡಗೂಡು(Stem cells)ಗಳಿಂದ ಬೇಕಾದ ಗೂಡುಗಳನ್ನು (cells) ಬೆಳೆಸಲು ಹಲವು ವಿದಾನಗಳನ್ನು(method) ಅಳವಡಿಸಿಕೊಳ್ಳಬೇಕಾಗುತ್ತದೆ. ಅವುಗಳಲ್ಲಿ,

1. ಬೇಕಾದ ಕಾಂಡಗೂಡುಗಳ ಕಲೆಹಾಕುವಿಕೆ (Collecting Samples of Stem Cells)
2. ಬರಡಾಗಿಸಿದ ವಾತಾವರಣ (Sterilized Environment)
3. ಬೆಳೆಸುವ ಮಾದ್ಯಮ ತಯಾರಿಸುವುದು (Developmental media preparation)
4. ಮಾದ್ಯಮಗಳಲ್ಲಿ ಬೆಳೆಸುವುದು (Developing in media)
5. ಹುರಿದುಂಬಿಸುವುದು (Stimulating)
6. ಪೀಳಿ (DNA) ಮಾರ‍್ಪಡಿಸುವುದು / ಮರುಹಮ್ಮುವುದು (reprogramming)
7. ಗೂಡು ಎಣಿಸುವುದು (Cell counting)
8. ಗೂಡುಗಳ ಅಯಸ್ಸು ತಿಳಿವುದು (knowing Age of cell )
9. ಪೀಳಿಸಿಕೊಂಡ ಗೂಡುಗಳ ನಕಲನ್ನು ಬೆಳೆಸುವುದು (Cloning reprogrammed cells)
10. ಬೇಕಾದ ದೇಹದ ಗೂಡುಗಳ ಅಂಗವನ್ನು ಪಡೆಯುವುದು (producing desired organ)

ಇವಾವುವು ಕಡಿಮೆ ಹೊತ್ತಿನಲ್ಲಿ ಮಾಡಲು ಆಗುವುದೇ ಇಲ್ಲ. ಹಾಗೆಯೆ ಇವೆಲ್ಲವನ್ನು ಮಾಡಲು ಮೊದಲು ಒಂದು ಸುಸಜ್ಜಿತ ಅರಕೆಮನೆ (Laboratory) ಬೇಕೇ ಬೇಕು. ಅದನ್ನು ಆರಂಬಿಸಲು ಸರಕಾರದ ಪರವಾನಗಿ ಮೊದಲು ಬೇಕು. ಅರಕೆಮನೆ ಕಟ್ಟಿದ ಮೇಲೆ ಅಲ್ಲಿ ನಡೆಸುವ ಕಾಂಡಗೂಡುಗಳ ಪ್ರಯೋಗ ಯಾವುದರ ಮೇಲೆ ನಡೆಯುತ್ತದೆ? ಅದರಿಂದ ಜನರಿಗೆ ಉಪಯೋಗವೇನು? ಅದಕ್ಕೆ ಸರಕಾರದ, ಸಾರ‍್ವಜನಿಕರ ಅಪ್ಪಣಿ ಇದೆಯೇ? ಎಂಬುದು ಮೊದಲು ತಿಳಿದು, ಅರಕೆಯ (research) ಮೆಟ್ಟಿಲುಗಳನ್ನು ಏರುವುದು ಒಳ್ಳೆಯದು.

ಈಗಾಗಲೇ ಇಂತಹ ಅರಕೆಮನೆಗಳು ವಿದೇಶಗಳಲ್ಲಿ ಅನೇಕ ಇವೆ. ನಮ್ಮ ದೇಶದಲ್ಲೂ ಇವೆ. ಅರಕೆಗಳು ನಡೆಯುತ್ತಲೂ ಇವೆ. ಅಲ್ಲಿ ಅನೇಕ ಜೀವ ಉಳಿಸುವ ಅರಕೆಗಳನ್ನು ಮಾಡಲಾಗಿದೆ. ಹಲವು ರೀತಿಗಳಲ್ಲಿ ಅರಕೆಗಳು ನಡೆದಿವೆ. ಹಲವು ಸುದಾರಣೆಗಳನ್ನು ಅರಕೆಯಲ್ಲಿ ಮಾಡಲಾಗಿದೆ.

ಇದೇ ನಿಟ್ಟಿನಲ್ಲಿ ಜಪಾನಿನಲ್ಲಿ ಕಾಂಡಗೂಡುಗಳ ಅರಕೆಯಲ್ಲಿ ಸುದಾರಣೆಗಳನ್ನು ತರುವ ಪ್ರಯತ್ನಗಳಾಗುತ್ತಲಿವೆ. ಅದರಲ್ಲಿ ರಿಕೆನ್ (Rikagaku Kenkyūsho) ಎಂಬ ಕಾಂಡಗೂಡು ಅರಕೆಯ ವಿಶ್ವವಿದ್ಯಾಲಯವೂ ಒಂದು. ಅಲ್ಲಿ ಉಸಿರು-ರಸಾಯನದರಿಮೆ(Biochemist)ಯಲ್ಲಿ ಸಂಶೋದನೆ ಮಾಡುತ್ತಿರುವ ಹರುಕೊ ಒಬೊಕಟ (Haruko Obokata) ಎಂಬುವರು ವಿಸ್ಮಯವೆನಿಸುವ ಒಂದು ವಿದಾನವನ್ನು ಕಂಡುಹಿಡಿದಿದ್ದಾರೆ.

ಅವರ ಈ ಸಂಶೋದನೆ ನೇಚರ್ ಎಂಬ ಅರಿಮೆ ಪತ್ರಿಕೆಯಲ್ಲಿ ಜನವರಿ 29, 2014 ರಂದು ಪ್ರಕಟವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಾಕಶ್ಟು ಚರ‍್ಚೆಯಾಗುತ್ತಿದೆ. ಪತ್ರಿಕೆಯಲ್ಲಿ ಅರಕೆಯ ಹಂತಗಳನ್ನು ವಿವರಿಸಲಾಗಿದೆ. ಹರುಕೊ ಒಬೊಕಟ ಅವರ ಪ್ರಕಾರ ಕಾಂಡಗೂಡುಗಳನ್ನು ಮನುಶ್ಯನ ಬ್ರೂಣವಿಲ್ಲದೆ (embryo) ಮಾಡಬಹುದಂತೆ.

stem-cell-harako-obokotaಮರುಹಮ್ಮುಗೆ(reprogramming)ಯಿಂದ ಹೊಸದಾಗಿ ಹುಟ್ಟಿದ ಇಲಿಗಳ ರಕ್ತದ ಗೂಡುಗಳನ್ನು(blood cells) ಮೆದುವಾದ ಆಮ್ಲದ (mildly acidic) ನೀರಿನಲ್ಲಿ 30 ನಿಮಶ ಮುಳುಗಿಸಿದರೆ ಸಾಕು, ಈ ಮೆದು ಆಮ್ಲದ ಚಳುಕನ್ನು(shock) ಪಡೆದ ರಕ್ತದ ಗೂಡುಗಳು ‘ಎಲ್ಲಬಲದ’ (pluripotent) ಇಲ್ಲವೇ ದೇಹದ ಯಾವುದೇ ಗೂಡುಗಳಾಗುವ ಕಾಂಡಗೂಡುಗಳಾಗಿ ಬದಲಾಗುತ್ತವೆಯಂತೆ.

ಹರುಕೊ ಒಬೊಕಟ ತಮ್ಮ ಅರಕೆ ಬಗ್ಗೆ ಹೀಗೆ ಹೇಳುತ್ತಾರೆ,

ಇದೊಂದು ವಿಸ್ಮಯವೇ ಸರಿ, ಒಂದು ಸಣ್ಣ ಗುರುತಿಸಬಲ್ಲ ಬದಲಾವಣೆಯೊಂದು ಹೊರಗಿನಿಂದ ಗೂಡುಗಳಿಗೆ ಚುರುಕು ಮುಟ್ಟಿಸಿದಾಗ ಆಗಿದೆ… ಅದಾಗಿದ್ದು ತುಂಬಾ ಆಕಸ್ಮಿಕ. ಈ ವಿದಾನದಲ್ಲಿ 30 ನಿಮಿಶ ಆಮ್ಲದ(acid) ನೀರಿನಲ್ಲಿ ಇಟ್ಟು ನಂತರ 5 ನಿಮಿಶ ನಡುಗಿರಕಿಯಲ್ಲಿ(centrifuge) ತಿರುಗಿಸಿದಾಗ, ನೂರಕ್ಕೆ 7% ರಿಂದ 9%ರಶ್ಟು ಮೂಲ ಗೂಡುಗಳನ್ನು ಸ್ಟ್ಯಾಪ್ ಗೂಡುಗಳಾಗಿ ಬದಲಾಯಿಸಿದೆ.

ಒಬೊಕಟರ ಪ್ರಕಾರ ಅರಕೆಯ ಹಂತಗಳು ಬಹಳ ಸರಳವಾಗಿವೆ. ಈ ವಿದಾನಕ್ಕೆ ಹುರಿದುಂಬಿಕೆಯಿಂದ ಚುರುಕುಗೊಳಿಸಿ ಪಡೆದ ಎಲ್ಲಬಲದ ಗೂಡುಗಳು (stimulus triggered acquisition of pluripotency, or STAP), ಕಿರಿದಾಗಿಸಿ ಇಂಗ್ಲಿಶನಲ್ಲಿ STAP ಎಂದು ಅವರು ಹೆಸರಿಟ್ಟಿದ್ದಾರೆ.

ಮೆಸಿಚ್ಯುಸೆಟ್ಸ್ ತಂತ್ರಗ್ನಾನ ವಿದ್ಯಾಲಯದ ರುಡಾಲ್ಪ್ ಜೀನಿಶ್ ಹೇಳುವುದೇನೆಂದರೆ,

ಒಂದು ಸರಿಯಾದ ವಾತಾವರಣದಲ್ಲಿ ಗೂಡುಗಳನ್ನು ಸರಿಯಾಗಿ ನಡೆಸಿಕೊಳ್ಳದಂತೆ(mistreat) ಮಾಡಿದರೆ ಅವು ಹಲವು ಬಗೆಯವಾಗುವ ಸ್ತಿತಿಗೆ ಹೋಗುವವೆ? ನಿಜವಾಗಲು ಮೆಚ್ಚುವಂತದ್ದು. ಹಾಗಾದರೆ ನೋಡೋಣ ಇವೆ ಮನುಶ್ಯನ ಗೂಡುಗಳ ಮೇಲೆ ಹೇಗೆ ಕೆಲಸ ಮಾಡುತ್ತವೆವೆಂದು ಹಾಗೇನೆ ಇವು ಮರುಕೆಲಸ ಮಾಡದಿರಲು ಯಾವುದೇ ಕಾರಣವಿಲ್ಲ ಕೂಡ.
ಬೇನಿಗರ ಸ್ವಂತ ಗೂಡುಗಳಿಂದ ತಯಾರಿಸಿದ ಅಂಗಗಳು ಹಲವು ಬಾರಿ ದೇಹದಿಂದ ವಿರೋದಿಸಲ್ಪಡುತ್ತವೆ.

ಬೇನಿಗರಲ್ಲಿನ ದೇಹದ ಹೋರಾಡುವ ವ್ಯವಸ್ತೆ (immune system) ಇದಕ್ಕೆ ಮುಕ್ಯ ಕಾರಣವಾಗಿದೆ. ಈ ಹೋರಾಡುವ ಬಲ ಹುಟ್ಟಿನಿಂದ ಎಲ್ಲರಿಗೂ ಇರುತ್ತದೆ, ಎಲ್ಲ ಉಸಿರಿಗಳಲ್ಲೂ ಇರುತ್ತೆ. ಹಾಗಾಗಿ ಅಂಗ ಬದಲಾಯಿಸಿಕೊಂಡ ಬೇನಿಗರು ತಮ್ಮ ಬದುಕಿಗೆ ಕುತ್ತು ತರುವ, ದೇಹದ ಹೋರಾಟ-ತಗ್ಗಿಸುವ (immune-suppressing) ಮದ್ದುಗಳನ್ನು ನುಂಗಿ, ಹೊಸ ಅಂಗಗಳನ್ನು ಒಗ್ಗಿಸಿಕೊಳ್ಳುವ ಹಳೇ ವಿದಾನ ಹಾಗೆ ಉಳಿದಿದೆ.

ಆದರೆ ಗುರಿ ಸಾದಿಸುವ ಕಾಂಡಗೂಡುಗಳ ಪಡೆಯುವ ವಿದಾನಗಳು ಬಹಳ ನಿದಾನಗತಿಯಲ್ಲಿವೆ. ಮನುಶ್ಯರ ಕಾಂಡಗೂಡುಗಳನ್ನು ಬ್ರೂಣದಿಂದ ಪಡೆಯುವುದು ಅನೇಕ ಜನರಲ್ಲಿ ವಿರೋದ ಹುಟ್ಟಿಸಿದಂತಾಗುತ್ತದೆ, ಕೆಲವು ದಾರ‍್ಮಿಕ ಗುಂಪುಗಳು ಇಂತಹ ಆಚರಣೆಗಳಿಗೆ ಕಡಿವಾಣ ಹಾಕಿದ್ದಾರೆ/ಬಳಕೆಯನ್ನು ತಡೆಹಿಡಿದಿದ್ದಾರೆ. ಅರಿಗರೂ ಕೂಡ ಪ್ರಾಯೋಗಿಕವಾಗಿ ವಯ್ದ್ಯಕೀಯ ಚಿಕಿತ್ಸೆಗಳಿಗೆ ಅವು ಅಶ್ಟು ಸರಿಯಲ್ಲ, ಅವು ಬೇಗನೇ ದೇಹದಿಂದ ವಿರೋದಿಸಲ್ಪಡುತ್ತವೆ ಎನ್ನುತ್ತಾರೆ.

stap-cellಮತ್ತೊಬ್ಬ ಅರಿಗರೆಂದರೆ ಡಾ. ಶಿನ್ಯಾ ಯಮನಕ ಎಂಬುವರು ಎಲ್ಲಬಲದ ಗೂಡು ಹುಟ್ಟಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಅದಕ್ಕಾಗಿ ಅವರಿಗೆ 2012ರಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಮರುಹಮ್ಮಿಕೊಳ್ಳುವ ಬಗೆ ಕೇವಲ ನೂರಕ್ಕೆ 1ರಶ್ಟು ಮಾತ್ರ ಗೂಡುಗಳ, ಪರಿಚಯಿಸಿದಿಂದಾದ ಎಲ್ಲಬ

ನಿಮಗೆ ಹಿಡಿಸಬಹುದಾದ ಬರಹಗಳು