ಬ್ಯಾಟಿಂಗ್ ಮಾಡದ ಸಚಿನ್

– ಕೆ.ಟಿ.ರಗು (ಕೆ.ಟಿ.ಆರ್)

sachin-tendulkar1_1335609571_460x460

ಸಚಿನ್ ತೆಂಡ್ಕೂಲರ್ ಬಾರತೀಯ ಕ್ರಿಕೆಟ್‍ನ ಜನಪ್ರಿಯ ದ್ರುವತಾರೆ. ಇವರು ಮಾಡಿರುವ ಅನೇಕ ವಿಶ್ವದಾಕಲೆಗಳನ್ನು ಗಮನಿಸಿ ಇವರಿಗೆ 2012ರಲ್ಲಿ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿ ಆಯ್ಕೆಮಾಡಲಾಯಿತು. ಅಂದು ಸಚಿನ್, ಇನ್ನು ಮುಂದೆ ಕ್ರೀಡೆಯ ಅಬಿವ್ರುದ್ದಿಗಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಬರವಸೆ ನೀಡಿದರು. ಆದರೆ ಇವರು ಇಲ್ಲಿಯವರೆಗೆ ಶೇ.3 ರಶ್ಟು ಮಾತ್ರ ಸಂಸತ್ತಿನ ಕಲಾಪಗಳಲ್ಲಿ ಬಾಗವಹಿಸಿದ್ದಾರೆ.

ಇವರು ಮೇಲ್ಮನೆಯಲ್ಲಿ ಯಾವ ಒಂದು ಚರ‍್ಚೆಯಲ್ಲಿಯೂ ಬಾಗವಹಿಸಲಿಲ್ಲ. ಕಳೆದ ವರುಶ ಒಂದೇ ಒಂದು ಅದಿವೇಶನದಲ್ಲೂ ಪಾಲ್ಗೋಳ್ಳದೇ ಹೊಸ ದಾಕಲೆಯನ್ನು ಬರೆದು ಟೀಕೆಗೆ ಗುರಿಯಾಗಿದ್ದಾರೆ. ಕ್ರಿಕೆಟ್ ನಿಂದ ನಿವ್ರುತ್ತಿ ಪಡೆದ ಬಳಿಕವಾದರೂ ಕ್ರೀಡೆಗೆ ಸಂಬಂದಿಸಿದ ವಿಶಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಾರೆ ಎನ್ನುವ ಹಲವರ ಆಶಯ ಸುಳ್ಳಾಗಿದೆ. ರಾಜಕೀಯದಲ್ಲಿ ಆಸಕ್ತಿಯಿಲ್ಲದ ಮೇಲೆ ಏಕೆ ಪ್ರಮಾಣ ವಚನ ಸ್ವೀಕರಿಸಬೇಕು? ಇಂತಹವರನ್ನು ಆಯ್ಕೆಮಾಡುವ ಬದಲಿಗೆ ಸಮಾಜಸೇವಾ ಮನೋಬಾವನೆ ಉಳ್ಳವರನ್ನು ಆರಿಸುವುದು ಉತ್ತಮ.

(ಚಿತ್ರ ಸೆಲೆ: indiatimes)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications