ಟೊಮೆಟೊ ಸೂಪ್ ಮಾಡುವ ಬಗೆ

– ಕಲ್ಪನಾ ಹೆಗಡೆ.

tomato soop

 

ಟೊಮೆಟೊ ಸೂಪ್ ಮಳೆಗಾಲದಲ್ಲಿ ಹಾಗೂ ಚಳಿಚಳಿಯಲ್ಲಿ ಬಿಸಿ ಬಿಸಿಯಾಗಿ ಕುಡಿಯಲು ಹಿತವಾಗಿರತ್ತೆ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:

10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳಮೆಣಸಿನ ಪುಡಿ (10 ಕಾಳು), 2 ಚಮಚ ಮುಸುಕಿನ ಜೋಳದ ಪುಡಿ(Cornflour Powder), 1 ಚಮಚ ತುಪ್ಪ.

ಮಾಡುವ ಬಗೆ:

1. ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

2. ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆಮೇಲೆ ಅದನ್ನು ಜರಡಿಗೆ ಹಾಕಿ ಸೋಸಿರಿ.

3. ರಸಕ್ಕೆ ಸಕ್ಕರೆ, ಉಪ್ಪು,ಕಾಳಮೆಣಸಿನ ಪುಡಿ , ಮುಸುಕಿನ ಜೋಳದ ಪುಡಿ , ತುಪ್ಪ ಹಾಕಿ 5 ನಿಮಿಶ ಚೆನ್ನಾಗಿ ಕುದಿಸಿ.

4. ಆಮೇಲೆ ತಯಾರಿಸಿದ ಸೂಪನ್ನು ಕಪ್ ನಲ್ಲಿ ಹಾಕಿ.

5. ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಗೂ ಕಟ್ ಮಾಡಿದ ರಸ್ಕ್ ತುಂಡುಗಳನ್ನು ಹಾಕಿ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. jspradeep says:

    ೧೦ ಟೊಮೆಟೋದಿಂದ ಎಷ್ಟು ಕಪ್ ಸೂಪ್ ಆಗುತ್ತದೆ.

ಅನಿಸಿಕೆ ಬರೆಯಿರಿ: